ರಕ್ತದಾನ ಮಾಡಿದರೆ ಜೀವ ಉಳಿಸಿದ ಪುಣ್ಯ ಬರುತ್ತದೆ: ಡಾ.ದೇವಾನಂದ

ಬಳ್ಳಾರಿ10: ಕೋವಿಡ್-19 ಸಂದರ್ಭದಲ್ಲಿ ಸಾರ್ವಜನಿಕರು ರಕ್ತದಾನ ಮಾಡುವುದರಿಂದ ದೈಹಿಕವಾಗಿ ನಿಶ್ಯಕ್ತರಾಗುತ್ತೇವೆಂಬ ತಪ್ಪು ಕಲ್ಪನೆ ಸಾಮಾನ್ಯ. ರಕ್ತದಾನ ಮಾಡುವುದರಿಂದ ಯಾವುದೇ ರೀತಿಯ ತೊಂದರೆ ಬರುವುದಿಲ್ಲ ಎಂದು ವಿಮ್ಸ್ ನಿದರ್ೇಶಕ ಹಾಗೂ ಬಳ್ಳಾರಿ ಭಾರತೀಯ ರೆಡ್ಕ್ರಾಸ್ ಸಂಸ್ಥೆ ಸಭಾಪತಿ ಡಾ.ದೇವಾನಂದ ಸ್ಪಷ್ಟಪಡಿಸಿದರು.

ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಬಳ್ಳಾರಿ ಶಾಖೆ, ಜಿಲ್ಲಾ ಗೃಹರಕ್ಷಕ ದಳ, ಬಳ್ಳಾರಿ ಸ್ಪಂದನಾ ಚಾರಿಟೇಬಲ್ ಟ್ರಸ್ಟ್, ಬಳ್ಳಾರಿ ಮತ್ತು ವಿಮ್ಸ್ ಆಸ್ಪತ್ರೆ ಇವರ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಗೃಹರಕ್ಷಕದಳ ಕಚೇರಿಯ ಸಭಾಂಗಣದಲ್ಲಿ "ವಿಶ್ವ ರಕ್ತದಾನಿಗಳ ದಿನಾಚಾಣೆ" ನಿಮಿತ್ತ ಜು. 10ರಂದು ಹಮ್ಮಿಕೊಂಡ ರಕ್ತದಾನ ಶಿಬಿರ ಉದ್ದೇಶಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಬಳ್ಳಾರಿ ನಗರದಲ್ಲಿ 25ಕ್ಕೂ ಅಧಿಕ ಬಾರಿ ರಕ್ತದಾನ ಮಾಡಿದ ವಖಾರ್ ಅಹಮದ್, ರವಿ ಮತ್ತು ಓಂಪ್ರಕಾಶ್ ಕಲೆಪಲ್ಲಿ ಅವರಿಗೆ ಭಾರತೀಯ ರೆಡ್ಕ್ರಾಸ್ ಸಂಸ್ಥೆಯಿಂದ ಸನ್ಮಾನಿಸಲಾಯಿತು. ಕೋವಿಡ್-19 ಸಂದರ್ಭದಲ್ಲಿ ವಿಮ್ಸ್ ರಕ್ತಭಂಡಾರದಲ್ಲಿ ಸುಮಾರು 15 ದಿನಗಳಕಾಲ ರಕ್ತದಾನ ಶಿಬಿರ ಆಯೋಜಿಸಿದ್ದು, ಶಿಬಿರ ಯಶಸ್ವಿಗೊಳಿಸಲು ಕಾರಣರಾದ ಹರಿ ಶಂಕರ್ ಮತ್ತು ಸುಮಾರು 5 ವರ್ಷದಿಂದ ಗೃಹರಕ್ಷಕದಳದಿಂದ ರಕ್ತದಾನ ಶಿಬಿರವನ್ನು ಯಶಸ್ವಿಯಾಗಿ ನಡೆಸುತ್ತಿರುವ ಬಿ.ಕೆ. ಬಸವಲಿಂಗ ಇವರಿಗೆ ಪ್ರಶಂಸಾ ಪ್ರಮಾಣಪತ್ರ ನೀಡಿ ಗೌರವಿಸಲಾಯಿತು.

ಬಳ್ಳಾರಿ ರೆಡ್ಕ್ರಾಸ್ ಸಂಸ್ಥೆ ಉಪ-ಸಭಾಪತಿ ಡಾ.ಎಸ್.ಜೆ.ವಿ. ಮಹಿಪಾಲ್ ಉಪಸ್ಥಿತರಿದ್ದರು. ಗೃಹರಕ್ಷಕದಳದ ಎಂ.ಎ. ಷಕೀಬ್ ಉಪಸ್ಥಿತರಿದ್ದರು. 

ಇದೇ ಸಂದರ್ಭದಲ್ಲಿ ಬಳ್ಳಾರಿ ಜಿಲ್ಲೆಯ ಭಾರತೀಯ ರೆಡ್ಕ್ರಾಸ್ ಸಂಸ್ಥೆಯಲ್ಲಿ ರಾಷ್ಟ್ರಪತಿ ಪದಕ ಪುರಸ್ಕೃತರಾದ ರಕ್ತದಾನಿ ಬಿ.ದೇವಣ್ಣ, ರಕ್ತದಾನ ಸಮಿತಿ ಸದಸ್ಯರು, ರೆಡ್ ಕ್ರಾಸ್ ಸಂಸ್ಥೆ, ಮತ್ತು ಅಧ್ಯಕ್ಷರು, ಸ್ಪಂದನಾ ಚಾರಿಟೇಬಲ್ ಟ್ರಸ್ಟ್ ಸದಸ್ಯರು ಉಪಸ್ಥಿತರಿದ್ದರು. ವಿಮ್ಸ್ ವೈದ್ಯರಾದ ಜಿ.ಬಸವರಾಜ್, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸಿಬ್ಬಂದಿ ಎಂ.ವಲಿ ಬಾಷಾ ಮತ್ತು ಮಂಜುನಾಥ್ ಉಪಸ್ಥಿತರಿದ್ದರು. ಶಿಬಿರದಲ್ಲಿ ಗೃಹರಕ್ಷಕದಳ ಮತ್ತು ರೆಡ್ ಕ್ರಾಸ್ ಸಂಸ್ಥೆಯ ಸುಮಾರು 50 ಜನ ರಕ್ತದಾನ ಮಾಡಿದರು