ಫಲಿಸದ ಚಿಕಿತ್ಸೆ ಬೈಕ್ ಸವಾರ ಸಾವು

ಫಲಿಸದ ಚಿಕಿತ್ಸೆ ಬೈಕ್ ಸವಾರ ಸಾವು  Bike rider dies after treatment fails


ತಾಳಿಕೋಟೆ  22: ತಾಲ್ಲೂಕಿನ ಗಡಿಸೋಮನಾಳ ಮತ್ತು ಗೋಟಖಂಡ್ಕಿ ಮಧ್ಯೆ ಇರುವ ಇಂದಿರಾ ಗಾಂಧಿ ಮೊರಾರ್ಜಿ ಶಾಲೆ ಬಳಿ ಎರಡು ಬೈ ಕ್ಗಳ ಮಧ್ಯೆ ಬುಧವಾರ ಸಂಜೆ ನಡೆದ ಅಪಘಾತದಲ್ಲಿ ಬೈಕ್ನ ಪೆಟ್ರೋಲ್ ಮೈಮೇಲೆ ಸಿಡಿದು ಬೆಂಕಿಯಿಂದ ತೀವ್ರ ಗಾಯಗಳಾಗಿದ್ದ ಅಸ್ಕಿ ಗ್ರಾಮದ ರಮೇಶ ಮಾನಪ್ಪ ಬಡಿಗೇರ(ಹೆರುಂಡಿ)(38) ಎಂಬ ಯುವಕ ನಿಧನರಾದರು. ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ವಿಜಯಪುರ ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದರೆಂದು ಆಸ್ಪತ್ರೆ ಮೂಲಗಳು ತಿಳಿಸಿವೆ.