ಪುಸ್ತಕಗಳು ಸಂಸ್ಕೃತಿಯ ಪ್ರತೀಕ: ರಾಮಚಂದ್ರ ಹೆಗಡೆ
Books are a symbol of culture: Ramachandra Hegde
ಪುಸ್ತಕಗಳು ಸಂಸ್ಕೃತಿಯ ಪ್ರತೀಕ: ರಾಮಚಂದ್ರ ಹೆಗಡೆ
ಮುದ್ದೇಬಿಹಾಳ 02: ಪುಸ್ತಕಗಳು ಸಂಸ್ಕೃತಿಯ ಪ್ರತೀಕ. ಕನ್ನಡ ನಾಡು, ನುಡಿ, ಸಂಸ್ಕೃತಿಗಳನ್ನು ಅರಿಯಬೇಕಾದರೆ ಸಾಹಿತಿಗಳು ಬರೆದ ಪುಸ್ತಕಗಳನ್ನು ಓದಬೇಕೆಂದು ಜ್ಞಾನಭಾರತಿ ಪ್ರೌಢಶಾಲೆಯ ಮುಖ್ಯ ಗುರು ರಾಮಚಂದ್ರ ಹೆಗಡೆಯವರು ಹೇಳಿದರು.
ಎಂ ಜಿ ವ್ಹಿ ಸಿ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ ಕನ್ನಡ ರಾಜ್ಯೋತ್ಸವ ಸಂಭ್ರಮದ ದಿನದಂದು ಡಾ. ಪ್ರಕಾಶ ನರಗುಂದ ಹಾಗೂ ಎಚ್. ಜಿ.ಪಾಟೀಲ ಅವರು ಸಂಪಾದಿಸಿದ ಶೋಧನೆ ಸಂಶೋಧನೆ ಕೃತಿ ಲೋಕಾರೆ್ಣಮಾಡಿ ಮಾತನಾಡಿದರು.
ಡಾ. ಪ್ರಕಾಶ ನರಗುಂದ ಅವರು ಈಗಾಗಲೇ ಕನ್ನಡ ಸಾಹಿತ್ಯದ ಅನೇಕ ಪ್ರಕಾರದ ಕೃತಿಗಳನ್ನು ಕನ್ನಡ ನಾಡಿಗೆ ನೀಡಿದ್ದಾರೆ. ಶೋಧನೆ ಸಂಶೋಧನೆ ಈ ಕೃತಿಯಲ್ಲಿ ನಾಡಿನ ಪ್ರಭುದ್ಧ ಲೇಖಕರ ಲೇಖನಗಳನ್ನು ತರಿಸಿ ಅವುಗಳೆಲ್ಲವನ್ನು ಸಂಗ್ರಹಿಸಿ ಮೌಲ್ಯಯುತ ಕೃತಿ ಮಾಡಿದ್ದಾರೆ. ತಾವು ಬೆಳೆಯುವ ಜೊತೆಗೆ ಇತರರನ್ನು ಬೆಳೆಸುವ ಗುಣ ಪ್ರಕಾಶ್ ಅವರದು. ಇಂತಹ ಮೌಲ್ಯಯುತ ಪುಸ್ತಕಗಳನ್ನು ಖರೀದಿ ಮಾಡಿ ಓದಿದರೆ ಬರಹಗಾರನು ಪ್ರೋತ್ಸಾಹಿಸಿದಂತೆ ಆಗುತ್ತದೆ. ಕಥೆ, ಕವನ, ಕಾದಂಬರಿ, ನಾಟಕ ಮುಂತಾದವುಗಳನ್ನು ಮಕ್ಕಳು ಓದುವ ಆಸಕ್ತಿ ಬೆಳೆಸಿಕೊಳ್ಳಬೇಕು. ಈ ಕೃತಿಯ ಒಡಲಾಳದಲ್ಲಿರುವ ಪ್ರತಿಯೊಂದು ಲೇಖಗಳನ್ನು ಓದಿ ಅರ್ಥೈಸಿಕೊಳ್ಳಬೇಕು ಎಂದರು.
