ಬಿಹಾರ ಫಲಿತಾಂಶ:ಬಿಜೆಪಿ ಕಾರ್ಯಕರ್ತರ ವಿಜಯೋತ್ಸವ
Bihar results: BJP workers celebrate victory
ತಾಳಿಕೋಟಿ 16: ಬಿಹಾರ ವಿಧಾನ ಸಭೆಗೆ ನೆಡದ ಚುನಾವಣೆಯಲ್ಲಿ ಎನ್ ಡಿ ಎ ಮಿತ್ರ ಕೂಟವು ಅಭೂತಪೂರ್ವ ಯಶಸ್ಸು ಸಾಧಿಸಿದ ಹಿನ್ನೆಲೆಯಲ್ಲಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಪಟ್ಟಣದಲ್ಲಿ ವಿಜಯೋತ್ಸವ ಆಚರಿಸಿ ಸಂಭ್ರಮಿಸಿದರು. ಶುಕ್ರವಾರ ಚುನಾವಣಾ ಫಲಿತಾಂಶ ಹೊರ ಬೀಳುತ್ತಿದ್ದಂತೆಯೇ ಬಿಜೆಪಿಯ ನೂರಾರು ಕಾರ್ಯಕರ್ತರು ಪಟ್ಟಣದ ಶಿವಾಜಿ ವೃತ್ತದಲ್ಲಿ ಜಮಾಯಿಸಿ ಪಟಾಕಿ ಸಿಡಿಸಿ,ಸಿಹಿ ಹಂಚಿ, ಭಾರತ ಮಾತೆ,ಪ್ರಧಾನಿ ನರೇಂದ್ರ ಮೋದಿ ಹಾಗೂ ನೀತೀಶಕುಮಾರ ಅವರ ಪರ ಘೋಷಣೆಗಳನ್ನು ಕೂಗಿ ವಿಜಯೋತ್ಸವ ಆಚರಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ (ಕೂಚಬಾಳ) ಮಾತನಾಡಿ ಬಿಹಾರದಲ್ಲಿ ನಮ್ಮ ಪಕ್ಷವು ಮಿತ್ರ ಪಕ್ಷದೊಂದಿಗೆ ಸೇರಿ ದಾಖಲೆಯ ಗೆಲುವು ಸಾಧಿಸಿದೆ ಇದಕ್ಕೆ ದೇಶದಲ್ಲಿ 11 ವರ್ಷಗಳಿಂದ ಆಡಳಿತ ನಡೆಸುತ್ತಿರುವ ಸಮರ್ಥ ಪ್ರಧಾನಿಗಳಾದ ನರೇಂದ್ರ ಮೋದಿಜಿ ಅವರ ಅಭಿವೃದ್ಧಿ ಕಾರ್ಯಗಳು ಹಾಗೂ ಬಿಹಾರದಲ್ಲಿ ನೀತೀಶಕುಮಾರ್ ಅವರು ನಡೆಸಿದ ಜನಪರ ಆಡಳಿತವನ್ನು ಮೆಚ್ಚಿ ರಾಜ್ಯದ ಜನರು ಅವರಿಗೆ ಈ ಗೆಲವು ತಂದುಕೊಟ್ಟಿದ್ದಾರೆ ಅಲ್ಲಿಯ ಮತದಾರ ಬಾಂಧವರಿಗೆ ನಾನು ಅಭಿನಂದಿಸುತ್ತೇನೆ.
ಈ ಫಲಿತಾಂಶದ ಪ್ರಭಾವ ರಾಜ್ಯದಲ್ಲಿ 2028 ರಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆ ಮೇಲೆ ಬೀಳಲಿದೆ ಎಂದು ಅವರು ಹೇಳಿದರು. ಇದೇ ಸಂದರ್ಭದಲ್ಲಿ ದಿಲ್ಲಿಯ ಕೆಂಪುಕೋಟೆ ಹತ್ತಿರ ಇತ್ತೀಚಿಗೆ ನಡೆದ ಬಾಂಬ್ ಸ್ಫೋಟದಲ್ಲಿ ಮಡಿದವರಿಗೆ ಹಾಗೂ ಶುಕ್ರವಾರ ನಿಧನರಾದ ಪದ್ಮಶ್ರೀ ಪ್ರಶಸ್ತಿ ವಿಜೇತೆ ಸಾಲುಮರದ ತಿಮ್ಮಕ್ಕನವರಿಗೆ ಒಂದು ನಿಮಿಷದ ಮೌನ ಆಚರಿಸುವುದದೊಂದಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ವಿಜಯೋತ್ಸವದಲ್ಲಿ ಪಕ್ಷದ ಮುಖಂಡರಾದ ಕಾಶಿನಾಥ ಮುರಾಳ,ಶಶಿಧರ ಡಿಸಲೆ, ಮಂಜುನಾಥ ಶೆಟ್ಟಿ, ವಕೀಲ ಗಂಗಾಧರ ಕಸ್ತೂರಿ, ರಾಮು ಜಗತಾಪ, ಸುರೇಶ ಹಜೇರಿ, ರಾಘವೇಂದ್ರ ಚೌಹಾಣ, ಮುದುಕಪ್ಪ ಬಡಿಗೇರ, ನಿಂಗಣ್ಣ ಕುಂಟೋಜಿ, ಈಶ್ವರ ಹೂಗಾರ, ರಾಘು ಮಾನೆ, ವಿಠ್ಠಲ್ ಮೋಹಿತೆ, ರಾಜು ಅಲ್ಲಾಪೂರ, ರವಿ ಕಟ್ಟಿಮನಿ,ಉದಯ ಸೋನಾರ ಮತ್ತಿತರರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 