ಶೀಘ್ರದಲ್ಲಿ ಬಸವೇಶ್ವರ ವೃತ್ತದಲ್ಲಿ ಬಸವಣ್ಣವರ ಕಂಚಿನ ಪ್ರತಿಮೆ ಅನಾವರಣ : ಡಾ.ಪ್ರಭಾಕರ್ ಕೋರೆ
Bronze statue of Basavanna to be unveiled at Basaveshwara Circle soon: Dr. Prabhakar Kore
ಬೆಳಗಾವಿ 20 : ವಿಶ್ವಗುರು ಬಸವೇಶ್ವರರ ಪ್ರತಿಮೆಯನ್ನು ಬೆಳಗಾವಿಯ ಹೃದಯ ಭಾಗವಾಗಿರುವ ಗೋವಾವೆಸ ಸರ್ಕಲ್ ನಲ್ಲಿ ಪ್ರತಿಷ್ಠಾಪಿಸಲಾಗುವುದು. ಕಳೆದ ಮೂರು ವರ್ಷಗಳಿಂದ ಮೂರ್ತಿ ತಯಾರವಾಗಿದ್ದರು ಅನಿವಾರ್ಯ ಕಾರಣಾಂತರಗಳಿಂದ ಕಾಮಗಾರಿಯು ನೆನೆಗುದಿಗೆ ಬಿದ್ದಿತ್ತು ಈಗ ನೆರವೇರಲಿದೆ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ರಾಷ್ಟ್ರೀಯ ಉಪಾಧ್ಯಕ್ಷರಾದ ಡಾ. ಪ್ರಭಾಕರ್ ಕೋರೆ ಅವರು ಹೇಳಿದರು. ಅವರು ಬಸವೇಶ್ವರ ವೃತ್ತ ಉದ್ಯಾನವನದಲ್ಲಿ ನೂತನ ಕಂಚಿನ ಮೂರ್ತಿ ಪ್ರತಿಷ್ಠಾಪನೆಯ ಭೂಮಿ ಪೂಜೆಯನ್ನು ನೆರವೇರಿಸಿ ಮಾತನಾಡಿದರು.
ಸೊಲ್ಲಾಪುರದಲ್ಲಿ 15 ಅಡಿ ಎತ್ತರದ ಬಸವಣ್ಣವರ ಕಂಚಿನ ಮೂರ್ತಿ ಸಿದ್ದಗೊಂಡಿದೆ, ಮೂರು ವರ್ಷಗಳಿಂದ ಮೂರ್ತಿಯನ್ನು ಅಲ್ಲಿಯೇ ಇಡಲಾಗಿತ್ತು ಈಗ ಕೆಎಲ್‌ಇ ಸಂಸ್ಥೆಯು ಅಡಿಗಲ್ಲನ್ನು ನಿರ್ಮಿಸಲಿದ್ದು ಇದರ ಮೇಲೆ ಕಂಚಿನ ಮೂರ್ತಿ ಪ್ರತಿಷ್ಠಾಪನೆಗೊಳ್ಳಲಿದೆ ಬೆಳಗಾವಿ ್ರ್ರಥಮ ಎತ್ತರದ ಬಸವಣ್ಣವರ ಪ್ರತಿಮೆ ಇದಾಗಲಿದೆ. ಶಾಸಕರಾದ ಅಭಯ್ ಪಾಟೀಲ್ ಅವರು ಮಹಾನಗರ ಪಾಲಿಕೆ ಎಲ್ಲರ ಪರಿಶ್ರಮದಿಂದ ಬಸವಣ್ಣವರ ಪ್ರತಿಮೆ ಸಿದ್ಧಗೊಂಡು ಈಗ ಕಾರ್ಯಕ್ಕೆ ಅಂತಿಮ ಸ್ಪರ್ಶ ನೀಡಲಾಗುತ್ತಿದೆ ಇದು ಸಮಸ್ತ ಬಸವ ಅಭಿಮಾನಿಗೆ ಹೆಮ್ಮೆಯನ್ನು ಉಂಟು ಮಾಡಿದೆ ಹಾಗೂ ಹರ್ಷವನ್ನು ತಂದಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಸಕರಾದ ಅಭಯ ಪಾಟೀಲ್, ನೂತನವಾಗಿ ಆಯ್ಕೆಯಾದ ಬೆಳಗಾವಿ ಮಹಾನಗರ ಪಾಲಿಕೆಯ ಮೇಯರ್ ಪ್ರೀತಿ ಕಾಮಕರ ಉಪ ಮೇಯರ್ ಹನುಮಂತ ಕೊಂಗಾಳಿ, ಮಹಾಸಭೆ ಜಿಲ್ಲಾಧ್ಯಕ್ಷ ರತ್ನಪ್ರಭಾ ಬೆಲ್ಲದ, ಹಿರಿಯ ನ್ಯಾಯವಾದಿ ಎಂಬಿ ಜಿರ್ಲಿ, ಚಂದ್ರಶೇಖರ ಬೆಂಬಳಗಿ, ಸೋಮಲಿಂಗ್ ಮಾವಿನಕಟ್ಟಿ, ಜ್ಯೋತಿ ಬಾದಾಮಿ, ಶಿವನಗೌಡ ಪಾಟೀಲ್, ಆರ್‌ಪಿ ಪಾಟೀಲ್, ವಿಕೆ ಪಾಟೀಲ್ ಮೊದಲಾದ ಗಣ್ಯರು ಉಪಸ್ಥಿತರಿದ್ದರು.
ಅನೆಕಲ್ಲು, ಮಳೆ ಅಬ್ಬರಕ್ಕೆ 39 ಕುರಿಗಳ ಸಾವು : ಬೀದಿಗೆ ಬಂತು ಬಡವನ ಬದುಕು
ಮಳೆಯ ಅವಾಂತರ : ನದಿಯಂತಾದ ರಾಷ್ಟ್ರೀಯ ಹೆದ್ದಾರಿ, ವಾಹನಗಳು ಸಿಲುಕಿ ಪರದಾಡಿದ ಪ್ರಯಾಣಿಕರು
ಬೆಳಗಾವಿಯಲ್ಲಿ ಆನೆಕಲ್ಲು ಮಿಶ್ರಿತ ಗಾಳಿ ಮಳೆಯ ಅರ್ಭಟಕ್ಕೆ ಜನಜೀವನ ಅಸ್ತವ್ಯಸ್ತ
ಹಣ ದ್ವಿಗುಣ ಹೆಸರಲ್ಲಿ ಜನರಿಗೆ ವಂಚಿಸುತ್ತಿದ್ದ ಅಂತರಾಜ್ಯ ಖದೀಮರ ಬಂಧನ : ಗೋಕಾಕ ಪೊಲೀಸರ ಕಾರ್ಯಕ್ಕೆ ಎಸ್ ಪಿ ಶ್ಲಾಘನೆ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ 