ಅಪರಿಚಿತ ವ್ಯಕ್ತಿ ಶವ ಪತ್ತೆ

ಅಪರಿಚಿತ ವ್ಯಕ್ತಿ ಶವ ಪತ್ತೆ Body of unidentified person found- Belagavi news: 18-07

ಬೆಳಗಾವಿ  18: ನಗರದ ಸಾಂಬ್ರಾ ರೈಲು ನಿಲ್ದಾಣದ ಬಳಿ  ಸುಮಾರು 45 ರಿಂದ 50 ವರ್ಷ ವಯಸ್ಸಿನ ವ್ಯಕ್ತಿಯು ಚಲಿಸುವ ರೈಲಿನಿಂದ ಆಕಸ್ಮಿಕವಾಗಿ ಬಿದ್ದು ಮೃತಪಟ್ಟಿದ್ದಾನೆ ಎಂದು ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. 

ಮೃತ ಪಟ್ಟ ವ್ಯಕ್ತಿ 5.6 ಅಡಿ ಎತ್ತರ, ಮೈಯಿಂದ ತಳ್ಳಗೆ , ದುಂಡನೇ ಮೂಗು, ದುಂಡು ಮುಖ, ತಲೆಯಲ್ಲಿ ಕಪ್ಪು ಬಿಳಿ ಕೂದಲು, ಗೋದಿ ಮೈ ಬಣ್ಣ, ಕಪ್ಪು -ಬಿಳಿ ಮೀಸೆ ಹಾಗೂ ದಾಡಿ ಬಿಟ್ಟಿರುತ್ತಾನೆ. ಗುಲಾಬಿ ಬಣ್ಣದ ಪಿಂಕ ಕಲರ ಪುಲ್ ಶರ್ಟ್‌, ನೀಲಿ ಬಣ್ಣದ ಜೀನ್ಸ್‌ ಫ್ಯಾಂಟ್ ಧರಿಸಿರುತ್ತಾನೆ. ಬಲಗೈನಲ್ಲಿ ಬೆಳ್ಳಿ ಖಡಾ ಇರುತ್ತದೆ.  

ಮೃತಪಟ್ಟ ವ್ಯಕ್ತಿಯ ವಾರಸುದಾರರ ಬಗ್ಗೆ ಮಾಹಿತಿ ದೊರೆತಲ್ಲಿ ನಗರದ ರೈಲ್ವೆ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ: 0831-2405273, ಪೊಲೀಸ್ ಠಾಣೆಯ ಪಿ.ಎಸ್‌.ಐ ಮೊ ಸಂ: 9480802127 ಅಥವಾ ಕಂಟ್ರೋಲ್ ರೂಮ್ ದೂರವಾಣಿ ಸಂಖ್ಯೆ : 080-22871291 ಗೆ ಸಂಪರ್ಕಿಸಬಹುದಾಗಿದೆ ಎಂದು ನಗರದ ರೈಲ್ವೆ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.