ಬುಡಾ ವ್ಯಾಪ್ತಿಗೆ ಬರುವ ಗ್ರಾಪಂಗಳಲ್ಲಿ ಅನಧಿಕೃತ ಬೆಳವಣಿಗೆ ತಡೆಗಟ್ಟಿ : ದಮ್ಮೂರು

ಬಳ್ಳಾರಿ, ಜು.13: ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಗೆ ಬರುವ 6 ಗ್ರಾಮ ಪಂಚಾಯತ್ಗಳಲ್ಲಿನ 18 ಗ್ರಾಮಗಳಲ್ಲಿ ಪ್ರಾಧಿಕಾರದಿಂದ ವಿನ್ಯಾಸ ಅನುಮೋದನೆ ಪಡೆದುಕೊಳ್ಳದೇ ಅನಧಿಕೃತವಾಗಿ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಕೈಗಾರಿಕಾ ವಾಣಿಜ್ಯ ವಸತಿ ವಿನ್ಯಾಸಗಳಿಗೆ ಅನುಮೋದನೆ ನೀಡಿದ್ದಾರೆ ಎಂದು ಬುಡಾ ಅಧ್ಯಕ್ಷ ದಮ್ಮೂರು ಶೇಖರ್ ಅವರು ತಿಳಿಸಿದ್ದಾರೆ.

   ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದಶರ್ಿಗಳಾದ ಎಲ್.ಕೆ. ಅತೀಕ್ ಅವರಿಗೆ ಬೆಂಗಳೂರಿನಲ್ಲಿ ಸೋಮವಾರ ಭೇಟಿಯಾಗಿ ಮನವಿ ಸಲ್ಲಿಸಿದ ಅವರು ಈ ರೀತಿ ಅನುಮೋದನೆ ನೀಡುವುದು ಕಾನೂನಿನಡಿ ಅಕ್ರಮ ಆಗಿರುತ್ತದೆ. ಇಂತಹ ಪಿ.ಡಿ.ಒ ಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅವರು ಮನವಿ ಮಾಡಿದ್ದಾರೆ.

    ಇದಕ್ಕೆ ಸ್ಪಂದಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಕಾರ್ಯದಶರ್ಿ ಅತೀಕ್ ಅವರು ಪಂಚಾಯತ್ ರಾಜ್ ಇಲಾಖೆಯ ಆಯುಕ್ತರಿಗೆ ಪರಿಶೀಲನೆ ನಡೆಸಿ ಕ್ರಮಕೈಗೊಳ್ಳಲು ಸೂಚಿಸಿದರು