ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ : ಕಲಾಪ ಮುಂದೂಡಿಕೆ
Bomb threat to court: Proceedings postponed
ಕಾರವಾರ 16 : ಕಾರವಾರ ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ ಮೇಲ್ ಬಂದ ಹಿನ್ನೆಲೆಯಲ್ಲಿ ಕೋರ್ಟ್ ಕಲಾಪವನ್ನು ಸೋಮವಾರ ಮುಂದೂಡಲಾಗಿದೆ.
ರಾಜ್ಯದ ದಾವಣಗೆರೆ , ಧಾರವಾಡ ಜಿಲ್ಲೆಯ ನ್ಯಾಯಾಲಯಗಳಿಗೆ ಬಾಂಬ್ ಬೆದರಿಕೆ ಬಂದಿದ್ದು ಉತ್ತರಕನ್ನಡ ಜಿಲ್ಲೆಯ ಕಾರವಾರದ ಜಿಲ್ಲಾ ನ್ಯಾಯಾಲಯಕ್ಕೂ ಬಾಂಬ್ ಬೆದರಿಕೆ ಮೇಲ್ ಕಳುಹಿಸಲಾಗಿದೆ. ಕಾರವಾರ ನಗರದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆಡಳಿತ ಕಚೇರಿಯ ಕಂಪ್ಯೂಟರ್ ವಿಭಾಗಕ್ಕೆ ಠಿಜರಿಣಣಣಚಿಡಿಚಿ ಞಚಿಟಿಟಿಚಿಜಚಿಅಞಚಿಡಿಟಿಚಿಣಚಿ.ರಠ.ಟಿಗೆ ಬಾಂಬ್ ಬೆದರಿಕೆ ಮೇಲ್ ಕಳುಹಿಸಲಾಗಿತ್ತು. 2 ಆರ್ಡಿಎಕ್ಸ್ ಹಿ ಐಇಡಿ ಕೋರ್ಟ್ ಜಡ್ಜ್ ಚೇಂಬರ್ನಲ್ಲಿ ಪ್ಲಾಂಟ್ ಮಾಡಲಾಗಿದೆ. ಶೀಘ್ರದಲ್ಲಿ ಬ್ಲಾಸ್ಟ್ ಆಗಲಿದೆ, ತಮಿಳುನಾಡಿನಲ್ಲಿ ಇಡಬ್ಲ್ಯುಎಸ್ (ಆರ್ಥಿಕ ಹಿಂದುಳಿದ ವರ್ಗ) ಮೀಸಲಾತಿ ರಕ್ಷಿಸಿ, ಕೋರ್ಟ್ನಲ್ಲಿರುವ ಎಲ್ಲಾ ಜನರನ್ನು 12.15ರ ಒಳಗಾಗಿ ಸ್ಥಳಾಂತರ ಮಾಡಿ ಎಂದು ಈ ಮೇಲ್ ನಲ್ಲಿ ಇತ್ತು. ಡಿಎಂಕೆಯ ಜಾಫರ್ ಸಾದಿಕ್ನಿಂದ ಪೂರೈಕೆ ಎಂದು ಈಮೇಲ್ನಲ್ಲಿ ಬರೆಯಲಾಗಿದೆ. ಬಾಂಬ್ ಬೆದರಿಕೆಯ ಹಿನ್ನೆಲೆಯಲ್ಲಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಎಲ್ಲಾ ಕಲಾಪಗಳು ಮುಂದೂಡಲಾಯಿತು. ಕೋರ್ಟ ಆವರಣದಲ್ಲಿ ಮೆಟಲ್ ಡಿಟೆಕ್ಟರ್ ಹಾಕಿ ತಪಾಸಣೆ ಮಾಡಿ, ವಕೀಲರು ಹಾಗೂ ಸಿಬ್ಬಂದಿ, ಸಾರ್ವಜನಿಕರನ್ನು ಬಿಡಲಾಯಿತು. ಕೋರ್ಟ ಆವರಣದಲ್ಲಿ ಬಿಗಿ ಬಂದಬಸ್ತ್ ಏರ್ಾಡಿಸಲಾಗಿದೆ.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 