ನ್ಯೂಯಾರ್ಕ್, ಡಿ 26, ಉತ್ತರ
ಬುರ್ಕಿನಾ ಫಾಸೊದಲ್ಲಿ ಡಿಸೆಂಬರ್ 24ರಂದು ಅಪರಿಚಿತ ಬಂದೂಕುಧಾರಿಗಳು ನಡೆಸಿದ ಗುಂಡಿನ ದಾಳಿಯನ್ನು
ವಿಶ್ವಸಂಸ್ಥೆ ಮುಖ್ಯಸ್ಥ ಆಂಟೋನಿಯೊ ಗುಟೆರೆಸ್ ಖಂಡಿಸಿದ್ದಾರೆ.
ಗುಂಡಿನ ದಾಳಿಯಲ್ಲಿ 35 ನಾಗರಿಕರ ಪ್ರಾಣಹಾನಿಯಾಗಿದ್ದು,
ಈ ಬಗ್ಗೆ ಗುಟೆರೆಸ್ ಸಂತಾಪ ವ್ಯಕ್ತಪಡಿಸಿದ್ದಾರೆ.
"ವಿಶ್ವಸಂಸ್ಥೆ ಮುಖ್ಯಸ್ಥರು ಸಂತ್ರಸ್ತರ ಕುಟುಂಬಗಳಿಗೆ ತಮ್ಮ ಆಳವಾದ ಸಂತಾಪವನ್ನು
ವ್ಯಕ್ತಪಡಿಸುತ್ತಾರೆ ಮತ್ತು ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಬೇಕೆಂದು ಹಾರೈಸುತ್ತಾರೆ"
ಎಂದು ಪ್ರಧಾನ ಕಾರ್ಯದರ್ಶಿ ವಕ್ತಾರ ಸ್ಟೆಫೇನ್ ಡುಜಾರಿಕ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಉಗ್ರವಾದದ
ವಿರುದ್ಧ ಹೋರಾಡಲು ಬುರ್ಕಿನಾ ಫಾಸೊ ಸೇರಿದಂತೆ ಇತರೆಲ್ಲ ದೇಶಗಳಿಗೂ ಬೆಂಬಲ ನೀಡುವುದಾಗಿ ವಿಶ್ವಸಂಸ್ಥೆ ತಿಳಿಸಿದೆ.
ಬುರ್ಕಿನಾ ಫಾಸೊದ ಉತ್ತರ ಪ್ರಾಂತ್ಯದ ಸೌಮ್ನಲ್ಲಿ
ಭಯೋತ್ಪಾದಕ ದಾಳಿಯ ಪರಿಣಾಮವಾಗಿ ಕನಿಷ್ಠ 35 ನಾಗರಿಕರು, ಮುಖ್ಯವಾಗಿ ಮಹಿಳೆಯರು ಸಾವನ್ನಪ್ಪಿದ್ದಾರೆ
ಎಂದು ದೇಶದ ಅಧ್ಯಕ್ಷ ರೋಚ್ ಮಾರ್ಕ್ ಬುಧವಾರ ಹೇಳಿಕೆ ನೀಡಿದ್ದಾರೆ. ದಾಳಿಗೆ ಪ್ರತಿಕ್ರಿಯಿಸುವಾಗ,
ಮಿಲಿಟರಿ 80 ಉಗ್ರರನ್ನು ತಟಸ್ಥಗೊಳಿಸಲು ಮತ್ತು ಪ್ರಮುಖ ಮಿಲಿಟರಿ ಉಪಕರಣಗಳು ಮತ್ತು ವಾಹನಗಳನ್ನು
ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು. ಬುರ್ಕಿನಾ ಫಾಸೊ 2016 ರಿಂದ ಅಲ್-ಖೈದಾ ಮತ್ತು ಇಸ್ಲಾಮಿಕ್
ಸ್ಟೇಟ್ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿರುವ ಇಸ್ಲಾಮಿಸ್ಟ್ ಗುಂಪುಗಳ ಚಟುವಟಿಕೆಗಳಿಂದ
ಬಳಲುತ್ತಿದೆ.