ಬಿಜೆಪಿಗೆ ಬಿಗ್ ಶಾಕ್‌: ಕಾಂಗ್ರೆಸ್ ಸೇರಿದ ಮುನವಳ್ಳಿಯ ಹಿರಿಯ ನಾಯಕ ದುಂಡಪ್ಪ ಬುರ್ಜಿ

ಬಿಜೆಪಿಗೆ ಬಿಗ್ ಶಾಕ್‌: ಕಾಂಗ್ರೆಸ್ ಸೇರಿದ ಮುನವಳ್ಳಿಯ ಹಿರಿಯ ನಾಯಕ ದುಂಡಪ್ಪ ಬುರ್ಜಿ Big shock for BJP: Senior Munavalli leader Dundappa Burji joins Congress

ಲೋಕದರ್ಶನ ವರದಿ 

ಸವದತ್ತಿ  16: ತಾಲೂಕಿನ ಮುನವಳ್ಳಿ ಭಾಗದಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಭಾರಿ ಹಿನ್ನಡೆಯಾಗಿದ್ದು, ಹಿರಿಯ ರಾಜಕಾರಣಿ ಹಾಗೂ ಸಂಘಟನಾ ಚತುರ ದುಂಡಪ್ಪ ಬುರ್ಜಿ ಅವರು ಬಿಜೆಪಿ ತೊರೆದು ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರೆ​‍್ಡಯಾಗಿದ್ದಾರೆ. ಸ್ಥಳೀಯ ಶಾಸಕ ವಿಶ್ವಾಸ ವೈದ್ಯ ಅವರ ನಿವಾಸದಲ್ಲಿ ನಡೆದ ಈ ಸೇರೆ​‍್ಡ ಕಾರ್ಯಕ್ರಮವು ಅವರು ಮಾತನಾಡಿ ಮುನವಳ್ಳಿ ಭಾಗದ ರಾಜಕೀಯ ಸಮೀಕರಣಗಳಲ್ಲಿ ಮಹತ್ತರ ಬದಲಾವಣೆಗೆ ನಾಂದಿ ಹಾಡಿದೆ. ಅನುಭವಿ ನಾಯಕತ್ವ ದುಂಡಪ್ಪ ಬುರ್ಜಿ ಅವರು ಈ ಹಿಂದೆ ಮುನವಳ್ಳಿ ಪುರಸಭೆಯ ಮಾಜಿ ಉಪಾಧ್ಯಕ್ಷರಾಗಿ ಹಾಗೂ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಸುದೀರ್ಘ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ.

ಪಕ್ಷಕ್ಕೆ ಆನೆಬಲ ಇವರ ಸೇರೆ​‍್ಡಯಿಂದ ಮುನವಳ್ಳಿ ಮತ್ತು ಸುತ್ತಮುತ್ತಲಿನ ಭಾಗಗಳಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನೆಗೆ ಮತ್ತಷ್ಟು ಶಕ್ತಿ ಬಂದಂತಾಗಿದೆ.ಅಭಿವೃದ್ಧಿಯ ಮಂತ್ರ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗಾಗಿ ಒಗ್ಗಟ್ಟಿನಿಂದ ಶ್ರಮಿಸುವ ಸಂಕಲ್ಪವನ್ನು ಈ ಸಂದರ್ಭದಲ್ಲಿ ಮಾಡಲಾಯಿತು.ದುಂಡಪ್ಪ ಬುರ್ಜಿ ಅವರ ಸುದೀರ್ಘ ರಾಜಕೀಯ ಅನುಭವ ಮತ್ತು ಜನಸೇವೆಯ ಮನೋಭಾವವು ನಮ್ಮ ಪಕ್ಷಕ್ಕೆ ದೊಡ್ಡ ಬಲ ತಂದಿದೆ. ಮುಂದಿನ ದಿನಗಳಲ್ಲಿ ತಾಲೂಕಿನ ಸಮಗ್ರ ಅಭಿವೃದ್ಧಿಗಾಗಿ ನಾವೆಲ್ಲರೂ ಕೈಜೋಡಿಸಿ ಕೆಲಸ ಮಾಡೋಣ ಎಂದರು. ಈ ವೇಳೆ ಚಂದ್ರು ಜಂಬ್ರಿ, ಮಲ್ಲು ಜಕಾತಿ, ಮಂಜುನಾಥ ಪಾಚಾಂಗಿ, ಸಿ.ಬಿ.ಬಾಳಿ, ಪ್ರವೀಣ್ ರಾಮಪ್ಪನವರ, ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.