ಮನೆಗೆ ನುಗ್ಗಿದ ಭೀಮಾನದಿಯ ನೀರು: ಹಳೆ ತಾವರಖೇಡಕ್ಕೆ ತಹಶೀಲ್ದಾರ್ ಭೇಟಿ
Bhima River water enters house: Tahsildar visits Old Tavarkheda
ಆಲಮೇಲ, 25 ; ಭೀಮಾ ನದಿಯಲ್ಲಿ ಪ್ರವಾಹ ಮತ್ತಷ್ಟು ಹೆಚ್ಚಳವಾಗಿದ್ದು. ಆಲಮೇಲ ತಾಲೂಕಿನ ಹಳೆ ತಾವರಖೇಡ ಗ್ರಾಮದ ಬುದುವಾರ ಮಧ್ಯರಾತ್ರಿ ನುಗ್ಗಿದ ಭೀಮಾನದಿಯ ನೀರು. ನಿಂಗಪ್ಪ ನಾವಿ ಎಂಬುವರ ಮನೆಗೆ ನದಿಯ ನೀರು ಸುತ್ತುವರೆದಿದ್ದು ನಡುಗಡ್ಡೇವಾಗಿದೆ. ಮಹಾರಾಷ್ಟ್ರ ಮತ್ತು ಕರ್ನಾಟಕ ಭೀಮಾ ನದಿಯ ಉಪನದಿ ಹಾಗೂ ಭೀಮಾ ನದಿಗೆ ಸೇರುವ ಹಳ್ಳಗಳು ತುಂಬಿ ಹರಿಯುತ್ತಿರುವುದರಿಂದ ಪ್ರವಾಹ ಪರಿಸ್ಥಿತಿ ಮತ್ತಷ್ಟು ಹೆಚ್ಚಿಸಿದೆ. ಹಳೆ ತಾವರಖೇಡದ ಜನರು ರಾತ್ರಿ ವೇಳೆ ತಮ್ಮ ಸಾಮಾನುಗಳನ್ನ ಸಂಗ್ರಹಿಸಿಕೊಂಡು. ಕೆಲವರು ಮಕ್ಕಳು ಮರಿ ಸಮೇತ ಸುರಕ್ಷಿತವಾದ ಸ್ಥಳಕ್ಕೆ ಬಂದರು.ಆಲಮೇಲ ತಾಲೂಕಿನ ಹಳೆ ತಾವರಖೇಡ.ಬ್ಯಾಡಗಿಯಳ. ಕಡ್ಲೆವಾಡ ಶಂಬೇವಾಡ ಕುಮಸಿಗಿ ನೀರು ಸುತ್ತುವರಿದಿದ್ದು ಜಲ ವಸತಿ ಸಮೀಪ ನೀರು ಆಗಮಿಸುತ್ತಿದೆ ಜನರನ್ನು ಎಚ್ಚರದಲ್ಲಿರುವಂತೆ ಯಮನೂರು ಗೊಂದಳಿ ಗ್ರಾಮ ಲೆಕ್ಕಾಧಿಕಾರಿ ಕಡಣಿ ಹೇಳಿದರು.
ಹಳೆ ತಾವರಖೇಡ ಗ್ರಾಮಕ್ಕೆ ಭೇಟಿ ನೀಡಿ ಇಲ್ಲಿಯವರೆಗೆ ನೀರು ಬಂದಿರುವುದು ಇನ್ನೂ ಮುಂದೆ ನೀರಿನ ಪ್ರಮಾಣ ಕಡಿಮೆಯಾಗುತ್ತಿದೆ. ಪ್ರವಾಹ ಒಳಗಾದ ಜನರಿಗೆ ತಿಳಿಸಿದರು. ಒಂದು ವೇಳೆ ರಾತ್ರಿ ಮಳೆಯಾದರೆ ನೀರಿನ ಪ್ರಮಾಣ ಹೆಚ್ಚಾಗಬಹುದು.ಆತಂಕ ಪಡುವ ಅವಶ್ಯಕತೆ ಇಲ್ಲ ಸುರಕ್ಷಿತವಾದ ಗಂಜಿ ಕೇಂದ್ರಕ್ಕೆ ಹೋಗಿ ಎಂದರು.
ಧನಪಾಲ ಶೆಟ್ಟಿ
ತಾಲೂಕ ದಂಡಾಧಿಕಾರಿ ಆಲಮೇಲ
ಇದೇ ವೇಳೆ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶರಣಪ್ಪ ನಾಟಿಕರ. ಸರ್ಕಲ್ ಎ ಎಂ ಅತ್ತರ. ರಾಜು ವಡ್ಡರ. ಭಾಗಪ್ಪ ನಾವಿ. ಯಲ್ಲಪ್ಪ ಭಗೊಂಡಿ. ರೇವಣಸಿದ್ದ ಭಗೊಂಡಿ. ವಿಠ್ಠಲ ಭಗೊಂಡಿ. ರಾಜು ಬಿರಾದಾರ. ರಾಮಚಂದ್ರ ಬಿರಾದಾರ.ನಾಗಪ್ಪ ಜಮಾದಾರ ಸದಾಶಿವ ಸಿಂಗೆ.ಶ್ರೀಶೈಲ ದೊಡ್ಡಮನಿ
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 