ಆಪರೇಷನ್ ಕಮಲ ಕುರಿತು ಪುಸ್ತಕ: ಬಿಜೆಪಿ ನಾಯಕರಿಗೆ ಎಚ್. ವಿಶ್ವನಾಥ್ ಟಾಂಗ್

h.vishwanath

ಮೈಸೂರು, ಜ 31 : ಮಂತ್ರಿಮಂಡಲ ವಿಸ್ತರಣೆ ಸಂದರ್ಭದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತಮ್ಮನ್ನು ಸಹ ಪರಿಗಣಿಸುತ್ತಾರೆ ಎಂದು ಮಾಜಿ ಸಚಿವ  ಎಚ್. ವಿಶ್ವನಾಥ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

ಇದೇ ಕಾಲಕ್ಕೆಆಪರೇಷನ್ ಕಮಲ ಕಾರ್ಯಾಚರಣೆ ಕುರಿತು ಪುಸ್ತಕ ಬರೆಯುತ್ತಿರುವುದಾಗಿಯೂ ವಿಶ್ವನಾಥ್ ಹೇಳುವ ಮೂಲಕ ಮುಂದಿನ ರಾಜಕೀಯ ಬೆಳವಣಿಗೆಗಳು ಕುತೂಹಲಕರಾಗಿರುತ್ತವೆ ಎನ್ನುವ ಸಂಕೇತ ನೀಡಿದ್ದಾರೆ. 

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಲಘಟ್ಟದಲ್ಲಿ ಆದ ಚರ್ಚೆ, ಮಾತು ಉಳಿಸಿಕೊಳ್ಳಬೇಕು. ಈ ವಿಚಾರದಲ್ಲಿ ನನಗೆ ಯಡಿಯೂರಪ್ಪ ಅವರ ಬಗ್ಗೆ ನಂಬಿಕೆ ಇದೆ ಎಂದರು 

ಸಂಪುಟ ವಿಸ್ತರಣೆ ವಿಳಂಬವಾಗುತ್ತಿರುವುದರಿಂದ ಯಾರಿಗೂ ಗೌರವ ಇಲ್ಲದಂತಾಗಿದೆ. ರಾಜ್ಯದ ಅಭಿವೃದ್ಧಿ ಕುಂಠಿತವಾಗುತ್ತಿದ್ದು, ಸಂಪುಟ ವಿಸ್ತರಣೆಯಾಗಲೇಬೇಕು. ಈ ಪ್ರಕ್ರಿಯೆನನ್ನು ಮತ್ತಷ್ಟು ಲಂಬಿಸಬಾರದು ಎಂದು ಹೇಳಿದರು. 

ಉಪ ಚನಾವಣೆಯಲ್ಲಿ ಪರಾಭಗೊಂಡಿರುವವರಿಗೆ ಅಧಿಕಾರ ನೀಡಬಾರದು ಎಂಬ ಯಾವುದೇ ನಿಯಮವಿಲ್ಲ. ಬಿಜೆಪಿ ಶಾಸಕ ಡಾ.ಸುಧಾಕರ್ ಅರಿವಿಲ್ಲದೇ ಮಾತನಾಡಿದ್ದಾರೆ. ತಾವು ನಾಯಕತ್ವ ವಹಿಸಿದ ಬಳಿಕ ಆಪರೇಷನ್ ಕಮಲ ಮೂರ್ತ ರೂಪ ಪಡೆಯಿತು. ರಾಜಕಾರಣದಲ್ಲಿ ಕಾಣುವ ಕೈಗಳಿಗಿಂತ ಕಾಣದ ಕೈಗಳ ಪ್ರಭಾವವೇ ಹೆಚ್ಚಾಗಿರುತ್ತದೆ ಎಂದು ವಿಶ್ವನಾಥ್ ಮಾರ್ಮಿಕವಾಗಿ ನುಡಿದರು.

ರಾಜಕೀಯ ಕ್ಷೇತ್ರ ಸಾಕಷ್ಟು ಕುತೂಹಲಗಳಿಂದ ಕೂಡಿರುತ್ತದೆ. ತಾವು ಕೋಲ್ಕತ್ತಾ, ಬಾಂಬೆ ಮತ್ತಿತರ ಪ್ರದೇಶಗಳಿಗೆ ಹೋಗಿದ್ದು ಸೇರಿದಂತೆ ಪ್ರತಿ ವಿಚಾರಗಳ ಬಗ್ಗೆ ತಮ್ಮಲ್ಲಿ ದಾಖಲೆ ಇದೆ. ಇದರಲ್ಲಿ ಬಿಜೆಪಿಯವರಷ್ಟೇ ಅಲ್ಲ ಕಾಂಗ್ರೆಸ್‌ನವರು ಇದ್ದಾರೆ. ಆಪರೇಷನ್ ಕಮಲದ ಸತ್ಯ ತಿಳಿಸಲು ಪುಸ್ತಕ ಬರೆಯುತ್ತಿರುವುದಾಗಿ ಬಿಜೆಪಿ ನಾಯಕರಿಗೆ ಟಾಂಗ್ ನೀಡಿದರು.