ಎಸ್ಎಸ್ ರಾಜಮೌಳಿ 'ಆರ್‌ಆರ್‌ಆರ್' ಚಿತ್ರದ ಸೆಟ್‌ನಲ್ಲಿ ಬಾಲಿವುಡ್ ನಟ ಅಜಯ್ ದೇವಗನ್

ಮುಂಬೈ ಜ 22, ಬಾಲಿವುಡ್‌ನ ಸಿಂಘಮ್ ತಾರೆ ಅಜಯ್ ದೇವಗನ್ ಅವರು ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್ ಚಿತ್ರತಂಡವನ್ನು ಸೇರಿಕೊಂಡಿದ್ದಾರೆ. ಇಂದಿನಿಂದ ಅಜಯ್ ದೇವಗನ್ ಭಾಗದ ದೃಶ್ಯಗಳ ಚಿತ್ರೀಕರಣ ನಡೆಯಲಿದೆ.ದಕ್ಷಿಣ ಭಾರತದ ಖ್ಯಾತ ಚಲನಚಿತ್ರ ನಿರ್ದೇಶಕರಾದ ರಾಜಮೌಳಿಯವರ ಆರ್.ಆರ್.ಆರ್. ಚಿತ್ರವನ್ನು 400 ಕೋಟಿ ರೂ.ಗಳ ದೊಡ್ಡ ಬಜೆಟ್‌ನಲ್ಲಿ ನಿರ್ಮಿಸಲಾಗುತ್ತಿದ್ದು, ಈ ಚಿತ್ರ 10 ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.ಆರ್‌ಆರ್‌ಆರ್ ಬಗ್ಗೆ ಮಾಹಿತಿ ನೀಡಿದ ಚಲನಚಿತ್ರ ನಿರ್ಮಾಪಕರು, "ಅಜಯ್ ದೇವಗನ್ ಅವರೊಂದಿಗೆ ನಮ್ಮ ಚಿತ್ರೀಕರಣವನ್ನು ಪ್ರಾರಂಭಿಸಲು ನಮಗೆ ತುಂಬಾ ಸಂತೋಷವಾಗಿದೆ" ಎಂದು ಟ್ವೀಟ್ ಮಾಡಿದ್ದಾರೆ. ಅಜಯ್ ದೇವಗನ್ ಅವರೊಂದಿಗೆ ಜೂನಿಯರ್ ಎನ್.ಟಿ.ಆರ್, ರಾಮ್ ಚರಣ್, ಆಲಿಯಾ ಭಟ್ ಮತ್ತು ಡೈಸಿ ಜೊನಾಸ್ ಆರ್‌ಆರ್‌ಆರ್ ಚಿತ್ರದ ಪ್ರಮುಖ ಪಾತ್ರದಲ್ಲಿದ್ದಾರೆ.