ಕುಖ್ಯಾತ ಚಂಬಲ್ ಡಕಾಯಿತರಾದ ಬಬ್ಲಿ, ಲವ್ಲೇಶ್ ದೇಹಗಳು ಮಧ್ಯಪ್ರದೇಶ ಕಾಡಿನಲ್ಲಿ ಪತ್ತೆ

 ಚಿತ್ರಕೂಟ, ಸೆ 16      ಕಳೆದ ರಾತ್ರಿ ಎನ್ಕೌಂಟರ್ನಲ್ಲಿ ಹತ್ಯೆಯಾದ ಚಂಬಲ್ ಡಕಾಯಿತರಾದ ಬಬ್ಲಿ ಕೊಲ್ ಮತ್ತು ಲವ್ಲೇಶ್ ಮೃತ ದೇಹಗಳನ್ನು ಸೋಮವಾರ ಮುಂಜಾನೆ ಮಧ್ಯಪ್ರದೇಶದ ಸತ್ನಾ ಜಿಲ್ಲೆಗೆ ಹೊಂದಿಕೊಂಡಿರುವ ಕಾಡುಗಳಲ್ಲಿ ಪತ್ತೆ ಮಾಡಲಾಗಿದೆ. 

ಡಕಾಯಿತರ ಹತ್ಯೆ  ನಿಗೂಢವೆನಿಸಿದೆ. ತಮ್ಮದೇ ಮಂದಿಯಿಂದ ಹತ್ಯೆಯಾದರೆ? ಅಥವಾ ಪೊಲೀಸರು ಹೇಳಿಕೊಂಡಂತೆ ಎನ್ಕೌಂಟರ್ನಲ್ಲಿ ಹತರಾಗಿದ್ದಾರೆಯೇ ಎಂಬ ಅನುಮಾನಗಳು ಕಾಡುತ್ತಿವೆ. ಬಬ್ಲಿ ಸುಳಿವು ನೀಡಿದವರಿಗೆ ಉತ್ತರ ಪ್ರದೇಶರು ಪೊಲೀಸರು 5.5 ಲಕ್ಷ ರೂ., ಮಧ್ಯಪ್ರದೇಶ ಪೊಲೀಸರು 1 ಲಕ್ಷ ರೂ. ಬಹುಮಾನ ಘೋಷಿಸಿದ್ದರು. ಹಾಗೆಯೇ ಲವ್ಲೇಶ್ ಸುಳಿವು ನೀಡಿದವರಿಗೆ ಉತ್ತರ ಪ್ರದೇಶ ಪೊಲೀಸರು 1.5 ಲಕ್ಷ ರೂ. ಮಧ್ಯಪ್ರದೇಶ ಪೊಲೀಸರು 30,000 ರೂ. ಬಹುಮಾನ ಪ್ರಕಟಿಸಿದ್ದರು.  

 ಇಂದು ಬೆಳಿಗ್ಗೆ ಸತ್ನಾ ಜಿಲ್ಲೆಯ ಧಾಕರ್ುಂಡಿ ಪೊಲೀಸ್ ಠಾಣೆ ವ್ಯಾಪ್ತಿಯ ಲೆದಾರಿ ಕಾಡುಗಳಲ್ಲಿ ಮೃತದೇಹಗಳು ಪತ್ತೆಯಾಗಿವೆ ಎಂದು ಉತ್ತರ ಪ್ರದೇಶ ಪೊಲೀಸ್ ಮೂಲಗಳು ತಿಳಿಸಿವೆ. ಸ್ಥಳದಿಂದ ಎರಡು ಬಂದೂಕುಗಳು ಮತ್ತು ಇತರ ಗೃಹೋಪಯೋಗಿ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. 

 ಭಾನುವಾರ ತಡರಾತ್ರಿ ಎನ್ಕೌಂಟರ್ ನಲ್ಲಿ ಇಬ್ಬರೂ ಡಕಾಯಿತರನ್ನು ಹೊಡೆದುರುಳಿಸಿರುವುದಾಗಿ ಮಧ್ಯಪ್ರದೇಶ ಪೊಲೀಸ್ ಅಧಿಕಾರಿಗಳು ಎಂದು ಹೇಳಿಕೊಂಡರೂ, ಸತ್ನಾದ ಧಾಕರ್ುಂಡಿಯಿಂದ ವ್ಯಕ್ತಿಯೊಬ್ಬರನ್ನು ಅಪಹರಿಸಿ ಸುಲಿಗೆಯಾಗಿ ಪಡೆದಿದ್ದ 8 ಲಕ್ಷ ರೂ.ಹಂಚಿಕೊಳ್ಳುವಾಗ ಡಕಾಯತಿ ತಂಡದ ಸದಸ್ಯ ಲಾಲಿ ಕೋಲ್ ಇಬ್ಬರನ್ನೂ  ಗುಂಡಿಕ್ಕಿ ಕೊಂದಿದ್ದಾನೆ ಎಂದೂ ಹೇಳಲಾಗುತ್ತಿದೆ.  ಮಾರ್ಕಂಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ದೋಡಾ ಮಾಫಿ ಮೂಲದವರಾದ ಬಬ್ಲಿ ಮತ್ತು ಲವ್ಲೇಶ್ ಕನಿಷ್ಠ 100 ಕ್ಕೂ ಹೆಚ್ಚು ಕೊಲೆ, ಅಪಹರಣ ಮತ್ತು ಇತರ ಅಪರಾಧಗಳಲ್ಲಿ ಭಾಗಿಯಾಗಿದ್ದರು.   

 ಈ ಮಧ್ಯೆ, ಮಧ್ಯಪ್ರದೇಶದ ಪೊಲೀಸ್ ಮಹಾ ನಿರೀಕ್ಷಕ (ಐಜಿ) ಚಂಚಲ್ ಶೇಖರ್ ಹೇಳಿಕೆ ನೀಡಿ, ಡಕಾಯಿತರ ಹತ್ಯೆ, ಪೊಲೀಸರ ದೊಡ್ಡ ಸಾಧನೆಯಲ್ಲಿ ಒಂದಾಗಿದ್ದು, ಇದರೊಂದಿಗೆ ಸದ್ಯ, ಬಹುತೇಕ ಎಲ್ಲ ಪ್ರಮುಖ ಡಕಾಯಿತರನ್ನು ಚಂಬಲ್ ಕಣಿವೆಯಿಂದ ನಿಮರ್ೂಲನೆಗೊಳಿಸಲಾಗಿದೆ. ಎನ್ಕೌಂಟರ್ನಲ್ಲಿ ಭಾಗಿಯಾಗಿರುವ ಪೊಲೀಸರಿಗೆ ಸೂಕ್ತ ಬಹುಮಾನ ನೀಡಲಾಗುವುದು ಎಂದು ಹೇಳಿದ್ದಾರೆ.