ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ ನೌಕರರ ಸಂಘದ ಅಧ್ಯಕ್ಷರಾಗಿ ಬಿರಾದಾರ ಅವಿರೋಧ ಆಯ್ಕೆ

ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ ನೌಕರರ ಸಂಘದ ಅಧ್ಯಕ್ಷರಾಗಿ ಬಿರಾದಾರ ಅವಿರೋಧ ಆಯ್ಕೆ  Biradar elected unopposed as President of Karnataka State Gram Panchayat Employees Association

ದೇವರಹಿಪ್ಪರಗಿ  18: ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ ನೌಕರರ ಸಂಘದ ತಾಲೂಕು ಅಧ್ಯಕ್ಷರಾಗಿ ಶಿವಾನಂದ ಬಿರಾದಾರ ಅವಿರೋಧ ಆಯ್ಕೆಯಾದರು .    

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಇತ್ತಿಚೆಗೆ ನಡೆದ ತಾಲೂಕ ಸಮಿತಿಯ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ ನೌಕರರ ಸಂಘದ ಸಭೆಯನ್ನು ತಾಲೂಕ ಅಧ್ಯಕ್ಷರಾದ  ಶಿವಾನಂದ ಬಿರದಾರ ಅವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.ಸಭೆಯಲ್ಲಿ ಚರ್ಚಿಸತಕ್ಕ ವಿಷಯಗಳಲ್ಲಿ ತಾಲೂಕ ಸಮಿತಿಯ ಹೊಸ  ಸಮಿತಿಯ ರಚನೆಯ ಬಗ್ಗೆ ಶಿವಾನಂದ ಬಿರಾದಾರ ಪ್ರಸ್ತಾಪಿಸಿದರು,ಹಾಜರಿದ್ದ ಸದಸ್ಯರೆಲ್ಲ ಸೇರಿಕೊಂಡು ಚರ್ಚಿಸಿ ನೂತನ ಸಮಿತಿ ರಚನೆಗೆ ಒಪ್ಪಿ ಇಗ ಇದ್ದ ಅಧ್ಯಕ್ಷರನ್ನು ಮುಂದಿನ ಅವಧಿಗೆ ಆಯ್ಕೆಮಾಡಲು ಸಂತೋಷ ಹಿರೇಮಠ ರವರು ಸಭೆಗೆ ಸೂಚಿಸಿದರು. ಸದರಿ ಸೂಚನೆಗೆ ಸಭೆಯು ಸರ್ವಾನುಮತದಿಂದ ಒಪ್ಪಿಗೆ ಠರಾವು ಪಾಸು ಮಾಡಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.                                                                                    

ಗೌರವಾಧ್ಯಕ್ಷರಾಗಿ  ಡಿ.ಎಸ್‌.ಕಣಮೇಶ್ವರ. ತಾಲೂಕು ಅಧ್ಯಕ್ಷರಾಗಿ ಶಿವಾನಂದ. ಎಸ್‌. ಬಿರಾದಾರ    ಉಪಾಧ್ಯಕ್ಷರಾಗಿ  ಭಾರತಿ ಮನಗೂಳಿ,ಪರಮಾನಂದ ಬಿರಾದಾರ, ರಮೇಶ ಹರಿಜನ,ದೇವೇಂದ್ರ ಲಾಯಗುಂದಿ. ಹುಶೇನಸಾಬ ಕರಡಿ. ಪ್ರಧಾನ ಕಾರ್ಯಾದರ್ಶಿ ಬಾಪುಸಾಬ ಟಕ್ಕಳಕಿ, ಖಜಾಂಚಿ ಅಮೀನ ಪಟೇಲ ಮುಜಾವರ,ಸಹ ಕಾರ್ಯದರ್ಶಿ ಪ್ರಕಾಶ ಭಜಂತ್ರಿ,ಇಬ್ರಾಹಿಂಮ ಸಿಪಾಯಿ, ಮಡಿವಾಳಪ್ಪ ನಾಯ್ಕೋಡಿ, ಮಲ್ಲಕಾರ್ಜುನ ಕುಂಬಾರ ಆಯ್ಕೆ ಮಾಡಲಾಯಿತು. ನಂತರಸಭೆಯಲ್ಲಿ ಮಾತನಾಡಿದ  ಜಿಲ್ಲಾ ಮುಖಂಡ ಲಾಲಹ್ಮದ ಶೇಖ ನೂತನ ತಾಲೂಕು ಪಧಾದಿಕಾರಿಳು ಎಲ್ಲರು ಸಂಘದ ಕೇಲಸವನ್ನು ಶಿಸ್ತಿನಿಂದ ಮತ್ತು ಪ್ರಮಾಣಿಕವಾಗಿ ಮಾಡಲು ತಿಳಿಸಿದರು.ಇದೇ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು