ಬ್ರೆಜಿಲ್ ಪ್ರವಾಹ : ಸಂಖ್ಯೆ 37 ಕ್ಕೆ ಏರಿಕೆ

ರಿಯೊ ಡಿ ಜನೈರೊ, ಜ 27 (ಕ್ಸಿನ್ಹುವಾ) ಆಗ್ನೇಯ ಬ್ರೆಜಿಲ್‌ನಲ್ಲಿ ಭಾರಿ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು ಮೃತರ ಸಂಖ್ಯೆ 37 ಕ್ಕೆ ಏರಿಕೆಯಾಗಿದೆ ಎಂದು ನಾಗರಿಕ ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ.ರಾಜಧಾನಿ ಬೆಲೊ ಹೊರಿಜಾಂಟೆ ಮತ್ತು ಮೆಟ್ರೋಪಾಲಿಟನ್ ಪ್ರದೇಶದಲ್ಲಿ ಶುಕ್ರವಾರ ಧಾರಾಕಾರ ಮಳೆಯಾಗಿದ್ದು, 21 ಜನರು ಕಾಣೆಯಾಗಿದ್ದಾರೆ ಎಂದು ಅವರು ಹೇಳಿದ್ದಾರೆ. 

12 ಮಂದಿ ಗಾಯಗೊಂಡಿದ್ದು , 13,687 ಜನರನ್ನು ಸ್ಥಳಾಂತರಿಸಲಾಗಿದೆ. 3,354 ಜನರು ಮನೆಗಳನ್ನು ಕಳೆದುಕೊಂಡಿದ್ದಾರೆ. ಶುಕ್ರವಾರ ಕೇವಲ 24 ಗಂಟೆಗಳಲ್ಲಿ 171.8 ಮಿಲಿಮೀಟರ್‌ಗಳಷ್ಟು ದಾಖಲೆಯ ಮಳೆಯಾಗಿದೆ, ಇದು 110 ವರ್ಷಗಳಲ್ಲಿ ಈ ಪ್ರದೇಶದಲ್ಲಾದ ಅತಿ ಹೆಚ್ಚು ಮಳೆಯಾಗಿದೆ ಎಂದು ಬ್ರೆಜಿಲ್‌ನ ರಾಷ್ಟ್ರೀಯ ಹವಾಮಾನ ಸಂಸ್ಥೆ ತಿಳಿಸಿದೆ.