ನವದೆಹಲಿ, ಅ.15: ಸಂಸದ ಮಹೇಂದ್ರನಾಥ್ ಪಾಂಡೆ ಅವರ ಜನ್ಮ ದಿನದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಶುಭಾಶಯ ಕೋರಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಡಾ.ಎಂ.ಎನ್. ಪಾಂಡೇಜಿಯವರಿಗೆ ಹುಟ್ಟುಹಬ್ಬದ ಶುಭಾಶಯಗಳು. ಭಾರತದ ಯುವ ಜನಾಂಗದ ಕೌಶಲ್ಯಾಭಿವೃದ್ಧಿ ಹೆಚ್ಚಿಸಲು ಅವರು ಅಹರ್ನಾಶಿ ದುಡಿಯುತ್ತಿದ್ದಾರೆ ಎಂದು ತಿಳಿಸಿದ್ದಾರೆ. ದೇಶ ಸೇವೆಗಾಗಿ ಅವರಿಗೆ ದೇವರು ಉತ್ತಮ ಆರೋಗ್ಯ ಮತ್ತು ದೀರ್ಘಯುಷ್ಯ ಕರುಣಿಸಲಿ ಎಂದು ಮೋದಿ ಟ್ವೀಟ್ ಮಾಡಿದ್ದಾರೆ. ಪಾಂಡೆ ಅವರು 2014ರಿಂದ ಚಾಂದೌಲಿ ಕ್ಷೇತ್ರದಿಂದ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗುತ್ತಿದ್ದಾರೆ. ಬಿಜೆಪಿಯ ಸದಸ್ಯರಾಗಿರುವ ಅವರು ಉತ್ತರ ಪ್ರದೇಶದ ಪಕ್ಷದ ಅಧ್ಯಕ್ಷರಾಗಿದ್ದಾರೆ