ರಕ್ತದಾನದಿಂದ ದೇಹಕ್ಕೆ ನವ ಚೈತನ್ಯ: ಡಾ. ಶ್ರೀಶೈಲ ಹುಕ್ಕೇರಿ

ರಕ್ತದಾನದಿಂದ ದೇಹಕ್ಕೆ ನವ ಚೈತನ್ಯ: ಡಾ. ಶ್ರೀಶೈಲ ಹುಕ್ಕೇರಿ  Blood donation gives new vitality to the body: Dr. Srishaila Hukkeri

              ತಾಳಿಕೋಟಿ 18: ರಕ್ತದಾನ ಎಲ್ಲ ದಾನಗಳಲ್ಲಿ ಶ್ರೇಷ್ಠ ದಾನವಾಗಿದೆ. ಒಬ್ಬನ ರಕ್ತ ಮೂರು ಜೀವಗಳನ್ನು ಉಳಿಸಲು ಕಾರಣವಾಗುತ್ತದೆ. ರಕ್ತವನ್ನು ಕೊಡುವುದರಿಂದ ಉತ್ತಮ ಆರೋಗ್ಯ ಲಭ್ಯವಾಗುತ್ತದೆ ಎಂದು ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಶ್ರೀಶೈಲ ಹುಕ್ಕೇರಿ ಹೇಳಿದರು. 

                  ಮಂಗಳವಾರ ಪಟ್ಟಣ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಟೀಪು ಸುಲ್ತಾನ್ ಜಯಂತಿ ಅಂಗವಾಗಿ ಹಜರತ್ ಟೀಪು ಸುಲ್ತಾನ್ ರಕ್ಷಣಾ ಸಮಿತಿ, ವಿಜಯಪುರ ಸರ್ಕಾರಿ ಆಸ್ಪತ್ರೆ ರಕ್ತ ನಿಧಿ ವಿಭಾಗ ಹಾಗೂ ತಾಳಿಕೋಟಿ ಸಮುದಾಯ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ಹಮ್ಮಿಕೊಂಡ ಬೃಹತ್ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಜಯಂತಿ ಅಂಗವಾಗಿ ಇಂತಹ ಒಳ್ಳೆಯ ಕಾರ್ಯಕ್ರಮಗಳನ್ನು ಮಾಡುತ್ತಿರುವ ಟಿಪ್ಪು ಸಮಿತಿಯ ಪದಾಧಿಕಾರಿಗಳಿಗೆ ಅಭಿನಂದಿಸುತ್ತೇನೆ ಎಂದರು.  

                ದಲಿತ ಮುಖಂಡ ಜೈ ಭೀಮ್ ಮುತ್ತಗಿ ಮಾತನಾಡಿ ದೇಶದ ರಕ್ಷಣೆಗಾಗಿ ಬ್ರಿಟಿಷರ ವಿರುದ್ಧ ಕೆಚ್ಚೆದೆಯಿಂದ ಹೋರಾಡಿ ಅವರ ಜೊತೆ ರಾಜಿ ಮಾಡಿಕೊಳ್ಳದೆ ತನ್ನಿಬ್ಬರು ಮಕ್ಕಳನ್ನು ಅಡವು ಇಟ್ಟ ಮಹಾನ್ ಅರಸ್ ಟಿಪ್ಪು ಸುಲ್ತಾನ್ ಅವರ ಕೊಡುಗೆ ನಾಡಿಗೆ ಅಪಾರವಾಗಿದೆ ಎಂದರು.  

