ಯೋಗಿನಾರೇಯಣ ಯತೀಂದ್ರರ ಕೈವಾರ ತಾತಯ್ಯನವರ ಜಯಂತಿ

Birth anniversary of Yoginareyana Yatindra's handmaiden Tataiah

ಲೋಕದರ್ಶನ ವರದಿ 

ಯೋಗಿನಾರೇಯಣ ಯತೀಂದ್ರರ ಕೈವಾರ ತಾತಯ್ಯನವರ ಜಯಂತಿ 

ಹಾವೇರಿ  17:   ವಿಶ್ವಕ್ಕೆ ಉತ್ತಮ ಸಂದೇಶ ಸಾರಿದ   ಯೋಗಿನಾರೇಯಣ ಯತೀಂದ್ರ ಅವರ ಆದರ್ಶ ಗುಣಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಂಡು ಸನ್ಮಾರ್ಗದಲ್ಲಿ ಸಾಗಬೇಕು ಎಂದು ನಗರಸಭೆ ಉಪಾಧ್ಯಕ್ಷ ಮಲ್ಲಿಕಾರ್ಜುನ ಸಾತೇನಹಳ್ಳಿ ಹೇಳಿದರು. 

ನಗರದ ಗಾಂಧಿ ಭವನದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಹಾವೇರಿ ಜಿಲ್ಲಾ ಬಲೀಜ ಸಮಾಜದ ಸಹಯೋಗದಲ್ಲಿ ಆಯೋಜಿಸಲಾಗಿದ   ಯೋಗಿನಾರೇಯಣ ಯತೀಂದ್ರರ ಕೈವಾರ ತಾತಯ್ಯನವರ ಜಯಂತಿ ಕಾರ್ಯಕ್ರಮ ಉದದ್ಘಾಟಿಸಿ,    ಯೋಗಿನಾರೇಯಣ ಯತೀಂದ್ರರ ಭಾವಚಿತ್ರಕ್ಕೆ ಪುಷ್ಪಾರ್ಚನೆಮಾಡಿ ಮಾತನಾಡಿದ ಅವರು, ಇಂದಿನ ಯುವ ಪೀಳಿಗೆಗೆ ಹಿರಿಯ ತತ್ವಜ್ಞಾನಿಗಳ ಆದರ್ಶಗಳನ್ನು  ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸುಂದರ ಬದಕು ಕಟ್ಟಿಕೊಳ್ಳುವತ್ತ ಮುನ್ನಡೆಯಬೇಕು ಎಂದರು.  

ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕ ಹಾಗೂ ಸಮಾಜದ ಮುಖಂಡ, ಎನ್‌. ಎಚ್‌. ಮಕರಿ ಅವರು   ಯೋಗಿನಾರೇಯಣ ಯತೀಂದ್ರರ ಕೈವಾರ ತಾತಯ್ಯನವರ ಜೀವನದ ಕುರಿತು ವಿಶೇಷ ಉಪನ್ಯಾಸ ನೀಡಿದರು. 

ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಆರ್‌. ವಿ. ಚಿನ್ನಿಕಟ್ಟಿ, ಜಿಲ್ಲಾ ಪಂಚಾಯತ ಮಾಜಿ ಸದಸ್ಯ ರಾಘವೇಂದ್ರ ಮನೋಹರ ತಹಶೀಲ್ದಾರ್, ಬಿ.ಇಡಿ. ಕಾಲೇಜು ಪ್ರಾಚಾರ್ಯ ಡಾ.ಬಸನಗೌಡ್ರ, ಬಸವರಾಜ, ದೇವರಾಜ್ ನಾಯ್ಡು, ಧರ್ಮಣ್ಣ, ರಾಜಶೇಖರ್ ಹಾಗೂ ಸಮಾಜದ ಮುಖಂಡರು ಉಪಸ್ಥಿತರಿದ್ದರು.