ಬ್ರಿಟನ್; ಇಂದಿನಿಂದ ನೂತನ ಚುನಾಯಿತ ಸಂಸತ್ ಅಧಿವೇಶನ

ಮಾಸ್ಕೋ, ಡಿ 17( ಸ್ಪುಟ್ನಿಕ್)   ಬ್ರಿಟನ್ ನಲ್ಲಿ ಇತ್ತೀಚಿಗೆ ನಡೆದ ಮಧ್ಯಂತರ ಚುನಾವಣೆ ನಂತರ  ನೂತನವಾಗಿ ಚುನಾಯಿತಗೊಂಡಿರುವ ಸಂಸತ್  ಮಂಗಳವಾರ ಸಮಾವೇಶಗೊಂಡು ತನ್ನ ಕಲಾಪ ಆರಂಭಿಸಲಿದೆ.ಸಂಸತ್ತಿನ ಸಾಮಾನ್ಯ ಸಭೆ  ಹೊಸ  ಸ್ಪೀಕರ್  ಅನ್ನು ಆಯ್ಕೆ ಮಾಡುವ ಸಾಧ್ಯತೆಯಿದೆ.  ಹೊಸದಾಗಿ ಚುನಾಯಿಸಿ ಬಂದಿರುವ  ಸಂಸತ್ ಸದಸ್ಯರು  ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಸ್ಪೀಕರ್  ಸ್ಥಾನಕ್ಕೆ  ಲಿಂಡ್ಸೆ ಲಾಯ್ಲೆ  ಅವರನ್ನೇ  ಸಂಸದರು ಮರು ಆಯ್ಕೆಗೊಳಿಸುವ ಸಾಧ್ಯತೆಯಿದೆ,  ಕಳೆದ ನವೆಂಬರ್ ನಲ್ಲಿ  ಜಾನ್ ಬೆರ್ ಕೌ  ಅವರ ಸ್ಥಾನಕ್ಕೆ   ಲಿಂಡ್ಸೆ ಲಾಯ್ಲೆ  ಅವರನ್ನು ಚುನಾಯಿಸಲಾಗಿತ್ತು.ಡಿಸೆಂಬರ್ 12 ರಂದು  ಸಾಮಾನ್ಯ ಸಭೆಗೆ  ನಡೆದ  ಚುನಾವಣೆಯಲ್ಲಿ  ಒಟ್ಟು 650ಸ್ಥಾನಗಳ ಪೈಕಿ  ಪ್ರಧಾನಿ  ಬೋರೀಸ್  ಜಾನ್ಸನ್   ನೇತೃತ್ವದ  ಕನ್ಸರ್ವೇಟೀವ್  ಪಕ್ಷ  365  ಸ್ಥಾನಗಳಲ್ಲಿ  ಜಯಗಳಿಸಿತ್ತು.  ಲೇಬರ್ ಪಾರ್ಟಿ  59 ಸ್ಥಾನಗಳಲ್ಲಿ ಸೋಲು ಅನುಭವಿಸಿ 203 ಸ್ಥಾನಗಳಲ್ಲಿ ಮಾತ್ರ ಗೆಲುವು ಸಾಧಿಸಿದೆ.  ಈ ಗೆಲುವಿನಿಂದಾಗಿ  ಬೋರೀಸ್ ಜಾನ್ಸನ್   ತಮ್ಮ ಯೋಜನೆಯಂತೆ  ಐರೋಪ್ಯ ಒಕ್ಕೂಟದಿಂದ  ಬ್ರಿಟನ್    ಹೊರಬರುವ ಪ್ರಕ್ರಿಯೆಯನ್ನು  ಮುಂದುವರಿಸಲು ಅವಕಾಶ ಕಲ್ಪಿಸಲಿದೆ.  ಪ್ರಧಾನಿ  ಜಾನ್ಸನ್  ಅವರು ಸಂಸತ್ತಿನಲ್ಲಿ ಕ್ರಿಸ್ ಮಸ್ ಗಿಂತ ಮುನ್ನ  ಬ್ರೆಕ್ಸಿಟ್ ಮಸೂದೆಯನ್ನು ಮಂಡಿಸಲು  ಉದ್ದೇಶಿಸಿದ್ದಾರೆ.  ಶುಕ್ರವಾರ  ವಿಧೇಯಕ ಮಂಡಿಸುವ ಸಾಧ್ಯತೆಯಿದೆ ಎಂದು  ಸರ್ಕಾರದ ವಕ್ತಾರರು ಹೇಳಿದ್ದಾರೆ. ಬ್ರೆಕ್ಸಿಟ್  ಪ್ರಕ್ರಿಯೆಯನ್ನು ಕ್ರಿಸ್ಮಸ್ ಗಿಂತಲೂ ಮುನ್ನ ಆರಂಭಿಸಲು ಸರ್ಕಾರ ಚಿಂತನೆ ನಡೆಸಿದೆ. ಈ ಕುರಿತು  ಸಂಸತ್ತಿನಲ್ಲಿ  ಸಾಂವಿಧಾನಿಕ ರೀತಿಯಲ್ಲಿ  ಚರ್ಚೆ ನಡೆಯಲಿದೆ ಎಂದು ವಕ್ತಾರರು ತಿಳಿಸಿದ್ದಾರೆ.