ಬೆಳಗಾವಿ 06 : ಕಳೆದ 3 ದಿನಗಳ ಹಿಂದೆ ನಾಪತ್ತೆಯಾಗಿದ್ದ ಅಥಣಿ ನ್ಯಾಯವಾದಿ ಸುಭಾಷ್ ಪಾಟಣಕರ(56) ಕೃಷ್ಣಾ ನದಿಯಲ್ಲಿ ಇಂದು ಶವವಾಗಿ ಪತ್ತೆಯಾಗಿದ್ದಾರೆ.
ಅಥಣಿ ತಾಲೂಕಿನ ಯಲ್ಲಮ್ಮವಾಡಿ ಗ್ರಾಮದ ನಿವಾಸಿಯಾದ ವಕೀಲ ಸುಭಾಷ್ ಅವರು ಡಿ. 3ರಂದು ನಾಪತ್ತೆಯಾಗಿದ್ದರು. ಈ ನಾಪತ್ತೆ ಪ್ರಕರಣ ಕುರಿತು ನಿನ್ನೆಯಷ್ಟೇ ವಕೀಲನ ಪತ್ತೆಗಾಗಿ ಆಗ್ರಹಿಸಿ ಪೋಲಿಸರ ವಿರುದ್ಧ ವಕೀಲರು ಸಹ ಪ್ರತಿಭಟನೆ ನಡೆಸಿದ್ದರು. ಆದರೆ ಇಂದು ಕೃಷ್ಣಾ ನದಿಯಲ್ಲಿ ವಕೀಲ ಸುಭಾಷ್ ಶವವಾಗಿ ಪತ್ತೆಯಾಗಿದ್ದಾರೆ. ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.