ಶಿಗ್ಗಾವಿ ಸವಣೂರ ಅಭಿವೃದ್ಧಿಯೇ ಬೊಮ್ಮಾಯಿ ಸಂಕಲ್ಪ

Bommai's vision is the development of Shiggavi Savanur

ಶಿಗ್ಗಾವಿ ಸವಣೂರ ಅಭಿವೃದ್ಧಿಯೇ ಬೊಮ್ಮಾಯಿ ಸಂಕಲ್ಪ 

ಶಿಗ್ಗಾವಿ 01 : ಶಿಗ್ಗಾವಿ-ಸವಣೂರ ವಿಧಾನಸಭಾ ಕ್ಷೇತ್ರಕ್ಕೆ ನಮ್ಮ ಸರ್ಕಾರದ ಅವಧಿಯಲ್ಲಿ ಮಂಜೂರಾಗಿದ್ದ 300 ಕೋಟಿ ರೂ. ಅನುದಾನದಲ್ಲಿ ಬಾಕಿ ಉಳಿದಿರುವ ಅನುದಾನವನ್ನು ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಗದಗ ಲೋಕಸಭಾ ಸದಸ್ಯ  ಬಸವರಾಜ ಬೊಮ್ಮಾಯಿಯವರು ಪತ್ರ ಮುಖೇನ ಪ್ರಮುಖವಾದ  ಲೋಕೋಪಯೋಗಿ ಇಲಾಖೆಗೆ ಸಂಬಂಧಪಟ್ಟ ಕಾಮಗಾರಿಗಳು, ನೀರಾವರಿ ಇಲಾಖೆಗೆ ಸಂಬಂಧಪಟ್ಟ ಕಾಮಗಾರಿಗಳು, ಮುಜರಾಯಿ ಮತ್ತು ಅಲ್ಪಸಂಖ್ಯಾತರ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಸಂಬಂಧಪಟ್ಟ ಕಾಮಗಾರಿಗಳು, ನಿಗಮ ಮಂಡಳಿಗಳಿಂದ ಆಗ ಬೇಕಾದಂತಹ ಕಾಮಗಾರಿಗಳನ್ನು ಸ್ಥಗಿತಗೊಳಿಸಲಾಗಿತ್ತು ಅವುಗಳನ್ನು ಈಗಲಾದರೂ ಬಿಡುಗಡೆಗೊಳಿಸಿ ಎಂದು ಕೋರಿದ್ದಾರೆ.