ದೇಹ ದಾನ ಶ್ರೇಷ್ಟ ದಾನವಾಗಿದೆ : ಸಂತೋಷ ನಾಯಕ
Body donation is the best donation: Santhosh Nayak
ವಿಜಯಪುರ 28 : ದೇಹದಾನ ಮಾಡುವುದರಿಂದ ಅಂಗಾಂಗ ಅಗತ್ಯವಿರುವ ರೋಗಿಗಳಿಗೆ ಮತ್ತು ವೈದ್ಯಕೀಯ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ ಎಂದು ಸ್ಟೇಟ್ ಬ್ಯಾಂಕಿನ ರೀಜನಲ್ ಮ್ಯಾನೇಜರ ಸಂತೋಷ ನಾಯಕ ಹೇಳಿದ್ದಾರೆ.
ಗುರುವಾರ ಬಿ.ಎಲ್.ಡಿ.ಇ ವೈದ್ಯಕೀಯ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನೆ ಕೇಂದ್ರದ ಟ್ರಾಮಾ ಸೆಂಟರ್ ಹಾಗೂ ರಕ್ತನಿಧಿ ಕೇಂದ್ರದ ವತಿಯಿಂದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಎಸ್.ಬಿ.ಐ 70ನೇ ಫೌಂಡೇಶನ್ ದಿನದ ಅಂಗವಾಗಿ ಬ್ಯಾಂಕಿನ ಅಧಿಕಾರಿಗಳು ಮತ್ತು ಸಿಬ್ಬಂದಿಗಾಗಿ ಆಯೋಜಿಸಲಾಗಿದ್ದ ಉಚಿತ ಅರೋಗ್ಯ ತಪಾಸಣೆ, ರಕ್ತದಾನ, ದೇಹದಾನ, ನೇತ್ರದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ದೇಹ ದಾನ ಶ್ರೇಷ್ಟ ದಾನವಾಗಿದೆ. ಇದರಿಂದ ಮರಣ ನಂತರವೂ ಅಂಗಾಂಗಗಳನ್ನು ಅಗತ್ಯವಿರುವ ರೋಗಿಗಳಿಗೆ ದಾನ ಮಾಡಬಹುದು. ಅಲ್ಲದೇ, ವೈದ್ಯಕೀಯ ವಿದ್ಯಾರ್ಥಿಗಳಿಗೆ ಅಧ್ಯಯನಕ್ಕೂ ಅನುಕೂಲವಾಗುತ್ತದೆ ಎಂದು ಅವರು ಹೇಳಿದರು. ಬಿ.ಎಲ್.ಡಿ.ಇ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ರಾಜೇಶ ಹೊನ್ನುಟಗಿ ಮಾತನಾಡಿ, ದೇಹದಾನ, ಅಂಗದಾನ, ರಕ್ತದಾನ, ಮಾಡುವಲ್ಲಿ ಆಸಕ್ತಿ ತೋರಿರುವ ಸ್ಟೇಟ್ ಬ್ಯಾಂಕ ಸಿಬ್ಬಂದಿ ಮತ್ತು ಅಧಿಕಾರಿಗಳ ಸಾಮಾಜಿಕ ಕಳಕಳಿ ನಮ್ಮ ಮುಂದಿನ ಪೀಳಿಗೆಗೆ ಪ್ರೇರಣೆಯಾಗಿದೆ. ಅಲ್ಲದೇ, ಕರ್ತವ್ಯ ಮತ್ತು ಸಾಮಾಜಿಕ ಜವಾಬ್ದಾರಿಗೆ ಪ್ರಮುಖ ಪಾತ್ರ ವಹಿಸಲು ಅವಕಾಶ ನೀಡುತ್ತದೆ ಎಂದು ಅವರು ಹೇಳಿದರು.
ಈ ಶಿಬಿರದಲ್ಲಿ ಟ್ರಾಮಾ ಸೆಂಟರ್ ಮುಖ್ಯ ವೈದ್ಯಾಧಿಕಾರಿ ಡಾ. ಈರಣ್ಣ ಎಸ್. ಧಾರವಾಡಕರ, ಆಸ್ಪತ್ರೆಯ ವೈದ್ಯರಾದ ಡಾ. ವಿಜಯಕುಮಾರ ವಾರದ, ಡಾ ಅನುಜಾ ಭಾವಿ, ಡಾ. ರಾಹುಲ ಬಿರಾದಾರ, ಬ್ಯಾಂಕಿನ ಮ್ಯಾನೇಜರ ರವೀಂದ್ರ ರತ್ನಾಕರ, ಚೀಫ್ ಮ್ಯಾನೇಜರ್ ರಂಜಿತಕುಮಾರ, ಬಿ.ಎಲ್.ಡಿ.ಇ ಆಸ್ಪತ್ರೆಯ ರಕ್ತನಿಧಿ ಕೇಂದ್ರದ ಮುಖ್ಯಸ್ಥ ಡಾ ಸತೀಶ ಆರಕೇರಿ, ಡಾ. ಭಾಗ್ಯಶಾಲಿ, ಆಸ್ಪತ್ರೆಯ ಸಿಬ್ಬಂದಿಯಾದ ಸಿದ್ದು ಪೂಜಾರಿ, ದೀಪಕ ಸಾವಂತ, ರಾಜಶೇಖರ್ ಚಿನಿವಾರ, ಶ್ರೀಶೈಲ ಕುಂಬಾರ, ದ್ರಾಕ್ಷಾಯಣಿ ಶಟಗಾರ, ವಿನೋದ್ ಗಲಗಲಿ, ವಿಲಾಸ್ ಜಾದವ, ಶಶಿಕಾಂತ ಕೋಳಿ, ಸ್ನಾತಕೋತ್ತರ ವಿದ್ಯಾರ್ಥಿಗಳು ಮುಂತಾದವರು ಉಪಸ್ಥಿತರಿದ್ದರು. ಈ ಶಿಬಿರದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ 40 ಜನ ಸಿಬ್ಬಂದಿ ರಕ್ತದಾನ ಮಾಡಿದರು. ಅಲ್ಲದೇ, ಇಬ್ಬರು ಸಿಬ್ಬಂದಿ ತಮ್ಮ ದೇಹದಾನದ ಹಾಗೂ ಏಳು ಜನ ಸಿಬ್ಬಂದಿ ನೇತ್ರದಾನದ ಮಾಡಲು ನೋಂದಣಿ ಮಾಡಿದರು.
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್ 