ಗದಗ ಸಂಗೀತ ದಿಗ್ಗಜರ ಜನ್ಮ ಮತ್ತು ಕರ್ಮ ಭೂಮಿ-ರಿಂಪಾ ಸಿವ

ಗದಗ ಸಂಗೀತ ದಿಗ್ಗಜರ ಜನ್ಮ ಮತ್ತು ಕರ್ಮ ಭೂಮಿ-ರಿಂಪಾ ಸಿವ Birthplace and Karma Bhoomi of Gadag Music Legend-Rimpa Siva

ಗದಗ 05:  ಉತ್ತರ ಕರ್ನಾಟಕದ ಕಲಾವಿದರ ಹಾಗೂ ಕಲಾ ಪೋಷಕರ ಸಂಘಟನೆಯಾದ ಕಲಾ ವಿಕಾಸ ಪರಿಷತ್‌ರಜತ ಮಹೋತ್ಸವ ವರ್ಷಾಚರಣೆ ಉದ್ಘಾಟನಾ ಸಮಾರಂಭವು ದಿನಾಂಕ 02 ನವಂಬರ್ 2025 ರಂದು ಸಂಜೆ 4 ಗಂಟೆಗೆ ಅವಳಿ ನಗರದ ಚಿಕ್ಕಟ್ಟಿ ಸಮೂಹ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿನಚಿಕ್ಕಟ್ಟಿ ಸಭಾ ಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು.  

ಪರಿಷತ್ ಇಪ್ಪತ್ತೈದು ವರ್ಷ ಪೂರೈಸಿದ ಸವಿ ನೆನಪಿಗಾಗಿ ವರ್ಷ ಪೂರ್ತಿ ಕಾರ್ಯಕ್ರಮಗಳ ಆಯೋಜನೆಯ ಉದ್ದೇಶಿತ ಕಾರ್ಯಕ್ರಮ ಕಲಾ ವಿಕಾಸ ಪರಿಷತ್ ರಜತ ಮಹೋತ್ಸವ ವರ್ಷಾಚರಣೆ ಉದ್ಘಾಟನಾ ಸಮಾರಂಭವನ್ನು ವಿಶ್ವವಿಖ್ಯಾತ, ದೇಶದ ಪ್ರಥಮ ಮಹಿಳಾ ತಬಲಾ ಸೋಲೋ  ಕಲಾವಿದೆ ಕೊಲ್ಕತ್ತಾದ ರಿಂಪಾ ಸಿವಾ ಅವರು ದೀಪ ಬೆಳಗಿಸಿ ವರ್ಷಾಚರಣೆಗೆ ಚಾಲನೆ ನೀಡಿ ಮಾತನಾಡಿ, ಜಗತ್ತಿನ ಎಲ್ಲ ವೇದಿಕೆಗಳಲ್ಲಿ ಕಾರ್ಯಕ್ರಮ ನೀಡುವುದಕ್ಕೂ ಗದಗನಲ್ಲಿ ಕಾರ್ಯಕ್ರಮ ನೀಡುವುದಕ್ಕೂ ತುಂಬಾ ವ್ಯತ್ಯಾಸವಿದೆ. ಇಲ್ಲಿ ನಾನು ಅಂತರಂಗದಿಂದ ನುಡಿಸುತ್ತೇನೆ ಸಂಭಾನೆಗಾಗಿ ಅಲ್ಲ. ಗದಗ, ಅನೇಕ ಸಂಗೀತ ದಿಗ್ಗಜರ ಜನ್ಮಭೂಮಿ ಮತ್ತು ಕರ್ಮಭೂಮಿಯಾಗಿದೆ. ಇಲ್ಲಿ ಹಿರಿಯ ಯುವ ಸಂಗೀತ ಕಲಾವಿದರಿದ್ದಾರೆ ಇಲ್ಲಿಯ ಕೇಳುಗರನ್ನು ನೋಡಿದರೆ ನನಗೆ ಆನಂದವಾಗುತ್ತದೆ ಎಂದು ಗದುಗಿನ ನೆಲದ ಗುಣಗಾನ ಮಾಡಿದರು. 

ಉದ್ಘಾಟನಾ ಸಭೆಯ ಪೂರ್ವದಲ್ಲಿ ಅಂತಾರಾಷ್ಟ್ರೀಯ ಕಲಾವಿದರೊಂದಿಗೆ ಸ್ಥಳಿಯ ಪ್ರತಿಭೆಗಳಿಗೆ ಅವಕಾಶ ನೀಡುವ ಉದ್ದೇಶದಂತೆ ವೀರೇಶ್ವರ ಪುಣ್ಯಾಶ್ರಮದ ಯುವ ಗಾಯಕ ಮಲ್ಲೇಶ ಹೂಗಾರ ಅವರ ಗಾಯನ ಅದ್ಬುತ ಲೋಕವನ್ನೇ ಸೃಷ್ಟಿತು. ಲಕ್ಷ್ಮೇಶ್ವರ ಭವ್ಯಎಸ್ ಕತ್ತಿಕಲಾ ವೈಭವ ಭರತನಾಟ್ಯ ತಂಡದವರು ಶುದ್ಧ ಶಾಸ್ತ್ರೀಯ ನೃತ್ಯ ಮನರಂಜಿತು. ಮಲ್ಲೇಶ ಹೂಗಾರ ಗಾಯನಕ್ಕೆ ರಾಮುಕೊಡೇಕಲ್ ಹಾರ್ಮೋನಿಯ ಸಾಥ್ ನೀಡಿದರೆ..ಕನ್ನಯ್ಯಕೊಡೇಕಲ್ ತಬಲಾ ಸಾಥ್ ನೀಡಿದರು. ನಂತರರಿಂಪಾ ಸಿವ ಅವರತಬಲಾ ವಾದನವನ್ನು ಸಭಿಕರಿಗೆ ಬೇರೆಯದೇ ಲೋಕದಲ್ಲಿ ವಿಹರಿಸುವಂತೆ ಮಾಡಿತು. ಇವರಿಗೆ ಹಾರ್ಮೋನಿಯನಲ್ಲಿ ಸಮರ್ಥ ಸಾಥ್ ನೀಡಿದವರು ಬೆಂಗಳೂರಿನ ಪಂ. ಸತೀಶಕೊಳ್ಳಿ. 

ಕಾರ್ಯಕ್ರಮದಕೊನೆಯಲ್ಲಿ ಸಭಾಕಾರ್ಯಕ್ರಮ ಏರಿ​‍್ಡಸಿ ರಿಂಪಾ ಸಿವ ಇವರಿಗೆತಾಲ ಪಂಚಾಕ್ಷರಿರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಲಾಯಿತು ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಹಿರಿಯ ಸಾಹಿತಿ ಚಂದ್ರಶೇಖರ ವಸ್ತ್ರದರಿಂಪಾಕೈಚಕದ ಗುಣಗಾನ ಮಾಡಿದರು. ಗದಗ ಜಿಲ್ಲಾ ಕಸಾಪ ಅಧ್ಯಕ್ಷ ವಿವೇಕಾನಂದ ಗೌಡಪಾಟೀಲ, ವಿಭೂತಿ ಪತ್ರಿಕೆ ಸಂಪಾದಕ ಅಂದಾನೆಪ್ಪ ವಿಭೂತಿ, ಪ್ರೊ. ಕೆ ಹೆಚ್‌. ಬೇಲೂರು, ಪ್ರೊ. ಅನ್ನದಾನಿ ಹಿರೇಮಠ, ಕಲಾ ವಿಕಾಸ ಉತ್ಸವ ಸ್ವಾಗತ ಸಮಿತಿಅಧ್ಯಕ್ಷ ವಿ. ಕೆ. ಗುರುಮಠ ಮಾತನಾಡಿದರು. ಪ್ರೊ. ಎಸ್‌. ವಾಯ್‌ಚಿಕ್ಕಟ್ಟಿಅಧ್ಯಕ್ಷತೆ ವಹಿಸಿಕೊಂಡಿದ್ದರು. 

ಗದಗ ಜಿಲ್ಲಾ ಚೇಂಬರ್‌ಆಪ್‌ಕಾಮರ್ಸ್‌ ಅಧ್ಯಕ್ಷ ಶರಣಪ್ಪ (ರಾಜು) ಗುಡಿಮನಿ, ಪ್ರಾಚಾರ್ಯ ಬಿಪಿನ ಚಿಕ್ಕಟ್ಟಿ, ಕಲಾ ಪೋಷಕರಾದ ಶಶಿಧರ ಮಂಗಳೂರು, ಬಸವರಾಜ ಗಣಪ್ಪನವರ, ಡಾ. ದತ್ತ ಪ್ರಸನ್ನ ಪಾಟೀಲ್, ಶೋಭಾ ಸ್ಥಾವರಮಠ  ಬೂದಪ್ಪಅಂಗಡಿ, ಬಿ ಎಂ. ಬಿಳಿಎಲಿ ಉಪಸ್ಥಿತರಿದ್ದರು. ಕಲಾ ವಿಕಾಸ ಪರಿಷತ್ ಸದಸ್ಯೆಕಲಾವಿದೆ ಸವಿತಾಕುಪ್ಪಸದ ಸ್ವಾಗತಿಸಿದರು. ಮಹಾದೇವಿ ಸಿ ಹೆಚ್ ವಂದಿಸಿದರು. ಕಲಾ ವಿಕಾಸ ಪರಿಷತ್ ಸಂಸ್ಥಾಪಕ ಸಿ. ಕೆ. ಹೆಚ್ .ಶಾಸ್ತ್ರಿ ಕಡಣಿ, ಪ್ರಸ್ತಾವಿಕವಾಗಿ ಮಾತನಾಡಿಕಾರ್ಯಕ್ರಮ ನಿರೂಪಣೆ ಮಾಡಿದರು.