ಅಭಿವೃದ್ದಿ ಕಾಮಗಾರಿಗೆ ಶಾಸಕ ವಿಶ್ವಾಸ ವೈದ್ಯ ಭೂಮಿ ಪೂಜೆ
ಯರಗಟ್ಟಿ, 02; ಕ್ಷೇತ್ರದ ಪ್ರತಿಯೊಂದು ಹಳ್ಳಿಯ ಅಭಿವೃದ್ಧಿಗೆ ಬದ್ಧನಾಗಿದ್ದು, ಅಭಿವೃದ್ದಿಗೆ ಪ್ರತಿಯೊಬ್ಬರ ಸಹಕಾರ ಅಗತ್ಯ ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು. ಸಮೀಪದ ಮಬನೂರ ಗ್ರಾಮದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಯರಗಟ್ಟಿ ಯಾತ ನೀರಾವರಿ ಯೋಜನೆಯ ಇನ್‌ಟೆಕ್ ಮೇಲಮಟ್ಟ ಹಾಗೂ ಕೇಳ ಮಟ್ಟದ ಕಾಲುವೆ ಆಧುನಿಕರಣ ಅಭಿವೃದ್ದಿಗೆ 4.95 ಕೋಟಿ ರೂ ವೆಚ್ಚದ ಕಾಮಗಾರಿಗೆ ಭೂಮಿ ಪೂಜೆ ನೇರವೆರಿಸಿ ಮಾತನಾಡಿದ ಅವರು, ಗುತ್ತಿಗೆದಾರರಿಗೆ ಸಹಕಾರ ನೀಡಿ ಗುಣಮಟ್ಟದ ಕಾಮಗಾರಿ ಮಾಡಿಸಿಕೊಳ್ಳಬೇಕು ಎಂದು ಹೇಳಿದರು.
ಜಿಪಂ ಮಾಜಿ ಸದಸ್ಯ ಫಕೀರ್ಪ ಹದ್ದನ್ನವರ ಮಾತನಾಡಿ, ಗ್ರಾಮದ ಅಭಿವೃದ್ಧಿಗೆ ಸರಕಾರದಿಂದ ಹಲವಾರು ಯೋಜನೆಗಳು ಬಂದಿದ್ದು ಅದರ ಸದುಪಯೋಗವನ್ನು ಸಾರ್ವಜನಿಕರು ಮಾಡಿಕೊಳ್ಳಬೇಕು ಎಂದು ಹೇಳಿದರು.ಗ್ರಾಪಂ ಅಧ್ಯಕ್ಷೆ ಶಾರವ್ವ ನರಿ, ಸದಸ್ಯ ಪಡೆಪ್ಪ ನರಿ, ಕಾಂಗ್ರೆಸ ಮುಖಂಡ ಆರ್.ಕೆ.ಪಟಾತ, ಯರಗಟ್ಟಿ ಎಪಿಎಂಸಿ ಸದಸ್ಯ ಸಿದಾರೂಢ ಬೀಲಕಂಚಿ, ಹನಮಂತಗೌಡ ಪಾಟೀಲ, ಯಲ್ಲಪ್ಪ ನರಿ, ಲಕ್ಷ್ಮಣ ಹೊಟ್ಟಿನವರ, ಸಿದ್ದಪ್ಪ ಮುರಗೋಡ, ಶಟ್ಟೆಪ್ಪ ಹಡಪದ, ಗೋಪಾಲ ಮೇಟಿ, ವಕೀಲ ಯಲ್ಲಪ್ಪ ನೆರಿ, ಮಹಾದೇವ ಮುರಗೋಡ, ಈಶ್ವರ ಮೇಟಿ, ಫಕೀರ್ಪ ಹಟ್ಟಿ, ಫಕಿರ್ಪ ಹೊನಕುಪ್ಪಿ, ಪಿಡಿಒ ರಾಜೇಸಾಬ ಚಿಪ್ಪಲಕಟ್ಟಿ ಸೇರಿದಂತೆ ಇತರರು ಇದ್ದರು.