ನಗರಸಭೆ ಲೇಕಪಾಲ ಮನೆ ಕಳುವು, ಪ್ರಕರಣ ದಾಖಲು ! ಪೋಲಿಸ್ ಇಲಾಖೆ ಕಾರ್ಯ ವೈಖರಿಗೆ ಸಾರ್ವಜನಿಕ ಅಸಮಾಧಾನ

Burglary at the house of the Municipal Accountant, case registered! Public discontent with the polic

ಲೋಕದರ್ಶನ ವರದಿ 

ನಗರಸಭೆ ಲೇಕಪಾಲ ಮನೆ ಕಳುವು, ಪ್ರಕರಣ ದಾಖಲು ! ಪೋಲಿಸ್ ಇಲಾಖೆ ಕಾರ್ಯ ವೈಖರಿಗೆ ಸಾರ್ವಜನಿಕ ಅಸಮಾಧಾನ  

ಮಹಾಲಿಂಗಪುರ 18: ಜಮಖಂಡಿ ನಗರಸಭೆ ಲೇಕಪಾಲ ಬಾಬುರಾವ ರಾಮಪ್ಪ. ಕಮತಗಿ ವಾಸವಿರುವ ಮನೆ ಕಳ್ಳತನವಾಗಿರುವ ಬಗ್ಗೆ ಮಹಾಲಿಂಗಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಇವರು ಮಹಾಲಿಂಗಪುರ ಪಟ್ಟಣದ ಬರಗಿ ಓಣಿಯಲ್ಲಿ ವಾಸವಾಗಿದ್ದು, ಕಾರ್ಯ ಕ್ಷೇತ್ರ ಜಮಖಂಡಿಯಾಗಿದೆ.ಈ ಮುಂಚೆ ಎರಡು ಬಾರಿ ಮಹಾಲಿಂಗಪುರ ಪುರಸಭೆ ಮುಖ್ಯಾಧಿಕಾರಿಯಾಗಿಯೂ ಕೆಲಸ ನಿರ್ವಹಿಸಿದ್ದಾರೆ. 

ಮಾರ್ಚ್‌ 16 ಮತ್ತು 17 ರ ತಡ ರಾತ್ರಿ ಕಳ್ಳರು ಇವರಿರುವ ಮನೆಯ ಮುಖ್ಯ ಬಾಗಿಲಿನ ಕೊಂಡಿ ಮುರಿದು ಮಲಗುವ ಕೋಣೆಯ ಬೀರುವಿ (ಟ್ರಜರಿ) ನಲ್ಲಿದ್ದ 2,45,000 70 ಗ್ರಾಮ ಮಂಗಳ ಸೂತ್ರ, 4, 55,000 130 ಗ್ರಾಮದ ವೆಂಕಿ, 2,27,500 65 ಗ್ರಾಮದ ಬಾಜು ಬಂದಿ, 70 ಸಾವಿರ 20 ಗ್ರಾಮ ಬ್ರಾಸ್ ಲೇಟ್, 52,500 15 ಗ್ರಾಮ ಉಂಗುರ ಹೀಗೆ ಒಟ್ಟು 300 ಗ್ರಾಮ 10,50,000/- ಬೆಲೆ ಬಾಳುವ ಬಂಗಾರ ಕಳುವಾಗಿದೆ ಎಂದು ದೂರುದಾರರು ಪ್ರಕರಣ ದಾಖಲಿಸಿದ್ದಾರೆ. 

ಸ್ಥಳಕ್ಕೆ ಪೋಲೀಸ್ ಅಧಿಕಾರಿಗಳಾದ ಹೆಚ್ಚುವರಿ ಎಸ್ ಪಿ ಮಹಾಂತೇಶ ಜಿದ್ದಿ, ಸಿಪಿಆಯ್ ಸಂಜೀವ ಬಳಿಗಾರ ಭೇಟಿ ನೀಡಿ, ಸ್ಥಳೀಯ ಠಾಣೆ ಕಿರಣ ಸತ್ತಿಗೇರಿ ಮತ್ತು ಅಪರಾಧ ವಿಭಾಗದ ಪಿಎ??? ಮಧು ಎಲ್ ಅವರು ಪ್ರಕರಣ ಬೇಧಿಸಲು ತನಿಖೆ ತೀವ್ರಗೊಳಿಸಿದ್ದಾರೆ. 

