ಸಹಕಾರ ಸಂಸ್ಥೆಗಳ ಏಳ್ಗಗೆ ಆಡಳಿತ ಮಂಡಳಿ ತೀರ್ಮಾನಗಳು ಬಹು ಮಖ್ಯ

ಸಹಕಾರ ಸಂಸ್ಥೆಗಳ ಏಳ್ಗಗೆ ಆಡಳಿತ ಮಂಡಳಿ ತೀರ್ಮಾನಗಳು ಬಹು ಮಖ್ಯ Board decisions are very important for the development of cooperatives


ಗದಗ 31 : ಸಹಕಾರ ಇಲಾಖೆ, ಗದಗ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ಬೆಂಗಳೂರು, ಗದಗ ಜಿಲ್ಲಾ ಸಹಕಾರ ಯೂನಿಯನ್ ನಿ., ಗದಗ ಹಾಗೂ ಕೆ.ಸಿ.ಸಿ. ಬ್ಯಾಂಕ್ ಗದಗ ಇವರುಗಳ ಸಂಯುಕ್ತ ಆಶ್ರಯದಲ್ಲಿ ಗದಗ ಹಾಗೂ ನರಗುಂದ ತಾಲೂಕುಗಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರು ಹಾಗೂ ಮುಖ್ಯ ಕಾರ್ಯನಿರ್ವಾಹಕರುಗಳಿಗೆ ಒಂದು ದಿನದ ವಿಶೇಷ ಸಹಕಾರ ತರಬೇತಿ ಶಿಬಿರವನ್ನು ದಿನಾಂಕ: 31.12.2025 ರಂದು ಬೆಳಿಗ್ಗೆ 10-30 ಘಂಟೆಗೆ ದಿ.ಕೆ.ಸಿ.ಸಿ ಬ್ಯಾಂಕ್ ಲಿ., ಗದಗ, ಪಾಲಾ ಬದಾಮಿ ರಸ್ತೆ ಗಾಂಧಿ ಸರ್ಕಲ್ ಹತ್ತಿರ ತಾ.ಜಿ.ಗದಗ ಇದರ ಸಭಾಭವನದಲ್ಲಿ ಜರುಗಿತು. 

ಕಾರ್ಯಕ್ರವವನ್ನು  ಹೆಚ್‌. ಮಂಜಪ್ಪ ಉಪನಿರ್ದೇಶಕರು, ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಇಲಾಖೆ, ಗದಗರವರು ಉದ್ಘಾಟಿಸಿ ಮಾತನಾಡುತ್ತಾ ಸಹಕಾರ ಸಂಘ ಸಂಸ್ಥೆಗಳ ಭವಿಷ್ಯ ಆ ಸಂಸ್ಥೆಯ ಆಡಳಿತ ಮಂಡಳಿ ಮತ್ತು ಅಧಿಕಾರ ವರ್ಗದ ಮೇಲೆ ನಿಂತಿರುತ್ತದೆ. ಸಹಕಾರ ಸಂಸ್ಥೆಗಳ ವ್ಯವಸ್ಥೆಯಲ್ಲಿ ಆಡಳಿತ ಮಂಡಳಿ ಸಂಘದ ಭವಿಷ್ಯವನ್ನು ರೂಪಿಸುವಲ್ಲಿ ವಾಸ್ತವಿಕವಾಗಿ ತೀರ್ಮಾನಗಳನ್ನು ತೆಗೆದುಕೊಂಡರೆ, ಅದನ್ನು ಸಾಧಿಸುವ ಜವಾಬ್ದಾರಿ ಸಂಘದ ಅಧಿಕಾರಿ-ಸಿಬ್ಬಂದಿಯ ಹೊಣೆಯಾಗಿರುತ್ತದೆ. ಸಹಕಾರ ಸಂಘಗಳು ಆಡಳಿತ ಸಂಘದ ವ್ಯವಹಾರದ ಗುರಿಯನ್ನು ಗುರುತಿಸಿ ಲಾಭ ನಷ್ಟಗಳಿಗೆ ಅನುಗುಣವಾಗಿ ಸಂಘದ ಯಶಸ್ಸನ್ನು ಖಾತರಿ ಪಡಿಸುವ ರೀತಿಯಲ್ಲಿ ತೀರ್ಮಾನಗಳನ್ನು ಕೈಗೊಳ್ಳಬೇಕಾಗುತ್ತದೆ,

ಹಾಗೆ ಆಡಳಿತ ಮಂಡಳಿ ಕೈಗೊಂಡ ತೀರ್ಮಾನಗಳನ್ನು ಅಧಿಕಾರಿ ವರ್ಗ ಸಮರ​‍್ಕವಾಗಿ ಕಾರ್ಯರೂಪಕ್ಕೆ ತರಬೇಕಾಗುತ್ತದೆ. ಇದರಲ್ಲಿ ಸಂಘದ ಮುಖ್ಯ ಕಾರ್ಯನಿರ್ವಾಹಕರ ಜವಾಬ್ದಾರಿ ಹೆಚ್ಚಿನದಾಗಿರುತ್ತದೆ. ಅಧ್ಯಕ್ಷರು ತಮ್ಮ ಅಧೀನ ಸಿಬ್ಬಂದಿ ನಿಷ್ಠೆಯಿಂದ, ಬದ್ದತೆಯಿಂದ, ಪಾರದರ್ಶಕವಾಗಿ ಕೆಲಸ ಮಾಡುವಂತೆ ನೋಡಿಕೊಳ್ಳಬೇಕು ಹಾಗೂ ಸಂಘದ ಭವಿಷ್ಯದ ಚಿತ್ರಣವನ್ನು ಸಿಬ್ಬಂದಿಯ ಮುಂದಿಡಬೇಕು ಎಂದು ಹೇಳಿದರು. 