ಎಸ್. ಜಿ. ವ್ಹಿ ಸಿ ವಿದ್ಯಾ ಪ್ರಸಾರಕ ವಿಸ್ವಸ್ಥ ನಿಧಿಯ ಕಾರ್ಯದರ್ಶಿ ಅಶೋಕ ತಡಸದ ಅವರು ಉದ್ಘಾಟನೆ ಮಾಡಿ ಮಾತನಾಡುತ್ತ ಈ ಕನ್ನಡ ನಾಡಿನಲ್ಲಿ ಅನೇಕ ಮಹಾನ್ ಪುರುಷರು, ಸಾಹಿತಿಗಳು, ಬರಹಗಾರರು ಇದ್ದಾರೆ. ಅವರ ಕೃತಿಗಳನ್ನು ತೆಗೆದುಕೊಂಡು ಓದಬೇಕು. ಕನ್ನಡ ನುಡಿ, ಜಲ, ನೆಲ ಮುಂತಾದವುಗಳ ಬಗ್ಗೆ ಅಭಿಮಾನವಿರಬೇಕು. ಮುಖ್ಯ ಅತಿಥಿಗಳಾಗಿ ಸಂಸ್ಥೆಯ ಆಡಳಿತಾಧಿಕಾರಿ ಎ ಬಿ ಕುಲಕರ್ಣಿಯವರು ಕನ್ನಡ ರಾಜ್ಯೋತ್ಸವದ ಮಹತ್ವ ಮತ್ತು ಅದರ ಪರಂಪರೆಯ ಕುರಿತು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟು, ಮುಳುಗುಂದ, ಮಾಮನಿ, ಸಿಂಪಿ ಮುಂತಾದ ಪ್ರಾಧ್ಯಾಪಕರ ನಂತರ ಸುಮಾರು ವರ್ಷಗಳ ನಂತರ ಮಹಾವಿದ್ಯಾಲಯದಲ್ಲಿ ಪುಸ್ತಕಗಳು ಲೋಕಾರೆ್ಣಯಾಗಿರಲಿಲ್ಲ. ಡಾ. ಪ್ರಕಾಶ ನರಗುಂದವರು ಬಂದ ನಂತರ ತಾವು ವರ್ಷಕ್ಕೊಂದರಂತೆ ಕೃತಿಗಳನ್ನು ಬರೆದು ಪ್ರತ ವರ್ಷದಕ್ಕೂಮ್ಮೆ ಬಿಡುಗಡೆಗೊಳ್ಳುತ್ತಿರುವುದು ಸಂತೋಷದ ಸಂಗತಿ ಎಂದರು.
ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯ ಎನ್. ಎಸ್. ಪೋಲೇಸಿ ಅವರು ವಹಿಸಿದ್ದರು. ಪ್ರಾಸ್ತಾವಿಕ ನುಡಿಗಳನ್ನು ಕನ್ನಡ ವಿಭಾಗದ ಮುಖ್ಯಸ್ಥ ಡಾ. ಪ್ರಕಾಶ ನರಗುಂದ ಅವರು ಕನ್ನಡ, ಕನ್ನಡಿಗ, ಕರ್ನಾಟಕ ಈ ಮೂರು ವಿಷಯಗಳ ಮೇಲೆ ವಿದ್ಯಾರ್ಥಿಗಳು ಅಧ್ಯಯನ ಮಾಡಬೇಕಾಗಿದೆ. ಕನ್ನಡ ರಾಜ್ಯೋತ್ಸವ ಕೇವಲ ಒಂದು ದಿನಕ್ಕೆ ಸೀಮಿತವಾಗಬಾರದು. ಪ್ರತಿ ದಿನವೂ ಕೂಡ ಕನ್ನಡ ನಾಡು-ನುಡಿಯ ಬಗ್ಗೆ ಅಭಿಮಾನವಿರಬೇಕಾಗಿದೆ. ಕರ್ನಾಟಕ ಏಕೀಕರಣಕ್ಕೆ ದುಡಿದ ಅನೇಕ ಸಾಹಿತಿಗಳ ಬಗ್ಗೆ ಸ್ಮರಣೆ ಮಾಡುವುದು ಅತಿ ಅವಶ್ಯಕ ಎಂದರು.
ವೇದಿಕೆ ಮೇಲೆ ಡಾ. ಎಂ ಆಯ್ ಬಿರಾದಾರ, ಡಾ. ಎ ಎ ಮುಲ್ಲಾ ಎಚ್. ಜಿ. ಪಾಟೀಲ ಉಪಸ್ಥಿತರಿದ್ದರು. ಸ್ವಾಗತವನ್ನು ಕುಮಾರ ಸಂಗಮೇಶ ರಾಥೋಡ, ವಂದನಾರೆ್ಣ ಶ್ವೇತಾ ಬಿರಾದಾರ, ನಿರೂಪಣೆಯನ್ನು ಎಂ ಎ ಓಕಳಿ ನೆರವೇರಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 