ಕೊಮಾರನಹಳ್ಳಿ ಕೆರೆಗೆ ಬೋರ್ವೆಲ್ ನೀರು: ಶಾಸಕ ಕೃಷ್ಣನಾಯಕ್

ಕೊಮಾರನಹಳ್ಳಿ ಕೆರೆಗೆ ಬೋರ್ವೆಲ್ ನೀರು: ಶಾಸಕ ಕೃಷ್ಣನಾಯಕ್  Borewell water for Komaranahalli Lake: MLA Krishna Nayak


ಹೂವಿನಹಡಗಲಿ, ಸೆ.15: ತುಂಗಭದ್ರಾ ನದಿಯಿಂದ ಸಿಂಗಟಾಲೂರು ಏತ ನೀರಾವರಿ ಯೋಜನೆ ಮೂಲಕ ತಾಲೂಕಿನ ಕೆಲ ಕೆರೆಗಳಿಗೆ ನೀರು ಹರಿಸಲಾಗುತ್ತಿದೆ. ಆದರೆ ಕೊಮಾರನಹಳ್ಳಿ ತಾಂಡಾದ ಕೆರೆ ಸಂಪೂರ್ಣ ಒಣಗಿದ್ದು, ಒಂದು ಹನಿ ನೀರೂ ಇಲ್ಲದಂತಾಗಿದೆ.  ಇದನ್ನು ಗಮನಿಸಿದ ಶಾಸಕ ಕೃಷ್ಣನಾಯಕ್ ಅವರು ಗ್ರಾಮಸ್ಥರ ಸಹಕಾರದೊಂದಿಗೆ ಹೊಸದಾಗಿ ಕೊಳವೆಬಾವಿ ಕೊರೆಸಿ, ಮಂಗಳವಾರ ಕೆರೆಗೆ ಬೋರ್ವೆಲ್ ನೀರು ಹರಿಸಿದ್ದಾರೆ.  ಮುಂಬರುವ ಬೇಸಿಗೆಯಲ್ಲಿ ಜನರು ಹಾಗೂ ಜಾನುವಾರುಗಳಿಗೆ ನೀರಿನ ಸಮಸ್ಯೆ ಉಂಟಾಗದಂತೆ, ಕಾಡುಪ್ರಾಣಿಗಳಿಗೂ ನೀರು ಲಭ್ಯವಾಗುವ ಉದ್ದೇಶದಿಂದ ಕೆರೆಯನ್ನು ಬೋರ್ವೆಲ್ ನೀರಿನಿಂದ ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಈ ಮೂಲಕ ವನ್ಯಜೀವಿಗಳಿಗೆ ನೀರಿನ ಕೊರತೆಯಾಗದಂತೆ ಅಗತ್ಯ ಕ್ರಮ ವಹಿಸಲಾಗಿದೆ.