ಮುಖ್ಯ ಅತಿಥಿಗಳಾಗಿ ಆಗಮಿಸಿದ ಗದಗ ತಾಲೂಕಿನ ಕೆ.ಸಿ.ಸಿ. ಬ್ಯಾಂಕ್ ನೀರೀಕ್ಷರಾದ ಮಾತನಾಡುತ್ತಾ   ಶ್ರೀ ಸುನೀಲಕುಮಾರ ಚಳಗೇರಿ, ಪ್ಯಾಕ್ಸಗಳಲ್ಲಿ ಸನ್ 2022ರಲ್ಲಿ ಜೂನ್ ಮಾಹೆಯಲ್ಲಿ ಕೇಂದ್ರ ಸರ್ಕಾರದ ಸಹಕಾರ ಇಲಾಖೆಯು ಈ ಯೋಜನೆಯನ್ನು ಅಂದರೆ ಇಆರ್‌ಪಿ ಇದನ್ನು ಸಾಮಾನ್ಯ ಸಾಪ್ಟವೇರ ಅಡಿಯಲ್ಲಿ ಅಂದರೆ ನ್ಯಾಶನಲ್ ಲೆವೆಲ್ ಪಿಎಸಿಎಸ್ ಸಾಪ್ಟವೇರ್, ಈ ಯೋಜನೆಯನ್ನು ಜಾರಿಗೆ ತರುವ ಹೊಣೆಯನ್ನು ನಬಾರ್ಡ ಸಂಸ್ಥೆ (ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿಯಲ್ಲಿ ಸರ್ವೋಚ್ಚ ಬ್ಯಾಂಕ್ ಆದಂತಹ ನಬಾರ್ಡ ಸಂಸ್ಥೆಯು) ಹೊತ್ತುಕೊಂಡಿರುತ್ತದೆ. ಇದಕ್ಕೆ ಹಣಕಾಸಿನ ನೆರವನ್ನು ಕೇಂದ್ರ ಸರ್ಕಾರದ ಸಹಕಾರ ಇಲಾಖೆ ನೀಡುತ್ತದೆ ಎಂದು ಹೇಳಿದರು. 

ಕಾಯಕ್ರಮದಲ್ಲಿ ಅತಿಥಿಗಳಾಗಿ  ಪ್ರಕಾಶ ನವಲಗುಂದ ಸಹಕಾರಿ ಅಭಿವೃದ್ಧಿ ಅಧಿಕಾರಿಗಳು, ನರಗುಂದ,     ಎಸ್‌. ಎಂ. ಚಿಕ್ಕಮಠ ಜಿಲ್ಲಾ ನಿಯಂತ್ರಣಾಧಿಕಾರಿಗಳು, ಕೆ.ಸಿ.ಸಿ. ಬ್ಯಾಂಕ್ ಲಿ., ಗದಗ, ಕೆ.ಸಿ.ಸಿ. ಬ್ಯಾಂಕ್ ನೀರೀಕ್ಷರುಗಳಾದ   ಸುರೇಶಕುಮಾರ ಎಸ್‌. ಶಿಎಚ್‌. ಎಂ. ಮಳ್ಳಣ್ಣವರ ಉಪಸ್ಥಿತರಿದ್ದರು.    ಕಾರ್ಯಕ್ರಮದ ಮೊದಲಿಗೆ ಲಕ್ಕುಂಡಿ ನಂ.1 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಾಹಕರಾದ ಶರಣಪ್ಪ ಗರ್ಜಪ್ಪನವರ ಇವರು ಪ್ರಾರ್ಥನೆ ಮಾಡಿದರು. ಗದಗ ಜಿಲ್ಲಾ ಸಹಕಾರ ಯೂನಿಯನ್ನಿನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಚಂದ್ರಶೇಖರ ಎಸ್‌. ಕರಿಯಪ್ಪನವರ ಇವರು ಸ್ವಾಗತಿಸಿದರು,  ಯೂನಿಯನ್‌ದ ಮಹಿಳಾ ಸಹಕಾರ ಶಿಕ್ಷಕಿ ರಶೀದಾಬಾನು ಸಿ. ಯಲಿಗಾರ ಇವರು ನಿರೂಪಿಸಿದರು. ಯೂನಿಯನ್ನಿನ ಪ್ರಭಾರ ವ್ಯವಸ್ಥಾಪಕರಾದ  ಆರ್‌. ಎಸ್‌. ಕಲ್ಲನಗೌಡರ ವಂದಿಸಿದರು.