ಬ್ಯೂನಸ್ ಐರಿಸ್, ಜನವರಿ 25, 118 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ವಿಮಾನವನ್ನು, ಪೆರುವಿನ ಪಿಸ್ಕೋ ನಗರದಲ್ಲಿ ಹುಸಿ ಬಾಂಬ್ ಬೆದರಿಕೆ ಹಿನ್ನೆಲೆಯಲ್ಲಿ ತುರ್ತಾಗಿ ಇಳಿಸಲಾಯಿತು ಎಂದು ರಾಷ್ಟ್ರೀಯ ಸಾರಿಗೆ ಸಚಿವಾಲಯ ತಿಳಿಸಿದೆ."ಜನವರಿ 24 ಶುಕ್ರವಾರದಂದು, ಲಾಟಾ [ವಿಮಾನಯಾನ] ದ ಎಲ್‌ಎ2121 ವಿಮಾನವು ಲಿಮಾದಿಂದ ಜೂಲಿಯಾಕಾಗೆ ಹೋಗುತ್ತಿತ್ತು. ಬಾಂಬ್ ಬೆದರಿಕೆ ಹಿನ್ನೆಲೆಯಲ್ಲಿ ಪಿಸ್ಕೋದ ವಿಮಾನ ನಿಲ್ದಾಣದಲ್ಲಿ ಇಳಿಯಲು ಸಿಬ್ಬಂದಿ ನಿರ್ಧರಿಸಿದರು ”ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.ವಿಮಾನವು ಯಶಸ್ವಿಯಾಗಿ ಅಂತಾರಾಷ್ಟ್ರೀಯ ಕಾಲಮಾನ 20:50ಕ್ಕೆ ಕ್ಕೆ ಇಳಿಯಿತು, ಎಲ್ಲಾ ಪ್ರಯಾಣಿಕರನ್ನು ವಿಮಾನದಿಂದ ಸ್ಥಳಾಂತರಿಸಲಾಗಿದೆ. ಪೊಲೀಸ್ ಅಧಿಕಾರಿಗಳು ಸ್ಥಳದಲ್ಲಿ ಪರಿಶೀಲನೆ ನಡೆಸಿದರು. ಪ್ರಯಾಣಿಕರು ಮತ್ತು ಸಿಬ್ಬಂದಿ ಸದಸ್ಯರು ವಿಮಾನ ನಿಲ್ದಾಣದ ಟರ್ಮಿನಲ್‌ನಲ್ಲಿ ಉಳಿದಿದ್ದರು.