ಅಹಿಂದ ತಾಲೂಕಾಧ್ಯಕ್ಷರಾಗಿ ಭೀರು ಹಳ್ಳಿ ನೇಮಕ: ಗುರುನಾಥ ಹರ್ಷ
Bhiru Halli appointed as Ahinda Taluka President: Gurunath Harsha
ದೇವರಹಿಪ್ಪರಗಿ 21: ಅಹಿಂದ ಒಕ್ಕೂಟ ಬೆಂಗಳೂರು ಅವರ ಆದೇಶದ ಮೇರೆಗೆ ತಾಲ್ಲೂಕು ಅಧ್ಯಕ್ಷರಾಗಿ ಭೀರು ಹಳ್ಳಿ ನೇಮಕ.ತಾಲ್ಲೂಕು ಕುರುಬರ ಸಂಘದ ಅಧ್ಯಕ್ಷರಾದ ಗುರುನಾಥ ಮುರಡಿ ಹರ್ಷ ವ್ಯಕ್ತಪಡಿಸಿದ್ದಾರೆ.
ತಾಲೂಕಿನ ಪಡಗಾನೂರ ಗ್ರಾಮದ ತಮ್ಮ ಸ್ವಗೃಹದಲ್ಲಿ ನೂತನ ಅಹಿಂದ ತಾಲ್ಲೂಕು ಅಧ್ಯಕ್ಷರಾಗಿ ಆಯ್ಕೆಯಾದ ಭೀರು ಹಳ್ಳಿ ಅವರನ್ನು ತಾಲೂಕು ಕುರುಬರ ಸಂಘದ ಪದಾಧಿಕಾರಿಗಳು ಹಾಗೂ ಗ್ರಾಮದ ಮುಖಂಡರ ನೇತೃತ್ವದಲ್ಲಿ ಸನ್ಮಾನಿಸಿ ಗೌರವಿಸಿ ಮಾತನಾಡಿದ ಅವರು,ಅಹಿಂದ ತತ್ವವನ್ನು ಅನುಸರಿಸಿ ನೊಂದವರಿಗೆ ಸಾಮಾಜಿಕ ಶೈಕ್ಷಣಕ ಆರ್ಥಿಕ ಸಮಾನತೆ ಸಿಗುವಂತೆ ಮಾಡುವ ಉದ್ದೇಶದಿಂದ ಈ ಸಂಘಟನೆ ಪಕ್ಷಾತೀತವಾಗಿ ಕಾರ್ಯನಿರ್ವಹಿಸುತ್ತಿದೆ.
ಅಸ್ಪೃಶ್ಯತೆಯಿಂದ ಬಳಲುತ್ತಿರುವ ಜನರಿಗೆ ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಅಭಿವೃದ್ಧಿ ಜೊತೆಗೆ ಸಮಾಜದಲ್ಲಿ ತಮ್ಮ ಹಕ್ಕನ್ನು ಪ್ರಶ್ನಿಸಿ ಪಡೆಯುವುದನ್ನು ಸಂಘಟನೆಯ ಅಹಿಂದ ಸಿದ್ಧಾಂತ ತಿಳಿಸುತ್ತದೆ. ಅಂಬೇಡ್ಕರ್, ಬಸವಣ್ಣ, ಕನಕದಾಸರ ಸಿದ್ದಾಂತಗಳನ್ನು ಒಳಗೊಂಡು ಸಂಘಟನೆ ರಾಜ್ಯಾದ್ಯಾಂತ ಕಾರ್ಯನಿರ್ವಹಿಸುತ್ತಿದೆ. ಅಹಿಂದ ವರ್ಗಗಳ, ತಳ ಮಟ್ಟದ ಜನರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಪ್ರಯತ್ನ ನೂತನ ಅಹಿಂದ ತಾಲೂಕು ಅಧ್ಯಕ್ಷ ಭೀರು ಹಳ್ಳಿ ಅವರು ಶ್ರಮ ವಹಿಸಬೇಕು ಎಂದು ಶುಭ ಹಾರೈಸಿದರು. ಮುಖಂಡರುಗಳಾದ ಯಲ್ಲಪ್ಪ ನಿಡಗುಂದಿ, ಸಾಯಿಬಣ್ಣ ಮುರಾಳ, ಮಾಳಪ್ಪ ಹಳ್ಳಿ, ಚಂದ್ರಾಮ ಪೂಜಾರಿ, ಅಮ್ಮೋಗಿ ಕಗ್ಗೋಡ, ರಮೇಶ ಮುರಾಳ, ಭೀಮು ಬಿಸನಾಳ ಸೇರಿದಂತೆ ಹಲವಾರು ಜನ ಮುಖಂಡರು ಉಪಸ್ಥಿತರಿದ್ದರು.
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್ 