ರಕ್ತ ದಾನವೇ ಶ್ರೇಷ್ಠ ದಾನ : ಜಿಲ್ಲಾ ನ್ಯಾಯಾಧೀಶ ಹರೀಶ್
Blood donation is the best donation: District Judge Harish
ವಿಜಯಪುರ, 04 : ಪ್ರಾಣಾಪಾಯದಿಂದ ಬಳಲುತ್ತಿರುವ ರೋಗಿಗಳಿಗೆ ದಾನಿಗಳು ನೀಡುವ ರಕ್ತವೇ ಸುಜೀವಿನಿ, ಅದರಿಂದ ಅವರು ನವಜೀವನ ಪಡೆಯುತ್ತಾರೆ. ಅಪಾಯದ ಸಂದರ್ಭದಲ್ಲಿ ರಕ್ತ ದಾನ ಮಾಡುವ ದಾನಿಗಳೇ ಅತ್ಯಂತ ಶ್ರೇಷ್ಠ ದಾನಿಗಳು ಎಂದು ಜಿಲ್ಲಾ ಪ್ರಧಾನ ಮತ್ತು ನ್ಯಾಯಾಧೀಶ ಹರೀಶ ಎ. ಹೇಳಿದರು.
ನಗರದ ಜಿಲ್ಲಾ ನ್ಯಾಯಾಲಯದ ಸಭಾ ಭವನದಲ್ಲಿ ವಕೀಲರ ದಿನಾಚರಣೆ ಅಂಗವಾಗಿ ಜಿಲ್ಲಾ ನ್ಯಾಯವಾದಿಗಳ ಸಂಘ ವಿಜಯಪುರ, ಜಿಲ್ಲಾ ನ್ಯಾಯಾಂಗ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಇಲಾಖೆ, ಶ್ರೀ ಟಿ.ಕೆ. ಪಾಟೀಲ (ಬೆನಕಟ್ಟಿ) ಚಾರಿಟೇಬಲ್ ಟ್ರಸ್ಟ್, ಶಿವಗಿರಿ, ಬಿಎಲ್‌ಡಿಈ ಮಹಾವಿದ್ಯಾಲಯ ಹಾಗೂ ಆಸ್ಪತ್ರೆ ಮತ್ತು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸ್ವಯಂ ಪ್ರೇರಿತ ರಕ್ತ ದಾನ ಶಿಬಿರದಲ್ಲಿ ರಕ್ತದಾನ ಮಾಡಿ, ವಿಶೇಷ ಆ್ಯಪ್ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಮಾನವನಿಗೆ ರಕ್ತವು ಅಮೂಲ್ಯ. ಕೆಲವರು ರಕ್ತಹೀನತೆ, ಅಪೌಷ್ಟಿಕತೆ, ಅಪಘಾತದಲ್ಲಿ ರಕ್ತಸ್ರಾವದಿಂದ ಬಳಲಿ ಸಾವಿನಂಚಿನಲ್ಲಿ ಇರುತ್ತಾರೆ. ರಕ್ತದ ಕೊರತೆಯಿಂದ ಬಳಲುವ ಇವರಿಗೆ ರಕ್ತದ ಅವಶ್ಯಕತೆ ಇರುತ್ತದೆ. ಪ್ರತಿಯೊಬ್ಬ ವ್ಯಕ್ತಿಯ ರಕ್ತದ ಗುಂಪುಗಳು ಬೇರೆ ಬೇರೆಯಾಗಿದ್ದು ಪ್ರಾಣಾಪಾಯದಲ್ಲಿ ಇರುವ ವ್ಯಕ್ತಿಗೆ ಆತನ ಗುಂಪಿನ ರಕ್ತ ಸಿಗುವುದು ದುರ್ಲಭವಾದಾಗ ರಕ್ತ ದಾನಿಗಳನ್ನು ರಕ್ತ ದಾನ ಕೇಂದ್ರಗಳನ್ನು ಹುಡುಕುತ್ತ ಹೋಗಬೇಕಾಗುತ್ತದೆ. ಈ ಕೊರತೆಯನ್ನು ರಕ್ತ ದಾನಿಗಳು, ರಕ್ತದಾನ ಕೇಂದ್ರಗಳು ಅಪಾಯದಲ್ಲಿ ಇರುವ ದೋಗಿಗಳಿಗೆ ರಕ್ತ ನೀಡುವ ಅಪತ್ಯಾಂದವರಾಗಿ ಪ್ರಾಣ ಉಳಿಸುತ್ತಾರೆ.
