163 ಮಕ್ಕಳಿಗೆ ಪುಸ್ತಕ ಬ್ಯಾಗ್ ಸ್ವೆಟರ್ ವಿತರಣೆ
Book bags and sweaters distributed to 163 children
ಹೂವಿನ ಹಡಗಲಿ 30: ಮಕ್ಕಳು ಹೆಚ್ಚು ಓದಿ ಉತ್ತಮ ಸಾಧನೆ ಮಾಡಿರಿ ಎಂದು ಎಂ ಎಂ ಪಾಟೀಲ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪ್ರೊ ದಾಸರಹಳ್ಳಿ ಸತೀಶ್ ಹೇಳಿದರು.ತಾಲೂಕಿನ ದಾಸರಹಳ್ಳಿ ಹಾಗೂ ಕೊಂಬಳಿ ನವನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಒಟ್ಟು 162 ವಿದ್ಯಾರ್ಥಿಗಳಿಗೆ ಬೆಂಗಳೂರಿನ ವಂಡರ್ ಲಾ ಸಂಸ್ಥೆಯ ವತಿಯಿಂದ ಸರ್ಕಾರಿ ಪ್ರಾಥಮಿಕ ಶಾಲಾ ಮಕ್ಕಳಿಗೆ ಕಲಿಕೆಗೆ ಪೂರಕವಾದ ಪರಿಕರಗಳನ್ನು ಉಚಿತವಾಗಿ ವಿತರಣೆ ಮಾಡಿ ಅವರು ಮಾತನಾಡಿದರು.ಕನ್ನಡ ಸರ್ಕಾರಿ ಶಾಲೆಗಳಲ್ಲಿ ಓದಿದವರೇ ಹೆಚ್ಚು ಯಶಸ್ಸು ಗಳಿಸಿದ್ದಾರೆ. ಹಳ್ಳಿಗಳಲ್ಲಿ ಪಾಲಕ ಪೋಷಕರು ಮಾತೃಭಾಷೆಯಲ್ಲಿ ಶಿಕ್ಷಣ ನೀಡುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಗ್ರಾಮೀಣ ಪ್ರದೇಶದ ಬಡ ಮಧ್ಯಮ ವರ್ಗದ ಕುಟುಂಬದವರ ಮಕ್ಕಳ ಆರ್ಥಿಕ ಸ್ಥಿತಿ ಅರಿತು ನಮ್ಮ ಸಂಸ್ಥೆಯ ವತಿಯಿಂದ ಉಚಿತವಾಗಿ ಒದಗಿಸುವ ಕಾರ್ಯ ಆಯೋಜಿಸಲಾಗಿದೆ ಎಂದು ಮುಖ್ಯಸ್ಥರಾದ ರುದ್ರೇಶ್ ತಿಳಿಸಿದರು.ಸಂಸ್ಥೆಯ ಎಚ್ ಆರ್ ಎಜಿಮ್ ಮಹೇಶ್ ಪಾಟೀಲ್ ಮಾತನಾಡಿ ಮಕ್ಕಳು ಎಲ್ಲಾ ವಿಷಯಗಳ ಬಗ್ಗೆ ಕುತೂಹಲ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದರು. ಉಪನ್ಯಾಸಕರಾದ ಕೃಷ್ಣ ದಾಸರಹಳ್ಳಿ ದಾಸರಹಳ್ಳಿನಿರಂತರ ಓದಿನಿಂದ ಬೌದ್ಧಿಕ ಬೆಳವಣಿಗೆ ಆಗುತ್ತದೆ ಎಂದು ಹೇಳಿದರು.ಉಭಯ ಶಾಲೆಯ ಮಕ್ಕಳಿಗೆ ನೋಟ್ ಪುಸ್ತಕ, ಪೆನ್ನು (ಲೇಖನಿ) ಸ್ಕೂಲ್ ಬ್ಯಾಗ್ ಹಾಗೂ ಸ್ವೆಟರ್ (ಬೆಚ್ಚಗಿನ ಉಡುಪು) ಗಳನ್ನು ವಿತರಿಸಿದರು.ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸ್ವಾಮ್ಯಾ ನಾಯ್ಕಶಾಲೆಯ ಮುಖ್ಯ ಗುರುಗಳಾದ ಕೃಷ್ಣನಾಯ್ಕ, ಸಿದ್ದಮ್ಮ,ಸರ್ಕಾರಿ ನೌಕರರ ಸಂಘದ ನಿರ್ದೇಶಕ ಕೆ ಜಗದೀಶ್ ಎಸ್ ಡಿ ಎಂ ಸಿ ಅಧ್ಯಕ್ಷಕೃಷ್ಣ ನಾಯ್ಕ್, ಶಿಕ್ಷಕರಾದ ಚಂದ್ರಕಾಂತ ಮರೋಳ, ರಾಜಶೇಖರ್ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 