ಬೆಂಗಳೂರು,ಫೆ.1: ಕೇಂದ್ರದ್ದು ಬೆಟ್ಟ ಅಗೆದು ಇಲಿ ಹಿಡಿದ ಬಜೆಟ್ ಎಂದು ಮಾಜಿ ಸಂಸದ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ವ್ಯಂಗ್ಯವಾಡಿದ್ದಾರೆ.
ಸದಾಶಿವನಗರದ ನಿವಾಸದಲ್ಲಿ ಕೇಂದ್ರದ ಬಜೆಟ್ ಕುರಿತು ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ಅವರು, ಈ ಸರ್ಕಾರಕ್ಕೆ ಬಡವರ ಬಗ್ಗೆ ಕಾಳಜಿ ಇಲ್ಲ ಎನ್ನುವುದನ್ನು ಬಜೆಟ್ ಸಾಬೀತುಪಡಿಸಿದೆ.
ಕೆಲ ಕಾರ್ಪೋರೇಟ್ ಗಳಿಗೆ ತೆರಿಗೆ ಕಡಿಮೆ ಮಾಡಿದ್ದಾರೆ. ಚುನಾವಣೆ ಸಂದರ್ಭದಲ್ಲಿ 2 ಕೋಟಿ ಉದ್ಯೋಗ ಕೊಡುತ್ತೇನೆ ಎಂದು ಹೇಳಿದ್ದರು. ಆದರೆ ಅದರ ಬಗ್ಗೆ ಯಾವುದೇ ಚಿಂತನೆ ಬಜೆಟ್ ನಲ್ಲಿ ಇಲ್ಲ . ಹೊಸ ಉದ್ಯಮ ಸೃಷ್ಟಿ ಮಾಡಲು ಏನೂ ಯೋಜನೆ ರೂಪಿಸಿಲ್ಲ ಎಂದರು.
ಇತಿಹಾಸದಲ್ಲಿಯೇ ಇದು ದೊಡ್ಡ, ಉದ್ದದ ಬಜೆಟ್. ಹೆಚ್ಚಿಗೆ ಮಾತನಾಡಿ, ಕಡಿಮೆ ಕೆಲಸ ಮಾಡಿದ ಬಜೆಟ್ ಮೋದಿಯದ್ದು ಎಂದು ಖರ್ಗೆ ಟೀಕಿಸಿದರು.
ಆಯುಷ್ಮಾನ್ ಭಾರತ್ ಯೋಜನೆ ಜಾರಿಯಲ್ಲಿದೆ ಎಂದರು. ಆದರೆ ಆ ಯೋಜನೆ ಅಡಿಯಲ್ಲಿ ಆಸ್ಪತ್ರೆಗೆ ರೋಗಿಗಳು ಹೋದರೆ ತಿರಸ್ಕರಿಸುತ್ತಿದ್ದಾರೆ. ಜಿಡಿಪಿ ಶೇ. 10 ಬೆಳವಣಿಗೆ ಮಾಡುವುದಾಗಿ ವಿಶ್ವಾಸ ದಿಂದ ಹೇಳುತ್ತಾರೆ. ಮತ್ತೊಂದೆಡೆ ಆರ್ಥಿಕ ತಜ್ಞರು ಹೇಳ್ತಾರೆ ಶೇ. 3.5ರಷ್ಟು ಇದೆ ಎಂದಿದ್ದಾರೆ.
ಈ ಬಜೆಟ್ ನಿಂದ ಜನರಿಗೆ ಉಪಯೋಗವೂ ಆಗಿಲ್ಲ, ಜನ ಪರವೂ ಇಲ್ಲ. 2 ಗಂಟೆ 46 ನಿಮಿಷ ಮಾತಾಡಿದ್ದಾರೆ ಅದೆಲ್ಲವೂ ನಿರಾಶೆಯ ಹೇಳಿಕೆಗಳೇ ಎಂದರು.
ಕೇಂದ್ರ ತೆರಿಗೆ ಸಮಿತಿ ಅಧ್ಯಕ್ಷ ನಿತ್ಯಾನಂದ ಮಾತನಾಡಿ, ಖಾಸಗಿ ಸಹಭಾಗಿತ್ವದಲ್ಲಿ ಕೆಲಸ ಮಾಡಲು ಒತ್ತು ಕೊಡಲಾಗಿದೆ.150 ಪ್ಯಾಸೆಂಜರ್ ಟ್ರೈನ್ ತರುತ್ತಿರುವುದರಿಂದ ಉದ್ಯೋಗ ಸೃಷ್ಟಿಯಾಗುತ್ತಿದೆ, ಸರ್ಬಬನ್ ಟ್ರೈನ್ ಬಗ್ಗೆ ಪ್ರಸ್ತಾಪ ಮಾಡಿರುವುದು ಸ್ವಾಗತಾರ್ಹ. ಘೋಷಣೆಗಳು ಮಾತ್ರ ಆಗಿದ್ದರೆ ಸಾಲದು, ಯೋಜನೆ ಜಾರಿಯಾಗಬೇಕಿದೆ.ಚೆನ್ನೈ, ಬೆಂಗಳೂರು ಟ್ರೈನ್ ಎಕ್ಸ್ ಪ್ರೆಸ್ ಮಾಡುವ ವಿಚಾರವೂ ಸ್ವಾಗತಾರ್ಹ.
ಸೋಲಾರ್ ಇಂಧನ ಜನರೇಟ್ ಮಾಡಲು ಯೋಚನೆ ನಡೆದಿದೆ.ಡಿಜಿಟಲ್ ಟೆಕ್ನಾಲಜಿ ಜಾರಿಗೆ ತರುವ ಬಗ್ಗೆ ಪ್ರಸ್ತಾಪ ಆಗಿದೆ ಎಂದರು.
ಆದಾಯ ಮಿತಿ 5 ಲಕ್ಷದವರೆಗೂ ತಂದಿರುವುದು ಖುಷಿಯ ವಿಚಾರ.ಈ ಮೊದಲು 20-30 ರಷ್ಟು ಇದ್ದ ತೆರಿಗೆ ಪ್ರಮಾಣ ಗಣನೀಯ ಕಡಿಮೆ ಕಂಡಿದೆ. ಇದರಿಂದ ಕೈಗಾರಿಕಾ ಕಂಪನಿಗಳಿಗೆ ಸಹಾಯಕ ಆಗಲಿದೆ.ಸಹಕಾರಿ ಉದ್ಯಮಕ್ಕೆ ತೆರಿಗೆ ಕಡಿಮೆ ಮಾಡಲಾಗಿದೆ ಎಂದರು.