ಬೆರಗು ಪ್ರಶಸ್ತಿಗೆ ಪುಸ್ತಕ, ಹಸ್ತಪ್ರತಿ ಆಹ್ವಾನ
Book, manuscript invitation for Beragu Award
ಆಲಮೇಲ 22: ವಿಜಯಪುರ ಜಿಲ್ಲೆಯ ಕಡಣಿ ಗ್ರಾಮದ ಬೆರಗು ಪ್ರಕಾಶನವು ರಾಜ್ಯಮಟ್ಟದ ಪ್ರೊ. ಎಚ್.ಟಿ.ಪೋತೆ ಪ್ರಶಸ್ತಿ ನೀಡಲು ಹಸ್ತಪ್ರತಿಗಳನ್ನು ಆವ್ಹಾನಿಸಿದೆ. ಪ್ರಶಸ್ತಿ ರೂ. 10 ಸಾವಿರ ನಗದು, ಪ್ರಶಸ್ತಿ ಫಲಕ ಸ್ಮರಣಿಕೆ ಒಳಗೊಂಡಿದೆ. ಆಯ್ಕೆಯಾದ ಹಸ್ತಪ್ರತಿಯನ್ನು ಪ್ರಕಾಶನದಿಂದ ಪ್ರಕಟಿಸಿ ಪ್ರಕಾಶನದ 8ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಂಚಾಲಕಿ ವಿಜಯಲಕ್ಷ್ಮಿ ಕತ್ತಿ ತಿಳಿಸಿದ್ದಾರೆ.
ಸಂಶೋಧನೆ ಮತ್ತು ಅನುವಾದಿತ ಸಂಬಂಧಿ ಬರಹಗಳು ಮುದ್ರಣಕ್ಕೆ ಸಿದ್ಧಪಡಿಸಿದ್ದರೆ ಅಂತಹ ಹಸ್ತಪ್ರತಿಗಳನ್ನು ನುಡಿ ಅಥವಾ ಬರಹದಲ್ಲಿ ಟೈಪ್ ಮಾಡಿದ ತಮ್ಮ ಅಪ್ರಕಟಿತ ಕೃತಿಯ ಎರಡು ಪ್ರತಿಗಳನ್ನು ಸೆಪ್ಟೆಂಬರ್ 25ರೊಳಗೆ ತಲುಪುವಂತೆ ಕಳಿಸಲು ಕೋರಲಾಗಿದೆ.
ಪ್ರಕಟಿತ ಕೃತಿಗಳ ಆಹ್ವಾನ: ಕಡಣಿ ಬೆರಗು ಪ್ರಕಾಶನವು ದಿ. ಯಮುನಾಬಾಯಿ ರಾಜಣ್ಣ ಭೋವಿ ಸ್ಮರಣಾರ್ಥ ಅವರ ಹೆಸರಿನಲ್ಲಿ ಪ್ರತಿವರ್ಷ ನೀಡುವ ಬೆರಗು ಪ್ರಶಸ್ತಿ ನೀಡಲು 2024ನೇ ಸಾಲಿನಲ್ಲಿ ಪ್ರಕಟವಾದ ಸಾಹಿತ್ಯದ ಎಲ್ಲಾ ಪ್ರಕಾರಗಳ ಕೃತಿಗಳನ್ನು ಆವ್ಹಾನಿಸಿದೆ. ಪ್ರಶಸ್ತಿಯು 5ಸಾವಿರ ರೂ. ನಗದು ಮತ್ತು ಪ್ರಶಸ್ತಿ ಪತ್ರ ಒಳಗೊಂಡಿದೆ. ಆಸಕ್ತ ಲೇಖಕರು ತಮ್ಮ ಕೃತಿಯ ಎರಡು ಪ್ರತಿಗಳನ್ನು ಸೆಪ್ಟೆಂಬರ್ 25ರೊಳಗೆ ಸಲ್ಲಿಸಬೇಕು. ಪಿಎಚ್.ಡಿ ಪ್ರಬಂಧ ಹೊರತುಪಡಿಸಿ ಕನ್ನಡದ ಎಲ್ಲಾ ಪ್ರಕಾರದ ಪುಸ್ತಕಗಳನ್ನು ಪ್ರಶಸ್ತಿಗೆ ಸಲ್ಲಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಹಸ್ತಪ್ರತಿ ಮತ್ತು ಪುಸ್ತಕ ಕಳಿಸುವ ವಿಳಾಸ: ವಿಜಯಲಕ್ಷ್ಮಿ ಆರ್. ಕತ್ತಿ, ಬೆರಗು ಪ್ರಕಾಶನ, ವಿನಾಯಕ ನಗರ, ಆಲಮೇಲ -586 202, ತಾ: ಆಲಮೇಲ, ಜಿಲ್ಲೆ: ವಿಜಯಪುರ, ಮೊ: 7795341335
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 