ನಿರ್ಮಾಣ ಹಂತದ ಕಟ್ಟಡ ಕುಸಿತ: 7 ಸಾವು

ರಿಯೋ ಡೆ ಜನೆರಿಯೋ, ಅ. 19:    ಬ್ರೆಜಿಲ್ನ ಈಶಾನ್ಯ ನಗರವಾದ ಫೋಟರ್್ಲೆಜಾದಲ್ಲಿನ ವಸತಿ ಕಟ್ಟಡ ಕುಸಿದ ಪರಿಣಾಮ ಸಾವನ್ನಪ್ಪಿದವರ ಸಂಖ್ಯೆ ಏಳಕ್ಕೆ ಏರಿದೆ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆ ಶುಕ್ರವಾರ ನಾಲ್ಕನೇ ದಿನ ತಲುಪಿದೆ. ಅವಶೇಷಗಳಿಂದ ಜೀವಂತವಾಗಿ ರಕ್ಷಿಸಲ್ಪಟ್ಟ ಏಳು ಜನರು ಆಸ್ಪತ್ರೆಯಲ್ಲಿ  ಚೇತರಿಸಿಕೊಳ್ಳುತ್ತಿದ್ದಾರೆ, ಅವರಲ್ಲಿ ನಾಲ್ವರು ಆಸ್ಪತ್ರೆಗೆ ದಾಖಲಾಗಿದ್ದಾರೆ ಮತ್ತು ಇತರರನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ. ಇಲ್ಲಿಯವರೆಗೆ ಇಬ್ಬರು ಕಾಣೆಯಾಗಿದ್ದಾರೆ. ಮಂಗಳವಾರ ಯಾವುದೇ ಬದುಕುಳಿದವರನ್ನು ರಕ್ಷಿಸಲಾಗಿಲ್ಲವಾದರೂ, ಉಳಿದಿರುವ ಇಬ್ಬರು ಸಂತ್ರಸ್ತರನ್ನು ಜೀವಂತವಾಗಿ ರಕ್ಷಿಸಲು ಇನ್ನೂ ಸಾಧ್ಯವಿದೆ ಎಂದು ರಕ್ಷಣಾ ತಂಡದ ಉಸ್ತುವಾರಿ ವಹಿಸಿರುವ ಅಗ್ನಿಶಾಮಕ ಇಲಾಖೆ ಕಮಾಂಡರ್ ಎಡ್ವರ್ಡೊ ಹೊಲಾಂಡಾ ಹೇಳಿದ್ದಾರೆ. ಶ್ವಾನ ದಳ ಕೂಡ ಕಾಣೆಯಾದವರನ್ನು ಪತ್ತೆ ಮಾಡಲು ಪ್ರಯತ್ನಿಸುತ್ತಿವೆ. 13 ಅಪಾಟರ್್ಮೆಂಟ್ಗಳನ್ನು ಹೊಂದಿದ್ದ ಈ ಕಟ್ಟಡವು ಫೋರ್ಟಲೆಜಾದ ನೆರೆಹೊರೆಯಲ್ಲಿದ್ದು, ಇದರ ನವೀಕರಣ ಕಾರ್ಯ ನಡೆಯುತ್ತಿತ್ತು. ಮಂಗಳವಾರ, ಕಟ್ಟಡದ ಪಿಲ್ಲರ್ಗಳ ಮೇಲೆ ವ್ಯಾಪಕವಾದ ಹಾನಿಯನ್ನು ತೋರಿಸುವ ವೀಡಿಯೊಗಳನ್ನು ದೇಶದ ಪ್ರಮುಖ ಸುದ್ದಿ ತಾಣಗಳು ಪ್ರಕಟಿಸಿವೆ.