ಸಾರ್ವಜನಿಕರ ಅಸಮಾಧಾನ : 

ದಶಕದಿಂದೀಚೆಗೆ ಇಂತಹ ಅನೇಕ ಪ್ರಕರಣಗಳು ನಡೆದಿವೆ. ಹೀಗಿದ್ದಾಗಲೂ ರಾತ್ರಿ ವೇಳೆ ಸೂಕ್ತ ಬಂದೋಬಸ್ತ್‌ ಕಲ್ಪಿಸಿ ಅಪರಾಧ ಪ್ರಕರಣಗಳಿಗೆ ಕಡಿವಾಣ ಹಾಕುವಲ್ಲಿ ಪೋಲಿಸ್ ಇಲಾಖೆ ಸಂಪೂರ್ಣ ವಿಫಲವಾಗಿದೆ ಎಂದು ಉದಾಹರಣೆಗಳ ಸಹಿತವಾಗಿ ಸಾರ್ವಜನಿಕರು ಗಂಭೀರ ಆರೋಪ ಮಾಡಿ, ಇಲ್ಲಿಯವರೆಗೆ ಇವರು ಎಷ್ಟು ಆರೋಪಿಗಳನ್ನು ಬಂಧಿಸಿ ಕೋರ್ಟ್‌ ಗೆ ಕಳಿಸಿದ್ದಾರೆ ಎಂದು ಮರು ಪ್ರಶ್ನೆ ಮಾಡುತ್ತಿದ್ದಾರೆ. ಇವರು ಜನ ಸ್ನೇಹಿಯಾಗುವುದಕ್ಕಿಂತ ಮುಂಚೆ ಕ್ರಿಮಿನಲ್ ಗಳಿಗೆ ಸಿಂಹ ಸ್ವಪ್ನ ರಾಗಬೇಕೆಂದು ಪೋಲೀಸ್ ಇಲಾಖೆಗೆ ಸಲಹೆ ನೀಡುತ್ತಿದ್ದಾರೆ. 

ಕಣ್ಮುಚ್ಚಿ ಕುಳಿತ ಸಿಸಿ ಕ್ಯಾಮೆರಾಗಳು :  

ಸುಮಾರು ವರ್ಷಗಳ ಹಿಂದೆ ಪಟ್ಟಣದ ಬಸವೇಶ್ವರ ವೃತ್ತ, ಮಂಗಳವಾರ ಪೇಟೆ ವೃತ್ತ, ನಡುಚೌಕಿ ವೃತ್ತ, ಗಾಂಧಿ ವೃತ್ತ, ಚೆನ್ನಮ್ಮ ವೃತ್ತ, ಬುದ್ನಿ ಮಲ್ಲಮ್ಮ ವೃತ್ತಗಳಲ್ಲಿ ಸಿಸಿ ಕ್ಯಾಮೆರಾಗಳು ಕೆಲವು ವರ್ಷಗಳ ವರೆಗೆ ಸಮರ​‍್ಕ ಕೆಲಸ ನಿರ್ವಹಿಸಿ ಕಣ್ಮುಚ್ಚಿ ಕುಳಿತಿವೆ. 

ಕೆಲವು ಕಡೆಗಳಿಂದ ಮಂಗ ಮಾಯವೂ ಆಗಿವೆ. ಈ ವ್ಯವಸ್ಥೆಯಿಂದ ಸ್ಟೇಷನ್ ನಲ್ಲಿ ಕುಳಿತೆ ಪಟ್ಟಣದ ಆಗು ಹೋಗುಗಳ ಬಗ್ಗೆ ಮಾಹಿತಿ ಪಡೆಯಬಹುದಾಗಿತ್ತು. ಇವುಗಳು ಪೋಲಿಸ್ ಇಲಾಖೆಗೆ ಸಹಕಾರಿ ರೂಪದಲ್ಲಿ ಕೆಲಸ ನಿರ್ವಹಿಸುತ್ತಿದ್ದವು. ದುರಸ್ತಿ ಬಗ್ಗೆ ಪೋಲೀಸ್ ಇಲಾಖೆಗೆ ಮಾತನಾಡಿದರೆ ಪುರಸಭೆ ಕರ್ತವ್ಯ ಎನ್ನುತ್ತಾರೆ. ಅವರನ್ನು ಕೇಳಿದರೆ ನಮಗೆ ಸಮ್ಮಂಧಿಸಿದ ವಿಷಯವಲ್ಲ ಒಟ್ಟಾರೆ ಗೊಂದಲದ ಚೆಂಡು ಮಾತ್ರ ಸಾರ್ವಜನಿಕ ವಲಯದಲ್ಲಿ ಅಲೆದಾಡುತ್ತ ಇದಕ್ಕೆ ಪರಿಹಾರವೇ ಇಲ್ಲ ಎಂಬಂತಾಗಿ ಜನ ಬೇಸರ ವ್ಯಕ್ತಪಡಿಸುತ್ತಿದ್ದಾರೆ. 

 ಬೆಚ್ಚಿ ಬೀಳಿಸುವ ಘಟನೆಗಳು:  

ಕೆಲವು ವರ್ಷಗಳ ಹಿಂದೆ ಮಹಾಲಿಂಗಪುರ ಪಟ್ಟಣದ ಬಸವನಗರ, ವಡಗೇರಿ ಪ್ಲಾಟ್ ಇನ್ನೂ ಹಲವು ಪ್ರದೇಶಗಳಲ್ಲಿಯ ಮನೆ ಮಾಲಿಕರ ಉಪಸ್ಥಿತಿಯಲ್ಲಿಯೇ ನಡು ರಾತ್ರಿ ಮನೆಗಳಿಗೆ ನುಗ್ಗಿ ರಾಡ್ ಹಿಡಿದು ಕಳ್ಳತನಕ್ಕೆ ಪ್ರಯತ್ನಿಸಿದ್ದು ಹಾಗೂ ಪಕ್ಕದ ಓಣಿಯಲ್ಲಿ ಅದೇ ದಿನ ಬಂಗಾರ ಕಳುವಾಗಿರುವುದು, ಎಪಿಎಂಸಿ ಅಂಗಡಿಯಲ್ಲಿ ನಗದು ಕಳ್ಳತನ, ಬಸವೇಶ್ವರ ವೃತ್ತದಲ್ಲಿ ಟಿವಿ ಅಂಗಡಿ ಕಳ್ಳತನ, ಹಲವು ಬಾರಿ ಬಾರದಾನ ಮಳಿಗೆಗಳಿಗೆ ಬೆಂಕಿ ಹೊತ್ತಿಕೊಂಡದ್ದು ಇನ್ನೂ ಅನೇಕ ಪ್ರಕರಣಗಳು ನಡೆದಿದ್ದು ಈ ಪ್ರಕರಣಗಳಲ್ಲಿ ಈ ವರೆಗೆ ಯಾರನ್ನೂ ಬಂಧಿಸಿ ವಿಚಾರಣೆಗೆ ಒಳಪಡಿಸದೇ ಇರುವುದು ವಿಪರ್ಯಾಸ ಸಂಗತಿಯಾಗಿದೆ ಎನ್ನುತ್ತಿದ್ದಾರೆ ಸಾರ್ವಜನಿಕರು. 

18 ಟಟಠಿ 03 ಠಿಠಠ