ಅವರಿಗೆ ಎಷ್ಟು ಕೃತಜ್ಞತೆ ಸಲ್ಲಿಸಿದರು ಕಡಿಮೆಯೇ ಎಂದರು. ಶ್ರೀ ಟಿ.ಕೆ. ಪಾಟೀಲ (ಬೆನಕಟ್ಟಿ) ಚಾರಿಟೇಬಲ್ ಟ್ರಸ್ಟ್ ಶಿವಗಿರಿಯ ಅಧ್ಯಕ್ಷ ಬಸಂತಕುಮಾರ ಪಾಟೀಲ ಮಾತನಾಡಿ, ಕಳೆದ 20 ವರ್ಷಗಳ ಹಿಂದೆ ಸ್ಥಾಪಿತಗೊಂಡ ಶಿವಗಿರಿ ಸಂಸ್ಥೆಯಿಂದ ಅನೇಕ ಸಾಮಾಜಿಕ ಕಾರ್ಯಗಳನ್ನು ಕೈಗೊಳ್ಳುತ್ತಾ ಬರುತ್ತಿದೆ. ರಕ್ತದಾನ ಶಿಬಿರ, ಸಾಮೂಹಿಕ ವಿವಾಹ, ಸಸಿ ನೆಡುವ ಕಾರ್ಯಕ್ರಮ ಸೇರಿ ಹತ್ತು ಹಲವು ಕಾರ್ಯಕ್ರಮಗಳನ್ನು ರೂಪಿಸಿಕೊಂಡು ಬರಲಾಗುತ್ತಿದೆ. ಇದೀಗ ರಕ್ತದಾನದ ಮೂಲಕ ಮತ್ತೊಂದು ಐತಿಹಾಸಿಕ ಮೈಲಿಗಲ್ಲು ಸ್ಥಾಪಿಸುತ್ತಿದೆ ಎಂದರು.
ವಿಜಯಪುರದಲ್ಲಿ ರೋಗಿಗಳಿಗೆ ಬೇಕಾಗುವ ರಕ್ತವು ಸುಲಭವಾಗಿ ವಿಶೇಷವಾಗಿ ಬಡವರಿಗೆ ಸಿಗುತ್ತಿಲ್ಲವೆಂಬ ಮಾಹಿತಿ ದೊರಕಿತ್ತು. ಅದಕ್ಕಾಗಿ ರಕ್ತದಾನ ಶಿಬಿರಗಳ ಅವಶ್ಯಕತೆ ಬಹಳಷ್ಟು ಇರುವ ಕಾರಣಕ್ಕೆ ರಕ್ತದಾನ ಶಿಬಿರ ಆಯೋಜಿಸಲಾಗಿದೆಯಲ್ಲದೇ ವಿಶೇಷ ಆ್ಯಪ್ ಸಹ ಬಿಡುಗಡೆಗೊಳಿಸಲಾಗಿದೆ ಎಂದರು.