                     ಸಾನಿಧ್ಯ ವಹಿಸಿದ ಧಾರ್ಮಿಕ ಮುಖಂಡ ಸೈಯದ್ ಶಕೀಲ ಅಹಮದ್ ಖಾಜಿ ಅವರು ಮಾತನಾಡಿ ಬ್ರಿಟಿಷರ ವಿರುದ್ಧ ಹೋರಾಡಿದ ವೀರ ಅರಸ ಟಿಪ್ಪು ಸುಲ್ತಾನ್‌ರ ದೇಶಪ್ರೇಮ ಅನುಕರಣೀಯವಾಗಿದ್ದು ಅವರ ತ್ಯಾಗದ ಬದುಕು ನಮಗೆಲ್ಲರಿಗೂ ಮಾದರಿಯಾಗಬೇಕು,ಈ ಶಿಬಿರದಲ್ಲಿ ರಕ್ತದಾನ ಮಾಡುವುದರೊಂದಿಗೆ ದೇಶದ ರಕ್ಷಣೆಗಾಗಿ ಅಗತ್ಯ ಬಿದ್ದರೆ ಪ್ರಾಣವನ್ನೂ ಕೊಡಲು ಸಿದ್ದರಾಗಿದ್ದೇವೆ ಎಂಬುದನ್ನು ಸಾರಿ ಹೇಳಬೇಕಾಗಿದೆ. ಇಂತಹ ಪುಣ್ಯದ ಕಾರ್ಯ ಮಾಡಿದ ಸಮುದಾಯದ ಯುವಕರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.  

                    ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಸಮುದಾಯ ಆರೋಗ್ಯ ಕೇಂದ್ರದ ವೈದ್ಯೆ ಶ್ರೀಮತಿ ಡಾ.ಮಧುಬಾಲಾ ಸಿಂಘಾಲ,ಡಾ.ಗೌರಿ ಕಂತಲಗಾಂವಿ,ಡಾ.ಪಟೇಲ, ಡಾ.ನಮೀರಾ ತೇಲಿ, ಮುಖಂಡರಾದ ಪ್ರಭುಗೌಡ ಮದರಕಲ್ಲ, ಸಿದ್ದನಗೌಡ ಪಾಟೀಲ ನಾವದಗಿ, ಅಬ್ದುಲರಜಾಕ್ ಮನಗೂಳಿ, ಪರಶುರಾಮ ತಂಗಡಗಿ, ಟಿಪ್ಪು ಸುಲ್ತಾನ್ ರಕ್ಷಣಾ ಸಮಿತಿ ಅಧ್ಯಕ್ಷ ಉಮರ ಫಾರೂಖ ಮನಗೂಳಿ, ಉಪಾಧ್ಯಕ್ಷ ರಿಯಾಜ ಡೋಣಿ, ಕಾರ್ಯದರ್ಶಿ ಅಲ್ಲಾಭಕ್ಷ ಚಳ್ಳಿಗಿಡದ, ಮೆಹಬೂಬ ಲಾಹೋರಿ, ಸದ್ದಾಮ್ ಹೊನ್ನಳ್ಳಿ, ಸದ್ದಾಂ ಬೇಪಾರಿ, ರಾಜು ಚಿತ್ತರಗಿ ರೆಹಮಾನ ವಠಾರ, ಅಯಾನ್ ಮಕಾಂದಾರ, ಇಂತಿಯಾಜ ಉಸ್ತಾದ, ಮೋದಿನಸಾ ನಗಾರ್ಚಿ, ಇಸಾಕ ಚೌಧರಿ, ಇಬ್ರಾಹಿಂ ಆರಬೋಳ, ಬುರಾನ ಕಲಾಸಿ, ಶಪೀಕ ಇನಾಮದಾರ, ರಕ್ತ ನಿಧಿ ವಿಭಾಗದ ಅರುಣಕುಮಾರ ಕಾಂಬಳೆ, ಪ್ರತಿಭಾ ಘೋರೆ​‍್ಡ, ಟೆಕ್ನಿಷಿಯನ್ ಅನ್ನಪೂರ್ಣ ದ್ಯಾಪೂರ, ಟಿಪ್ಪು ಸುಲ್ತಾನ್ ರಕ್ಷಣಾ ಸಮಿತಿಯ ಪದಾಧಿಕಾರಿಗಳು ಹಾಗೂ ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿಗಳು ಇದ್ದರು.  ಶಿಬಿರದಲ್ಲಿ 40 ದಾನಿಗಳು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದರು.