ಮಾಸ್ಕೋ, ಮೇ 9,ಇರಾನ್ ನೊಂದಿಗಿರುವ ಗಡಿ ಸಮೀಪ ಪಾಕಿಸ್ತಾನ ಸೇನಾ ವಾಹನವೊಂದನ್ನು ಐಇಡಿ ಮೂಲಕ ದಾಳಿ ನಡೆಸಿದ ಕಾರಣ ತನ್ನ ಆರು ಮಂದಿ ಯೋಧರು ಸಾವನ್ನಪ್ಪಿದ್ದಾರೆ ಎಂದು ರಾಷ್ಟ್ರೀಯ ಸಶಸ್ತ್ರ ಪಡೆಗಳ ವಕ್ತಾರ ಮೇಜರ್ ಜನರಲ್ ಬಾಬರ್ ಇಫ್ತಿಖಾರ್ ಹೇಳಿದ್ದಾರೆ.ಪರ್ವತ ಪ್ರದೇಶವಾದ ಮೆಕರನ್ ಮಾರ್ಗವನ್ನು ಭಯೋತ್ಪಾದಕರು ಬಳಸುವುದನ್ನು ತಪ್ಪಿಸಲು ಬುಲೆಡಾದಲ್ಲಿ ಗಸ್ತು ನಡೆಸಿ ವಾಪಸಾಗುತ್ತಿದ್ದ ಸೇನಾ ವಾಹನವನ್ನು ಗುರಿಯಾಗಿಸಿ ದೂರ ನಿಯಂತ್ರಕದಿಂದ ಐಇಡಿಯಿಂದ ಸ್ಪೋಟಿಸಿದ್ದರಿಂದ ಆರು ಮಂದಿ ಯೋಧರು ಮೃತಪಟ್ಟಿದ್ದಾರೆ ಎಂದು ವಕ್ತಾರರು ಟ್ವೀಟರ್ ನಲ್ಲಿ ಬರೆದುಕೊಂಡಿದ್ದಾರೆ.ಆದರೆ ಯಾವುದೇ ಈ ಕೃತ್ಯದ ಹೊಣೆಯನ್ನು ಈವರೆಗೆ ಯಾವುದೇ ಭಯೋತ್ಪಾದಕ ಗುಂಪು ಹೊತ್ತುಕೊಂಡಿಲ್ಲ ಪಾಕಿಸ್ತಾನ 1947ರಿಂದಲೂ ಬಲೂಚಿಸ್ತಾನದಲ್ಲಿ ಬಂಡುಕೋರ ಸಮಸ್ಯೆ ಎದುರಿಸುತ್ತಿದ್ದು, ಬಲೂಚ್ ರಾಷ್ಟ್ರೀಯವಾದಿ ಸಂಘಟನೆಗಳು ಪ್ರತ್ಯೇಕ ದೇಶಕ್ಕಾಗಿ ಹೋರಾಡುತ್ತಿವೆ. ಇರಾನ್ ಅಫ್ಗಾನಿಸ್ತಾನ ಗಡಿಯಲ್ಲಿ ಬಲೂಚಿ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿದೆ.