ರಾಷ್ಟ್ರೋತ್ಥಾನ ಬಳಗದಿಂದ ಪುಸ್ತಕ ಬಿಡುಗಡೆ

ರಾಷ್ಟ್ರೋತ್ಥಾನ ಬಳಗದಿಂದ ಪುಸ್ತಕ ಬಿಡುಗಡೆ Book release by Rashtrotthana Balaga

ರಾಣೇಬೆನ್ನೂರು 16: ಭಾರತದ ನೈಜ ಇತಿಹಾಸವನ್ನು ನಮ್ಮ ಸಮಾಜ ಅಧ್ಯಯನ ಮಾಡಬೇಕು ಹಾಗೂ ಹೋರಾಟದ ಇತಿಹಾಸವನ್ನು ಮುಂದಿನ ಪೀಳಿಗೆಗೆ ಪರಿಚಯಿಸಬೇಕು ಎಂದು ರಾಮಕೃಷ್ಣ ಆಶ್ರಮದ ಪ್ರಕಾಶಾನಂದ ಮಹಾರಾಜ ಸ್ವಾಮೀಜಿ ನುಡಿದರು.

ನಗರದ ನಾಗಶಾಂತಿ ಉನ್ನತಿ ಪದವಿ ಕಾಲೇಜಿನ ಸಭಾಂಗಣದಲ್ಲಿ ರಾಷ್ಟ್ರೋತ್ಥಾನ ಪರಿಷತ್ ಹಾಗೂ ಬಳಗದ ವತಿಯಿಂದ “ಅವಿಶ್ರಾಂತ ಧ್ಯೇಯ ಜೀವಿ ಮೈ.ಚ ಜಯದೇವ ಬದುಕು-ನೆನಪು ಮತ್ತು ಇತಿಹಾಸದ ಸೆರಗು (ಎಸ್‌.ಆರ್‌. ರಾಮಸ್ವಾಮಿ ಅವರ ಪರಾಮರ್ಶ ಪ್ರಬಂಧಗಳು) ಎಂಬ ಕೃತಿಗಳ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು,  

ಕರ್ನಾಟಕ ಉತ್ತರ ಪ್ರಾಂತ ಕಾರ್ಯಕಾರಣಿ ಸದಸ್ಯ ಶ್ರೀಧರ್ ನಾಡಿಗೇರ ಮಾತನಾಡಿ, ಭಾರತ ದೇಶದ ಪ್ರಾಚೀನ ಇತಿಹಾಸ, ಮಧ್ಯಯುಗ, ಆಂಗ್ಲ ಆಡಳಿತ ಕಾಲ ಹಾಗೂ ರಾಜ್ಯಾಂಗ ವಿನ್ಯಾಸ ಸೇರಿದಂತೆ ಅನೇಕ ಮಹತ್ವದ ವಿಷಯಗಳನ್ನು ಒಳಗೊಂಡ ಪರಾಮರ್ಶ ಪ್ರಬಂಧಗಳ ಸಂಗ್ರಹವಾಗಿದೆ. ಜಯದೇವರು ಮೂಲತಃ ಮೈಸೂರಿನವರಾಗಿದ್ದು ದೇಶಸೇವೆಗೆ ತಮ್ಮ ಜೀವನವನ್ನು ಅರ​‍್ಿಸಿದ ಮಹನೀಯರು.

ರಾಷ್ಟ್ರೋತ್ಥಾನದ ಉದಯಕ್ಕೆ ಕಾರಣರಾದವರಲ್ಲಿ ಒಬ್ಬರಾದ ಅವರು ಪ್ರಾಂತ ಕಾರ್ಯವಾಹ ಹಾಗೂ ಪ್ರಚಾರಕರಾಗಿ ಸೇವೆ ಸಲ್ಲಿಸಿದ್ದರು. ಅವರಲ್ಲಿ ಕೇಳುವ ತಾಳ್ಮೆ, ಸರಳ ಜೀವನ ಮತ್ತು ಉದಾತ್ತ ಚಿಂತನೆಗಳಂತಹ ಮಹತ್ವದ ಗುಣಗಳು ಕಂಡುಬರುತ್ತವೆ ಎಂದರು.ಸುರೇಶ್ ಜಂಗಮಶೆಟ್ಟಿ ಮಾತನಾಡಿ, ಯುವ ಪೀಳಿಗೆ ಪುಸ್ತಕ ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು ಹಾಗೂ ಸಮಾಜ ಮತ್ತು ದೇಶ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು.

ರಾಷ್ಟ್ರೋತ್ಥಾನ ಬಳಗದ ಜಿಲ್ಲಾ ಸಂಚಾಲಕ ರಾಮ್ ಮೋಹನ್ ರಾವ್ ಅಧ್ಯಕ್ಷತೆ ವಹಿಸಿದ್ದರು.  ರಾಷ್ಟ್ರೋತ್ಥಾನ ಬಳಗದ ಸದಸ್ಯರಾದ ಬಸವರಾಜ ಕಮ್ಮಾರ್, ಯಲ್ಲಪ್ಪ ಕುಡುಪಲಿ, ಮೃತ್ಯುಂಜಯ ಎಂ.ಎಂ., ಉತ್ತಮ್ ಮೋದಿ, ಅಕ್ಷತಾ, ಮಂಗಳ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಸಂಘ ಪರಿವಾರದ ಕಾರ್ಯಕರ್ತರು, ವಿವಿಧ ಶಾಲೆಗಳ ಶಿಕ್ಷಕರು ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.