ಪುಸ್ತಕಗಳು ಒಳ್ಳೆಯ ಗೆಳೆಯರು : ಪ್ರೇಮಚಂದ ಲೆಂಗಡೆ
ಲೋಕದರ್ಶನ ವರದಿ
ಬೆಳಗಾವಿ.ಮೇ.2: ಎಷ್ಟು ಒಳ್ಳೊಳ್ಳೆಯ ಪುಸ್ತಕಗಳನ್ನು ಓದುತ್ತಿರೋ ಅವು ನಿಮಗೆ ಮಾರ್ಗದರ್ಶನ ಮಾಡುತ್ತಾ ಹೋಗುತ್ತವೆ ಅಲ್ಲದೆ ಅವುಗಳೇ ನಿಮ್ಮ ನಿಜವಾದ ಸ್ನೇಹಿತರಾಗುತ್ತವೆ. ಓದಿಗೆ ಸರಿಸಾಟಿ ಯಾವುದು ಇಲ್ಲ. ವಿದ್ಯಾಥರ್ಿಗಳು ಓದಿನಿಂದ ಮಾತ್ರ ಯಶಸ್ಸನ್ನು ಸಾಧಿಸಲು ಸಾಧ್ಯ ಎಂದು ಉದ್ಯಮಿ ಭರತೇಶ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರು ಆದ ಪ್ರೇಮಚಂದ ಲೇಂಗಡೆ ಅವರು ಇಂದಿಲ್ಲಿ ಹೇಳಿದರು.
ಗುರುವಾರದಂದು ಭರತೇಶ ಶಿಕ್ಷಣ ಸಂಸ್ಥೆಯ ಗ್ಲೋಬಲ್ ಬಿಸಿನೆಸ್ ಸ್ಕೂಲ್ ನ ಕರ್ಮವೀರ್ ಡಾ. ಭಾವುರಾವ್ ಪಾಟೀಲ್ ಗ್ರಂಥಾಲಯ ದಲ್ಲಿ ಪುಸ್ತಕ ಪ್ರದರ್ಶನವನ್ನು ಉದ್ಘಾಟಿಸಿ ಮಾತಾನಾಡಿದ ಅವರು, ಒಂದೇ ಪುಸ್ತಕಗಳು ಮನುಷ್ಯನಿಗೆ ಬೇರೆ ಬೇರೆ ರೀತಿಯ ಅನುಭವಗಳನ್ನು ನೀಡುತ್ತವೆ. ನಾನು ಇವತ್ತಿಗೂ ಪುಸ್ತಕಗಳನ್ನು ಕೊಳ್ಳುತ್ತೇನೆ ಅಲ್ಲದೆ ಓದುತ್ತ ಬಂದಿದ್ದೇನೆ, ಓದಿದ ನಂತರ ಅದರಲ್ಲಿಯ ವಿಷಯವನ್ನು ಇನ್ನೊಬ್ಬರೊಂದಿಗೆ ಹಂಚಿಕೊಳ್ಳುವುದರಲ್ಲಿ ಸಿಗುವ ಆನಂದ ನನಗೆ ಮತ್ತೆದರಲ್ಲಿಯೂ ಕಂಡಿಲ್ಲ ಎಂದು ಅವರು ಹೇಳಿದರು.
ಗ್ಲೋಬಲ್ ಬಿಸಿನೆಸ್ ಸ್ಕೂಲ್ ನ ಚೇರಮನ್ ರಾದ ವಿನೋದ್ ದೊಡ್ಡಣ್ಣವರ ಮಾತನಾಡಿ ಗ್ರಂಥಾಲಯ ನಡೆದು ಬಂದ ದಾರಿ ಮತ್ತು ವಿದ್ಯಾಥರ್ಿಗಳು ಪುಸ್ತಕಗಳ ಉಪಯೋಗವನ್ನು ಹೆಚ್ಚು ಹೆಚ್ಚಾಗಿ ಉಪಯೋಗಿಸಬೇಕು, ನೀವು ಓದಿದರೆ ಮಾತ್ರ ಮುಂದೆ ನಿಮಗೆ ಎಂತಹ ಸವಾಲುಗಳು ಬಂದರು ಅವುಗಳನ್ನು ಎದುರಿಸುವ ಸಾಮಥ್ರ್ಯ ಬರುತ್ತದೆ.ವಿಶೇಷವಾಗಿ ವಿದ್ಯಾಥರ್ಿಗಳ ಸಂದರ್ಶನದಲ್ಲಿ, ಗುಂಪು ಚಚರ್ೆಯಲ್ಲಿ ಹಾಗೂ ವೃತ್ತಿ ಜೀವನದಲ್ಲಿ ಪುಸ್ತಕಗಳ ಉಪಯೋಗ ತುಂಬಾ ಇದೆ ಎಂದು ಹೇಳಿದರು.
ಭರತೇಶ ಶಿಕ್ಷಣ ಸಂಸ್ಥೆಯ ಕಾರ್ಯದಶರ್ಿ ರಾಜೀವ ದೊಡ್ಡಣ್ಣವರ ಮಾತನಾಡಿ ಶಿಕ್ಷಣ ಸಂಸ್ಥೆಯ ವತಿಯಿಂದ ಗ್ರಂಥಾಲಯಕ್ಕೆ ಬೇಕಾದ ಇನ್ನೂ ಹೆಚ್ಚಿನ ಸೌಲಭ್ಯಗಳನ್ನು ಒದಗಿಸಿ ಕೊಡಲಾಗುವುದು ಎಂದು ಹೇಳಿದರು.ಭರತೇಶ ಶಿಕ್ಷಣ ಸಂಸ್ಥೆಯ ಪದಾಧಿಕಾರಿಗಳಾದ ಪ್ರಕಾಶ ದೊಡ್ಡಣ್ಣವರ, ಶ್ರೀಪಾಲ ಖೇಮಲಾಪುರೆ, ಭೂಷಣ ಮಿಜರ್ಿ, ಮಹಾವೀರ ಉಪಾಧ್ಯೆ, ಶ್ರೀಮತಿ ಅನುಪಮಾ ಶಿರಹಟ್ಟಿ, ಪ್ರಾಧ್ಯಾಪಕರಾದ ಡಾ. ಎ. ಆರ್. ರೊಟ್ಟಿ, ನಿದರ್ೆಶಕರಾದ ಡಾ. ಪ್ರಸಾದ ದಡ್ಡಿಕರ, ಸಹಾಯಕ ಗ್ರಂಥಪಾಲಕರಾದ ಕುಮಾರಿ ಜ್ಯೋತಿ ಪಾಟೀಲ್ ಮತ್ತು ಎಲ್ಲ ಸಿಬ್ಬ್ಬಂದಿ ಹಾಗೂ ವಿದ್ಯಾಥರ್ಿಗಳು ಉಪಸ್ಥಿತರಿದ್ದರು. ಕರ್ಮವೀರ ಡಾ. ಭಾವುರಾವ್ ಪಾಟೀಲ್ ಗ್ರಂಥಾಲಯದ ಗ್ರಂಥಪಾಲಕರಾದ ಡಾ. ಭರತ ಭೀ ಅಲಸಂದಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಶ್ರೀಮತಿ ಸ್ವಾತಿ ಜೋಗ ಅವರು ವಂದನಾರ್ಪಣೆ ಮಾಡಿದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 