ಬಸ್‌-ಲಾರಿ ಮಧ್ಯೆ ಡಿಕ್ಕಿ: ಬಾಲಕ ಸಾವು

ಬಸ್‌-ಲಾರಿ ಮಧ್ಯೆ ಡಿಕ್ಕಿ: ಬಾಲಕ ಸಾವು  Boy dies in bus-lorry collision

ದೇವರಹಿಪ್ಪರಗಿ 04: ಪಟ್ಟಣದ ಸಮೀಪದ ರಾಜಸ್ಥಾನ ಡಾಬಾ ಬಳಿ ಶುಕ್ರವಾರ ರಾತ್ರಿ ಕಲ್ಯಾಣ ಕರ್ನಾಟಕ ಸಾರಿಗೆಯ ಬಸ್(ವಿಜಯಪುರ ಡಿಪೋ-2) ಮತ್ತು ಲಾರಿ ಮಧ್ಯೆ ಡಿಕ್ಕಿ ಸಂಭವಿಸಿದೆ.  

ಈ ಅಪಘಾತದಲ್ಲಿ ಸಿಂದಗಿ ತಾಲೂಕಿನ ಬಳಗಾನೂರ ಗ್ರಾಮದ ಕೇದಾರಲಿಂಗ ಪರಶುರಾಮ  ಮಾಲ್ದ(06)ಬಾಲಕ ಶನಿವಾರದಂದು ಸಾವನ್ನಪ್ಪಿದ್ದಾನೆ.   

ಘಟನೆಯಲ್ಲಿ ಸುಮಾರು 20-30 ಜನ ಪ್ರಯಾಣಿಕರಿಗೆ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಸಿಂದಗಿ ಮತಕ್ಷೇತ್ರದ ಶಾಸಕರಾದ ಅಶೋಕ ಮನಗೂಳಿ ಅವರ ನೇತೃತ್ವದಲ್ಲಿ ಅಂಬ್ಯುಲೆನ್ಸ್‌, ಖಾಸಗಿ ಹಾಗೂ ಸರ್ಕಾರಿ ಬಸ್ ಮೂಲಕ ವಿಜಯಪುರ, ದೇವರಹಿಪ್ಪರಗಿ ಹಾಗೂ ಸಿಂದಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.ವಿಜಯಪುರ ಡಿಪೋ-2ಸೇರಿದ ಬಸ್ ಹಾಗೂ ಲಾರಿ ವಿಜಯಪುರದಿಂದ ಸಿಂದಗಿಗೆ  ತೆರಳುತ್ತಿದ್ದ ಸಂದರ್ಭದಲ್ಲಿ ಲಾರಿ ಚಾಲಕ ಯಾವುದೇ ಮುನ್ಸೂಚನೆ ನೀಡದೆ ಡಾಬಾ ಕಡೆ ಟರ್ನ್‌ ಮಾಡಿದ ಕಾರಣ ಬಸ್ ನಿಯಂತ್ರಣ ಲಾರಿಗೆ ಡಿಕ್ಕಿ  ಹೊಡೆದು ಪರಿಣಾಮ ನಡೆದ ಘಟನೆ ಹಾಗೂ ದಾಖಲಿಸಲಾಗಿದೆ.ಘಟನೆಯಲ್ಲಿ ಲಾರಿ ಚಾಲಕ ಪರಾರಿಯಾಗಿದ್ದಾನೆ ಎಂದು ಬಾಲಕನ ತಂದೆ ಪ್ರಕರಣ ದಾಖಲಿಸಿದ್ದಾರೆ.  

ಈ ಕುರಿತು ದೇವರಹಿಪ್ಪರಗಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ.