ಹಜರತ್ ಪೀರ್ ಗಾಲಿಬ ಸಾಬ್ ಜಾತ್ರೆ ನಿಮಿತ್ತವಾಗಿ ರಕ್ತದಾನ ಶಿಬಿರ.

ಹಜರತ್ ಪೀರ್ ಗಾಲಿಬ ಸಾಬ್ ಜಾತ್ರೆ ನಿಮಿತ್ತವಾಗಿ ರಕ್ತದಾನ ಶಿಬಿರ. Blood donation camp on the occasion of Hazrat Peer Ghalib Saab Fair.

ಹಜರತ್ ಪೀರ್ ಗಾಲಿಬ ಸಾಬ್ ಜಾತ್ರೆ ನಿಮಿತ್ತವಾಗಿ ರಕ್ತದಾನ ಶಿಬಿರ. 

ಆಲಮೇಲ 02 : ಥಲಸೇಮಿಯಾ ಕಾಯಿಲೆಯಿಂದ ಬಳಲುವ ಮಕ್ಕಳಿಗೆ, ಗರ್ಭಿಣಿಯರಿಗೆ, ಬಣಂತಿಯರಿಗೆ ರಕ್ತದ ಅವಶಕತೆ ಬೇಕಿರುವದರಿಂದ ಸ್ವಯಂ ಪ್ರೇರಣೆಯಿಂದ ರಕ್ತಧಾನ ಮಾಡಬೇಕು ಎಂದು ಡಾ. ಪ್ರಶಾಂತ ದೂಮಗೊಂಡ ಹೆಳಿದರು.ಪಟ್ಟಣದ ಹಜರತ್ ಪೀರಗಾಲೀಬ ಸಾಹೇಬ ಉರುಸ್ (ಜಾತ್ರೆ) ನಿಮಿತ್ತಯ ಸಮುದಾಯದ ಆರೋಗ್ಯ ಕೆಂದ್ರದ ಅಹಯೋಗದಲ್ಲಿ ಜಿಲ್ಲಾ ಆರೋಗ್ಯ ಇಲಾಖೆ ಉಚಿತ ಆರೋಗ್ಯ ಶಿಬಿರ ಹಾಗೂ ಬ್ರಹತ್ ರಕ್ತಧಾನ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿದರು. ವಿಜಯಪುರ ಜಿಲ್ಲೆಯಲ್ಲಿ 100 ಮಕ್ಕಳು ಥಲಸೇಮಿಯಾ ಕಾಯಿಲೆಯಿಂದ ಬಳಲುತ್ತಿದ್ದು ಅವರಿಗೆ ಪ್ರತಿ ತಿಂಗಳು ರಕ್ತ ನೀಡಿದೆಡ ಅವರ ಜೀವ ರಕ್ಷಣೆ ಮಾಡಲು ಸಹಾಯವಾಗುತ್ತದೆ. ಹಾಗೆ  ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಡ ರೋಗಿಗಳಿಗೆ, ಗರ್ಭಿಣಿಯರಿಗೆ, ಬಾಣಂತಿಯರಿಗೆ ಅನಕೂಲವಾಗಲಿದೆ. ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ರಕ್ತ ನಿಧಿ ಕೇಂದ್ರ ಆರಂಬಿಸಿದ್ದು ನಮ್ಮಲ್ಲಿ ರಕ್ತಧಾನ ಮಾಡುವದರಿಂದ ಬಡವರಿಗೆ ಅನಕೂಲವಾಗಲಿದೆ ಡಂದರು. ರಕ್ತಧಾನ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಸ್ವಯಂ ಪ್ರೇರಣೆಯಿಂದ ರಕ್ತಧಾನ ಮಾಡಲು ಮುಂದಾಗಬೇಕು ಎಂದು ಹೆಳಿದರು. ಡಾ. ಶ್ರೀಶೈಲ ಪಾಟೀಲ, ಡಾ. ಸಂದೀಪ ಪಾಟೀಲ ಮಾತನಾಡಿ ರಕ್ತಧಾನ ಅತ್ಯಂತ ಶ್ರೇಷ್ಠವಾಗಿದ್ದು ತಾವು ಮಾಡುವ ರಕ್ತಧಾನದಿಂದ ಎಷ್ಟು ಜನರ ಜೀವ ರಕ್ಷಣೆ ಮಾಡಿದಂತೆ ಅದಕ್ಕೆ ಎಲ್ಲರು ಸ್ವಯಂ ಪ್ರೇರಣೆಯಿಂದ ರಕ್ತಧಾನ ಮಾಡಬೇಕು ಎಂದು ಹೆಳಿದರು.ಟಿ.ಎಚ್‌.ಓ ಶಶಿಕಾಂತ ಬಾಗೇವಾಡಿ, ಮಂಜುನಾಥ ಆಕಾಶ, ಡಾ. ವರುಣ ಪಾಟೀಲ, ಡಾ. ರೀತೇಶ ಪಾಟೀಲ, ಡಾ. ಪೂಜಾ ಪಾಟೀಲ, ಡಾ. ಜಿ.ಎಸ್‌. ಪತ್ತಾರ, ಡಾ. ಅಜಯ ದೇಶಾಯ,  ಜಿಲ್ಲಾ ಆಸ್ಪತ್ರೆಯ ರಕ್ತ ನೀಡಿಯ ಡಾ. ಸುಮಾ ಮಮದಾಪೂರ, ಸಂದೇಶ ಜೂಗೂರ, ಮಲ್ಲಿಕಾರ್ಜುನ್ ಪೂಜಾರಿ, ದತ್ತಾತ್ರೇಯ ಕುಲಕರ್ಣಿ, ನಿಂಗಪ್ಪ ಬೋಡಕೆ, ಎಫ್‌. ಎ. ಶೇಕ್‌. ಸೋಮನಾಥ್ ಜಾಮುಗೊಂಡ, ಶಿವರಾಜ್ ಹುಲ್ಲೂರ್, ಮಾರ್ಥಂಡ ವಗ್ಗೆ , ಸಂತೋಷ್ ಕೋರಿ,ಗಂಗುಬಾಯಿ ಅಮಲಝರಿ, ಆಶಾ ಕಾರ್ಯಕರ್ತೆಯರು ಆರೋಗ್ಯ ಇಲಾಖೆ ಸಿಬ್ಬಂದಿ ಇದ್ದರು.ರಕ್ತಧಾನ ಶಿಬಿರದಲ್ಲಿ 100 ಸ್ವಯಂ ಪ್ರೇರಣೆಯಿಂದ ರಕ್ತಧಾನ ಮಾಡಿದ್ದಾರೆ.ವರದಿ. ಉಮೇಶ್ ಕಟಬರ