ಧಾರವಾಡ 10.: ಇಲ್ಲಿಯ ಕುಮಾರೇಶ್ವರ ನಗರದಲ್ಲಿ ನಿಮರ್ಾಣ ಹಂತದಲ್ಲಿದ್ದ ನಾಲ್ಕು ಅಂತಸ್ತಿನ ವಾಣಿಜ್ಯ ಕಟ್ಟಡವು ಕಳೆದ ಮಾಚರ್್ 19 ರಂದು ಕುಸಿತಗೊಂಡಿತ್ತು. ಈ ಪ್ರಕರಣದ ಕುರಿತು ಜಿಲ್ಲಾಧಿಕಾರಿ ದೀಪಾ ಚೋಳನ್ ಅವರು ಇಂದು ದಂಡಾಧಿಕಾರಿ ವಿಚಾರಣೆ ನಡೆಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪ್ರಾರಂಭವಾದ ವಿಚಾರಣೆಯಲ್ಲಿ ಕಟ್ಟಡ ದುರಂತದಲ್ಲಿ ಮೃತಪಟ್ಟವರ ವಾರಸುದಾರರು, ಗಾಯಾಳುಗಳು ಹಾಗೂ ಸಂಬಂಧಿಸಿದವರು ಹಾಜರಾಗಿ ದಂಡಾಧಿಕಾರಿ ವಿಚಾರಣಾಧಿಕಾರಿಗಳ ಮುಂದೆ ತಮ್ಮ ಹೇಳಿಕೆ, ಮಾಹಿತಿ ಮತ್ತು ದಾಖಲೆಗಳನ್ನು ಖುದ್ದಾಗಿ ಸಲ್ಲಿಸಿದರು.
ಮಾಚರ್್ 19 ರ ಮಧ್ಯಾಹ್ನ 3.40 ಕ್ಕೆ ಸಂಭವಿಸಿದ ಈ ಘಟನೆಯಲ್ಲಿ 70 ರಿಂದ 80 ಜನ ಕಟ್ಟಡದ ಅವಶೇಷಗಳಡಿ ಸಿಲುಕಿದ್ದರು. 19 ಜನ ಮೃತಪಟ್ಟಿದ್ದರು. 15 ಜನ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
57 ಜನರನ್ನು ಸುರಕ್ಷಿತವಾಗಿ ಕಟ್ಟಡದಿಂದ ಹೊರತರಲಾಗಿತ್ತು. ಈ ನಿಮರ್ಾಣ ಹಂತದ ಕಟ್ಟಡವು ಬೀಳಲು ಕಾರಣವಾದ ಸಂದರ್ಭಗಳು, ಅದಕ್ಕೆ ಕಾರಣವಾದ ಅಂಶಗಳು ಮತ್ತಿತರ ವಿಷಯಗಳ ಸಂಪೂರ್ಣ ಸತ್ಯಾಂಶ ಕಂಡುಹಿಡಿಯಲು, ತನಿಖೆ ನಡೆಸಲು ಸೂಚಿಸಿ ಸಕರ್ಾರವು ಮಾಚರ್್ 26 ರಂದು ಆದೇಶ ಹೊರಡಿಸಿತ್ತು.
ಈ ಆದೇಶದ ಅನುಸಾರ (ಒಚಿರಣಜಡಿಚಿಟ ಇಟಿಡಣಡಿಥಿ) ದಂಡಾಧಿಕಾರಿ ವಿಚಾರಣಾಧಿಕಾರಿಯೂ ಆಗಿರುವ ಧಾರವಾಡದ ಜಿಲ್ಲಾಧಿಕಾರಿ ದೀಪಾ ಚೋಳನ್ ಇಂದು ವಿಚಾರಣೆ ನಡೆಸಿ ಹೇಳಿಕೆಗಳನ್ನು ದಾಖಲಿಸಿಕೊಂಡರು.
ಘಟನೆಯಲ್ಲಿ ಮೃತಪಟ್ಟ 19 ಜನರಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ರೂ.3 ಲಕ್ಷ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಿಂದ ರೂ.2 ಲಕ್ಷ ಹಾಗೂ ಪ್ರಧಾನ ಮಂತ್ರಿಗಳ ಕಾಯರ್ಾಲಯದಿಂದ ರೂ.2 ಲಕ್ಷ ಸೇರಿ ಮೃತ 19 ಜನರ ವಾರಸುದಾರರಿಗೆ ಪ್ರತಿಯೊಬ್ಬರಿಗೂ ತಲಾ ರೂ.7 ಲಕ್ಷ ರೂ.ಗಳ ಪರಿಹಾರ ನೀಡಲಾಗುತ್ತಿದೆ.
ಗಂಭೀರವಾಗಿ ಗಾಯಗೊಂಡಿರುವ 15 ಜನರಿಗೆ ಮಹಾನಗರ ಪಾಲಿಕೆಯಿಂದ ರೂ.1 ಲಕ್ಷ, ಪ್ರಧಾನ ಮಂತ್ರಿಗಳ ಕಚೇರಿಯಿಂದ ರೂ.1 ಲಕ್ಷ ಸೇರಿ 15 ಜನರಿಗೆ ತಲಾ ರೂ.2 ಲಕ್ಷಗಳನ್ನು ಒದಗಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಗಾಯಾಳುಗಳ ಬಳಿಗೆ ಬಂದು ಹೇಳಿಕೆ ದಾಖಲು : ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿರುವ ಪ್ರೇಮಾ ಉಣಕಲ್ ಹಾಗೂ ಯಲ್ಲಪ್ಪ ಜೋಗಿನ್ ಅವರು ಜಿಲ್ಲಾಧಿಕಾರಿಗಳ ಸಭಾಭವನಕ್ಕೆ ಮೇಲೇರಿ ಬರಲು ಅಶಕ್ತರಾಗಿರುವುದನ್ನು ಮನಗಂಡ ಜಿಲ್ಲಾಧಿಕಾರಿಗಳು ಗಾಯಾಳುಗಳು ಕುಳಿತಿದ್ದ ನೆಲಮಹಡಿಗೆ ಇಳಿದು ಬಂದು ಹೇಳಿಕೆಗಳನ್ನು ದಾಖಲಿಸಿಕೊಂಡರು. ಅಪರ ಜಿಲ್ಲಾಧಿಕಾರಿ ಡಾ. ಸುರೇಶ್ ಇಟ್ನಾಳ ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.