ಕೊಪ್ಪಳದ ಗವಿ ಸಿದ್ಧೇಶ್ವರ ಮಹಾಸ್ವಾಮಿಗಳಿಂದ ಎರಡನೇ ದಿನದ ಪ್ರವಚನದಲ್ಲಿ ಭಕ್ತರಿಗೆ ಆಶಿರ್ವಚನ

ಕೊಪ್ಪಳದ ಗವಿ ಸಿದ್ಧೇಶ್ವರ ಮಹಾಸ್ವಾಮಿಗಳಿಂದ ಎರಡನೇ ದಿನದ ಪ್ರವಚನದಲ್ಲಿ ಭಕ್ತರಿಗೆ ಆಶಿರ್ವಚನ  Blessings to devotees during the second day's discourse by Gavi Siddheshwara Mahaswamy of Koppal

ಮಹಾಲಿಂಗಪುರ 24:  ಸಕಲ ಜೀವಾತ್ಮರಿಗೆ ಭೂಮಿ ಮೇಲಿನ ಸಮ್ಮಂಧ ಕೇವಲ ನಿಮಿತ್ಯ ಮಾತ್ರ.ಒಂದಲ್ಲ ಒಂದು ದಿನ ನಾವಿದ್ದ ಜಾಗೆಯನ್ನು ತೊರೆದು ಸ್ವಸ್ಥಾನ (ಪರಲೋಕ) ಕ್ಕೆ ಹೋಗಲೆ ಬೇಕು ಇದು ಶತ ಸಿದ್ಧ ಎಂದು ಮಹಾಲಿಂಗಪುರ ಪಟ್ಟಣದಲ್ಲಿ ನಡೆದ ಕೊಪ್ಪಳದ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಎರಡನೇ ದಿನದ ಪ್ರವಚನದಲ್ಲಿ ಭಕ್ತರಿಗೆ ಆಶಿರ್ವಚನ ನೀಡಿದರು. 

ತಾಯಿಯ ಜೋಗುಳ, ತಂದೆಯ ಬೈಗುಳ ಎರಡೂ ಕೂಡ ಮಾನವ ಜನ್ಮದ ಪರಿಪೂರ್ಣಕ್ಕೆ ಪೂರಕವಾಗಿವೆ. ಜೀವನದಲ್ಲಿ ತಂದೆ ಶವಪಥ ತೋರಿದರೆ, ಅನಿಯಮಿತ ಬಂಧು, ಅಪೇಕ್ಷೆ ರಹಿತ, ಭಕ್ತನ ಮನ ಬೆಳಗುವ ಗುರು ತನ್ನ ಆತ್ಮಾನುಭೂತಿಯಿಂದ ಶಿಷ್ಯನಿಗೆ ಆತ್ಮ ಜ್ಞಾನವ ನೀಡುವುದರೊಂದಿಗೆ ಆತನ ಬದುಕನ್ನು ಅಮೃತ ಕಡೆಗೆ ಒಯ್ಯುವ ಶಿವಪಥವನ್ನು ತೋರುತ್ತಾನೆ.ಆದ್ದರಿಂದ ಗುರು ಶಿಷ್ಯರ ಸಮ್ಮಂಧ ಆಕಳು ಮತ್ತು ಕರುವಿನಂತೆ ನಿರ್ಮಲವಾಗಿದೆ. ಬಾಳಿನಲ್ಲಿ ಅಂಧಕಾರ, ಕತ್ತಲು ಎನ್ನುವುದು ಇಲ್ಲವೇ ಇಲ್ಲ, ಕೇವಲ ನಮ್ಮ ಭ್ರಮೆ ಮಾತ್ರ.ದೀಪ ಕತ್ತಲೆಯನ್ನು ಹೇಗೆ ಓಡಿಸುತ್ತದೆಯೋ ಹಾಗೆ, ಮನುಷ್ಯ ಅಂತರಂಗದಲ್ಲಿಯ (ಕೆಟ್ಟ ಆಲೋಚನೆಗಳ) ಕತ್ತಲೆ ಕಳೆದುಕೊಳ್ಳಲು ಒಳ್ಳೆಯ ವಿಚಾರಗಳ ದೀಪ ಹಚ್ಚಿಕ್ಕೊಂಡು ತನ್ನ ಮನಸ್ಸನ್ನು ಶುಚಿತ್ವಗೊಳಿಸಿಕ್ಕೊಳ್ಳಬೇಕು. ಇದರಿಂದ ನಡತೆ, ಹಾವಭಾವ ಉತ್ತಮಗೊಂಡು ಸಮಾಜದಲ್ಲಿ ಆತ ಶ್ರೇಷ್ಠ ವ್ಯಕ್ತಿ ಎನಿಸಿಕ್ಕೊಳ್ಳುತ್ತಾನೆ. ಮಲಗುವಾಗ, ಎಚ್ಚರಗೊಂಡಾಗ ಮತ್ತು ಇತರ ಸಮಯದಲ್ಲೂ ಪರಮಾತ್ಮನ ನಾಮಸ್ಮರಣೆ ಬೇಕು, ಏಕೆಂದರೆ ಈ ಇಹಲೋಕದಲ್ಲಿ ಎಲ್ಲ ಸೌಭಾಗ್ಯಗಳನ್ನು ನೀಡಿ ನಮ್ಮ ಬದುಕು ಸುಂದರಗೊಳ್ಳಲು ಕಾರಣಿಭೂತನಾದ ಆತನಿಗೆ ಒಂದಿಷ್ಟು ಉಪಕಾರ ಸ್ಮರಣೆ ಇರಲಿ. 

ಇಂದಿನ ಮಕ್ಕಳು ಒಳ್ಳೆ ಸಂಸ್ಕಾರದ ಕೊರತೆ ಎದುರಿಸುತ್ತಿದ್ದಾರೆ.ಭವಿಷ್ಯದಲ್ಲಿ ಅವರು ಉತ್ತಮ ನಾಗರಿಕರಾಗಲು ಪಾಲಕರು, ಪೋಷಕರು ಇವರ ಕಡೆಗೆ ಹೆಚ್ಚಿನ ಗಮನ ಹರಿಸಲು ಶ್ರೀಗಳು ತಿಳಿ ಹೇಳಿದರು.ವಿವೇಕ ತಾಯಿ ಇದ್ದಂತೆ, ಮನಸ್ಸು ಮಗುವಿನಂತೆ.ವಿವೇಕಯುತ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಮಕ್ಕಳ ಮನಸ್ಸಿನಲ್ಲಿ ತುಂಬಬೇಕು. ಭೂಮಿಗೆ ಬಿದ್ದ ಬೀಜ, ಎದೆಗೆ ಬಿದ್ದ ಅಕ್ಷರ ಎಂದಿಗೂ ವ್ಯರ್ಥವಾಗುವುದಿಲ್ಲ. ಅದೆ ಮಕ್ಕಳು ಸಮಾಜಕ್ಕೆ ಕಂಟಕವಾಗುವ ಬದಲು ಮಾದರಿಯಾಗುತ್ತಾರೆ.