ಒಂದನೆಯ ಹೆಚ್ಚುವರಿ ಸತ್ರ ನ್ಯಾಯಾಧೀಶ ಎಚ್.ಎ. ಮೋಹನ ಮಾತನಾಡಿ, ರಕ್ತದಾನ ಪದ್ಧತಿ ಆರೋಗ್ಯದಾಯಕವಾಗಿದ್ದು ಸದೃಡ ಮತ್ತು ನಿರೋಗಿ ವ್ಯಕ್ತಿಗಳು ರಕ್ತದಾನ ಮಾಡುವ ಮೂಲಕ ಮತ್ತೊಬ್ಬರ ಪ್ರಾಣ ಉಳಿಸಲು ಅನುಕೂಲವಾಗುತ್ತದೆ. ಜಿಲ್ಲೆಯಲ್ಲಿ ಟಿ.ಕೆ. ಪಾಟೀಲ್ (ಬೆನಕಟ್ಟಿ) ಚಾರಿಟೇಬಲ್ ಟ್ರಸ್ಟ್ ಶಿವಗಿರಿ ಇವರು ರಕ್ತ ದಾನಿಗಳ ಹೆಸರು, ವಿಳಾಸ, ರಕ್ತದ ಗುಂಪು, ದೂರವಾಣಿ ಸಂಖ್ಯೆ ಸಮೇತ ???ಪ್ ಲೋಕಾರೆ್ಣ ಮಾಡಿರುವುದು ಸಂತೋಷದ ವಿಷಯ. ಇದರಿಂದ ರಕ್ತದ ಅವಶ್ಯಕತೆ ಇದ್ದವರಿಗೆ ಮೊಬೈಲ್ ನಲ್ಲಿಯೇ ಎಲ್ಲ ಮಾಹಿತಿ ದೊರೆಯಲಿದೆ. ಇದು ಜಿಲ್ಲೆಯಲ್ಲಿ ಅಷ್ಟೇ ಅಲ್ಲ ಎಲ್ಲ ಕಡೆಗೂ ಕೂಡಲೇ ಮಾಹಿತಿ ಸಿಗುವಂತೆ ಮಾಡಿರುವುದು ಶ್ಲಾಘನೀಯ ಮತ್ತು ಮಾದರಿ ಕಾರ್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮೂರನೇ ಹಿರಿಯ ಹೆಚ್ಚುವರಿ ನ್ಯಾಯಾಧೀಶ ಕೆ.ಎಚ್. ಬೆನಕಟ್ಟಿ, ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಮಲ್ಲಿಕಾರ್ಜುನ ಅರಬಿ, ಒಂದನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಲೋಕೇಶ ಆವಳೆ ಕೂಡಾ ರಕ್ತದಾನ ಮಾಡುವ ಮೂಲಕ ಮಾದರಿಯಾದರು.
ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಡಿ.ಜಿ. ಬಿರಾದಾರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಾಧ್ಯಕ್ಷ ನುನೀಲ ಮರಾದಾರ, ಕಾರ್ಯದರ್ಶಿ ಎಸ್.ಎಚ್, ಚೂರಿ, ಶ್ರೀ ಟಿ.ಕೆ. ಪಾಟೀಲ (ಬೆನಕಟ್ಟಿ) ಚಾರಿಟೇಬಲ್ ಟ್ರಸ್ಟ್ ಶಿವಗಿರಿಯ ಆಡಳಿತಾಧಿಕಾರಿ ಆರತಿ ಪಾಟೀಲ, ಎಂ.ಆರ್. ಪಾಟೀಲ, ನ್ಯಾಯವಾದಿ ದೇವೇಂದ್ರ ಪರ್ನನಳ್ಳಿ, ಡಾ. ರವಿ ಬಿರಾದಾರ, ಶರದ್ ರೋಡಗಿ, ಬಾಬುರಾವ ತಳವಾರ, ಧುರೀಣರಾದ ಖುಷರಾಜ ಪರಣ್ಣವರ, ಗೀರೀತ ಪಾಟೀಲ, ಶ್ರೀನಿವಾಸ ಕುಲಕರ್ಣಿ, ಈರಣ್ಣ ಜಾಲವಾಡಗಿ, ಬಾಬು ಹಿಪ್ಪರಗಿ, ಶಿವಾನಂದ ಸಾವಳಗಿ, ಎಸ್.ಎಸ್. ಹಂಜಗಿ ಮತ್ತಿತರರಿದ್ದರು. ನ್ಯಾಯವಾದಿ ದಾನೇಶ ಅವಟಿ ನಿರೂಪಿಸಿ, ವಂದಿಸಿದರು. ಮಹಿಳಾ ನ್ಯಾಯವಾದಿಗಳಾದಿಯಾಗಿ 50ಕ್ಕೂ ಅಧಿಕ ನ್ಯಾಯವಾದಿಗಳು ರಕ್ತ ದಾನ ಬಿಡುಗಡೆಗೊಳಿಸಲಾಗಿದೆ ಎಂದರು.
