ಬಿಂಜಲಭಾವಿ ಪಿಕೆಪಿಎಸ್ ಅಧ್ಯಕ್ಷ-ಉಪಾಧ್ಯಕ್ಷರ ಅವಿರೋಧ ಆಯ್ಕೆರುದ್ರಗೌಡ ಪಾಟೀಲ ಅಧ್ಯಕ್ಷ, ಸೂಗಪ್ಪಗೌಡ ಬಿರಾದಾರ ಉಪಾಧ್ಯಕ್ಷ

Binjalabhavi PKPS President-Vice President Unopposed Elections: Rudragowda Patil President, Sugappa

ಬಿಂಜಲಭಾವಿ ಪಿಕೆಪಿಎಸ್ ಅಧ್ಯಕ್ಷ-ಉಪಾಧ್ಯಕ್ಷರ ಅವಿರೋಧ ಆಯ್ಕೆರುದ್ರಗೌಡ ಪಾಟೀಲ ಅಧ್ಯಕ್ಷ, ಸೂಗಪ್ಪಗೌಡ ಬಿರಾದಾರ ಉಪಾಧ್ಯಕ್ಷ  

ತಾಳಿಕೋಟಿ 25: ತಾಲೂಕಿನ ಬಿಂಜಲಭಾವಿ ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಅಧ್ಯಕ್ಷರಾಗಿ ರುದ್ರಗೌಡ ದೊಡ್ಡಪ್ಪಗೌಡ ಪಾಟೀಲ ಹಾಗೂ ಉಪಾಧ್ಯಕ್ಷರಾಗಿ ಸೂಗಪ್ಪಗೌಡ ಬಸನಗೌಡ ಪಾಟೀಲ ಅವಿರೋಧ ಆಯ್ಕೆಯಾದರು. ಮಂಗಳವಾರ ಸಂಘದ ಸಭಾ ಭವನದಲ್ಲಿ ನಡೆದ ಈ ಚುನಾವಣೆಯಲ್ಲಿ ಈ ಇಬ್ಬರು ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ಗುರುರಾಜ ಕವದಿ ಘೋಷಿಸಿದರು. ಸಂಘದ ಒಟ್ಟು 11 ನಿರ್ದೇಶಕರಲ್ಲಿ ಚುನಾವಣಾ ಸಭೆಯಲ್ಲಿ ಎಲ್ಲರೂ ಭಾಗವಹಿಸಿದ್ದರು.  

ಸನ್ಮಾನ ಸಮಾರಂಭ: ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದ ಅಧ್ಯಕ್ಷ- ಉಪಾಧ್ಯಕ್ಷ ಹಾಗೂ ನೂತನ ನಿರ್ದೇಶಕರಿಗೆ ಸಂಘದ ವತಿಯಿಂದ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಯಿತು. ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಅಮರೇಶಗೌಡ ನಾಡಗೌಡ ಅವರು ಸಹಕಾರ ಸಂಘದಲ್ಲಿ ರಾಜಕಾರಣ ಮಾಡಿದರೆ ಸಂಘದ ಏಳಿಗೆ ಆಗುವದಿಲ್ಲ ಬದಲಾಗಿ ಸಂಘ ನಶಿಸಿ ಹೋಗುತ್ತದೆ. ಈ ಕಾರಣಕ್ಕಾಗಿಯೇ ಎಲ್ಲರೂ ಕೂಡಿಕೊಂಡು ನಿರ್ದೇಶಕರ ಸಹಮತದೊಂದಿಗೆ ಅಧ್ಯಕ್ಷ ಉಪಾಧ್ಯಕ್ಷರ ಅವಿರೋಧ ಆಯ್ಕೆ ನಡೆದಿದೆ ಅಧ್ಯಕ್ಷರು ಎಲ್ಲ ನಿರ್ದೇಶಕರ ವಿಶ್ವಾಸವನ್ನು ಪಡೆದುಕೊಂಡು ಸಂಘದ ಅಭಿವೃದ್ಧಿಗೆ ಶಕ್ತಿ ಮೀರಿ ಪ್ರಯತ್ನಿಸಬೇಕು ಎಂದರು.  

ನೂತನ ನಿರ್ದೇಶಕರಿಗೆ ಸದಸ್ಯತ್ವ ಪ್ರಮಾಣ ಪತ್ರ ವಿತರಿಸಲಾಯಿತು. ಗ್ರಾಮದ ಗಣ್ಯರಾದ ಶಾಂತಪ್ಪ ಪಟ್ಟಣಶೆಟ್ಟಿ, ಬಸನಗೌಡ ಪಾಟೀಲ್, ಶಂಕರಗೌಡ ಪಾಟೀಲ, ಬಸಲಿಂಗಪ್ಪ ಗೌಡ ಮುದ್ನೂರ, ಮುರಿಗೆಪ್ಪ ಪಟ್ಟಣಶೆಟ್ಟಿ, ವೀರೇಶಗೌಡ ಅ.ನಾಡಗೌಡ, ಎಸ್‌.ಆರ್‌. ಪಾಟೀಲ, ಜಿ.ಎಸ್‌.ಪಡೇಕನೂರ, ಅಕ್ಬರ್ ಮುಜಾವರ, ಡಿಸಿಸಿ ಬ್ಯಾಂಕ್ ಕ್ಷೇತ್ರಾಧಿಕಾರಿ ಎನ್‌.ಜಿ. ಬಿರಾದಾರ, ಮಾಜಿ ಕಾರ್ಯದರ್ಶಿ ಜಿ.ಎಂ.ಬಿರಾದಾರ, ಕಾರ್ಯದರ್ಶಿ ವಿಜಯಕುಮಾರ್ ಲಿಂಗದಳ್ಳಿ, ನೂತನ ನಿರ್ದೇಶಕರಾದ ರಾಚಪ್ಪ ವಿ. ಪಟ್ಟಣಶೆಟ್ಟಿ, ಭೀಮನಗೌಡ ಶ.ನಾಗರಾಳ, ರಾಮನಗೌಡ ಬ.ಬಿರಾದಾರ, ಕಮಲಾಕ್ಷಿ ಶಿವಪತ್ರ ಕರವೀನ, ದರಸಮಾ ಬಿಜನಸಾ ಮುಜಾವರ, ಮಾಳಪ್ಪ ಪ್ರ.ಆಲ್ಯಾಳ, ಅಂಬರೇಶ ಸಂ.ಪಟ್ಟಣಶೆಟ್ಟಿ, ಶಂಕರ ಚ.ಚೌವಾಣ, ಈರಯ್ಯಶಿ.ಸ್ಥಾವರ ಮಠ ಹಾಗೂ ಗ್ರಾಮದ ಗಣ್ಯರು ಹಿರಿಯರು ಇದ್ದರು.