ಯಲ್ಲಮ್ಮನಗುಡ್ಡದಲ್ಲಿ ಯಲ್ಲಮ್ಮ ದೇವಿಗೆ ಕಂಕಣ ಮಂಗಳಸೋತ್ರ ಧಾರಣೋತ್ಸವ
Bracelet-bearing festival for Goddess Yellamma at Yallammanagudda
ಲೋಕದರ್ಶನ ವರದಿ
ಉಗರಗೋಳ 03 : ಸಮೀಪದ ಯಲ್ಲಮ್ಮನಗುಡ್ಡದಲ್ಲಿ ಗುರುವಾರ ಸಂಭ್ರಮದಿಂದ ದವನದ ಹುಣ್ಣಿಮೆ ಆಚರಿಸಲಾಯಿತು. ಕರ್ನಾಟಕ, ಮಹಾರಾಷ್ಟ್ರ, ಗೋವಾ, ತಮಿಳುನಾಡು ರಾಜ್ಯಗಳಿಂದ ಬಂದಿದ್ದ ಲಕ್ಷಾಂತರ ಭಕ್ತರು, ರೇಣುಕಾ ಯಲ್ಲಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಯಲ್ಲಮ್ಮ ದೇವಾಲಯದ ಆವರಣದಲ್ಲಿ ಭಕ್ತರದಟ್ಟಣೆ ಹೆಚ್ಚಿತ್ತು. ಅತ್ಯಧಿಕ ಪ್ರಮಾಣದಲ್ಲಿ ಬಂದಿದ್ದ ರೈತರು ಮಳೆ, ಬೆಳೆ ಸಮೃದ್ಧವಾಗಿ ಬರಲೆಂದು ಪ್ರಾರ್ಥಿಸಿದರು. ಸುಡು ಬಿಸಿಲಲ್ಲೂ ಯಲ್ಲಮ್ಮ ದೇವಸ್ಥಾನದ ಆವರಣದಲ್ಲಿ ಸರದಿ ಸಾಲಿನಲ್ಲಿ ನಿಂತ ಭಕ್ತಾಧಿಗಳು, ‘ಎಲ್ಲರ ಅಮ್ಮ’ ಯಲ್ಲಮ್ಮ ದೇವಿಯ ದರ್ಶನ, ಆಶೀರ್ವಾದ ಪಡೆದು ಕೃತಾರ್ಥರಾದರು.
ಶ್ರೀರೇಣುಕಾ ದೇವಿಯ ತವರುಮನೆಯಂದೇ ಬಿಂಬಿತವಾದ ಹರಳಕಟ್ಟಿಯ ಗ್ರಾಮಸ್ಥರು ಹಾಗೂ ದೈವದವರು ಸೀರೆ, ಕುಪ್ಪಸ ತಂದು ಅರ್ಿಸಿದರು. ದೇಶದ ನಾನಾ ಭಾಗಗಳಿಂದ ಬಂದ ಭಕ್ತರು ದೇವಿಗೆ ವಿವಿಧ ಕಾಣಿಕೆಗಳನ್ನು ಕೊಟ್ಟು ಪೂಜೆ ಸಲ್ಲಿಸಿದರು. ಗುಡ್ಡದ ವಿಶಾಲವಾದ ಪರಿಸರದಲ್ಲಿ ಒಲೆ ಹೂಡಿ ನೈವೇದ್ಯ ತಯಾರಿಸಿ ಜೋಗಪ್ಪ ಹಾಗೂ ಜೋಗಮ್ಮಗಳಿಂದ ಪೂಜೆ ಮಾಡಿಸಿ ಪರಡಿ ತುಂಬಿ ಶ್ರೀದೇವಿಗೆ ಸಮರ್ಿಸಿದರು.
ಹುಣ್ಣಿಮೆ ಮುನ್ನಾ ದಿನವಾದ ಬುಧವಾರ ಯಲ್ಲಮ್ಮ ದೇವಸ್ಥಾನದಲ್ಲಿ ಯಲ್ಲಮ್ಮ ದೇವಿಗೆ ಕಂಕಣ ಮಂಗಳಸೂತ್ರ ಧಾರಣೋತ್ಸವ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಿದವು. ಹೂಲಿಯ ವೇ ಮೂ ಅಜ್ಜಯ್ಯಶಾಸ್ತ್ರಿಗಳು, ಏಕನಗೌಡ ಮುದ್ದನಗೌಡ್ರ, ಜಗದನಗೌಡ ಪೊಲೇಶಿ, ಮಂಜನಗೌಡ ಸಂಧಿಮನಿ, ರೇಣ್ಕೀಗೌಡ ಪರಶರುಷಿ, ಪಂಡಿತ ಯಡೂರಯ್ಯ, ಪಿ ರಾಜಶೇಖರಯ್ಯ ವೈದಿಕತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.
ಯಲ್ಲಮ್ಮ ದೇವಸ್ಥಾನ ಕಾರ್ಯಧರ್ಶಿ ಪ್ರಭಾವತಿ ಪಕ್ಕಿರಪೂರ, ಉಪಕಾರ್ಯಧರ್ಶಿ ನಾಗರತ್ನಾ ಚೋಳಿನ, ಶೀತಲ ಕಡಟ್ಟಿ, ಅಭಿವೃದ್ದಿ ಪ್ರಾಧಿಕಾರದ ಸದಸ್ಯ ಸಿದ್ದನಗೌಡ ಗೂಡರಾಶಿ, ಗೊವಿಂದಗೌಡ ತಿಪರಾಶಿ, ಅಲ್ಲಮಪ್ರಭು ಪ್ರಭುನವರ, ಆರ್ ಎಸ್ ಸವದತ್ತಿ, ಸಿ ಎನ್ ಕುಲಕರ್ಣಿ, ಪ್ರಭು ಹಂಜಗಿ, ಅನೀಲ ಗುಡಿಮನಿ, ಹರಳಕಟ್ಟಿಯ ಮಂಜುನಾಥಗೌಡ ಗದ್ದಿಗೌಡ್ರ, ಮಲಕಾಜಿಗೌಡ ಗದ್ದಿಗೌಡ್ರ, ಬಸನಗೌಡ್ರ ಹಾಗೂ ಹರಳಕಟ್ಟಿಯ ದೈವದವರು ಮತ್ತು ಗ್ರಾಮಸ್ಥರು ದೇವಿಯ ಭಕ್ತವೃಂದ ಇದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 