ಒಂದನೆಯ ಹೆಚ್ಚುವರಿ ಸತ್ರ ನ್ಯಾಯಾಧೀಶ ಎಚ್.ಎ. ಮೋಹನ ಮಾತನಾಡಿ, ರಕ್ತದಾನ ಪದ್ಧತಿ ಆರೋಗ್ಯದಾಯಕವಾಗಿದ್ದು ಸದೃಡ ಮತ್ತು ನಿರೋಗಿ ವ್ಯಕ್ತಿಗಳು ರಕ್ತದಾನ ಮಾಡುವ ಮೂಲಕ ಮತ್ತೊಬ್ಬರ ಪ್ರಾಣ ಉಳಿಸಲು ಅನುಕೂಲವಾಗುತ್ತದೆ. ಜಿಲ್ಲೆಯಲ್ಲಿ ಟಿ.ಕೆ. ಪಾಟೀಲ್ (ಬೆನಕಟ್ಟಿ) ಚಾರಿಟೇಬಲ್ ಟ್ರಸ್ಟ್ ಶಿವಗಿರಿ ಇವರು ರಕ್ತ ದಾನಿಗಳ ಹೆಸರು, ವಿಳಾಸ, ರಕ್ತದ ಗುಂಪು, ದೂರವಾಣಿ ಸಂಖ್ಯೆ ಸಮೇತ ???ಪ್ ಲೋಕಾರೆ್ಣ ಮಾಡಿರುವುದು ಸಂತೋಷದ ವಿಷಯ. ಇದರಿಂದ ರಕ್ತದ ಅವಶ್ಯಕತೆ ಇದ್ದವರಿಗೆ ಮೊಬೈಲ್ ನಲ್ಲಿಯೇ ಎಲ್ಲ ಮಾಹಿತಿ ದೊರೆಯಲಿದೆ. ಇದು ಜಿಲ್ಲೆಯಲ್ಲಿ ಅಷ್ಟೇ ಅಲ್ಲ ಎಲ್ಲ ಕಡೆಗೂ ಕೂಡಲೇ ಮಾಹಿತಿ ಸಿಗುವಂತೆ ಮಾಡಿರುವುದು ಶ್ಲಾಘನೀಯ ಮತ್ತು ಮಾದರಿ ಕಾರ್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮೂರನೇ ಹಿರಿಯ ಹೆಚ್ಚುವರಿ ನ್ಯಾಯಾಧೀಶ ಕೆ.ಎಚ್. ಬೆನಕಟ್ಟಿ, ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಮಲ್ಲಿಕಾರ್ಜುನ ಅರಬಿ, ಒಂದನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಲೋಕೇಶ ಆವಳೆ ಕೂಡಾ ರಕ್ತದಾನ ಮಾಡುವ ಮೂಲಕ ಮಾದರಿಯಾದರು.
ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಡಿ.ಜಿ. ಬಿರಾದಾರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಾಧ್ಯಕ್ಷ ನುನೀಲ ಮರಾದಾರ, ಕಾರ್ಯದರ್ಶಿ ಎಸ್.ಎಚ್, ಚೂರಿ, ಶ್ರೀ ಟಿ.ಕೆ. ಪಾಟೀಲ (ಬೆನಕಟ್ಟಿ) ಚಾರಿಟೇಬಲ್ ಟ್ರಸ್ಟ್ ಶಿವಗಿರಿಯ ಆಡಳಿತಾಧಿಕಾರಿ ಆರತಿ ಪಾಟೀಲ, ಎಂ.ಆರ್. ಪಾಟೀಲ, ನ್ಯಾಯವಾದಿ ದೇವೇಂದ್ರ ಪರ್ನನಳ್ಳಿ, ಡಾ. ರವಿ ಬಿರಾದಾರ, ಶರದ್ ರೋಡಗಿ, ಬಾಬುರಾವ ತಳವಾರ, ಧುರೀಣರಾದ ಖುಷರಾಜ ಪರಣ್ಣವರ, ಗೀರೀತ ಪಾಟೀಲ, ಶ್ರೀನಿವಾಸ ಕುಲಕರ್ಣಿ, ಈರಣ್ಣ ಜಾಲವಾಡಗಿ, ಬಾಬು ಹಿಪ್ಪರಗಿ, ಶಿವಾನಂದ ಸಾವಳಗಿ, ಎಸ್.ಎಸ್. ಹಂಜಗಿ ಮತ್ತಿತರರಿದ್ದರು. ನ್ಯಾಯವಾದಿ ದಾನೇಶ ಅವಟಿ ನಿರೂಪಿಸಿ, ವಂದಿಸಿದರು. ಮಹಿಳಾ ನ್ಯಾಯವಾದಿಗಳಾದಿಯಾಗಿ 50ಕ್ಕೂ ಅಧಿಕ ನ್ಯಾಯವಾದಿಗಳು ರಕ್ತ ದಾನ ಮಾಡಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 