ಮಕ್ಕಳನ್ನು ಸಂಸ್ಕಾರವಂತರನ್ನಾಗಿ ಮಾಡುವುದು ಭರತನಾಟ್ಯ: ವಿದ್ವಾನ ಪ್ರೊ. ಕೆ. ರಾಮಮೂರ್ತಿರಾವ್

ಮಕ್ಕಳನ್ನು ಸಂಸ್ಕಾರವಂತರನ್ನಾಗಿ ಮಾಡುವುದು ಭರತನಾಟ್ಯ: ವಿದ್ವಾನ ಪ್ರೊ. ಕೆ. ರಾಮಮೂರ್ತಿರಾವ್  Bharatanatyam making children cultured: Vidwan Prof. K. Ramamurthy Rao

ಧಾರವಾಡ 07: ಸಾಕೇತ ಸ್ಕೂಲ್ ಆಫ್ ಡ್ಯಾನ್ಸ, ಧಾರವಾಡ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಇವರ ಆಶ್ರಯದಲ್ಲಿ ಇತ್ತಿಚೇಗೆ ಅಣ್ಣಾಜಿರಾವ್ ಶಿರೂರ ರಂಗಮಂದಿರದಲ್ಲಿ ಸಾಕೇತ ಉತ್ಸವ ಹಾಗೂ ಗುರುಪೂರ್ಣಿಮ ಕಾರ್ಯಕ್ರಮ ದಿ.  05ರಂದು ಸಾಯಂಕಾಲ 6.00 ಘಂಟೆಗೆ ನಡೆದ ಸಾಕೆೇತ ನೃತ್ಯ ಶಾಲೆಯ ಉದಯೋನ್ಮುಖ ಕಲಾವಿದರಿಂದ ಭರತನಾಟ್ಯ ಯಶ್ಸಸ್ವಿಗೊಂಡಿತು. 

ಹಿರಿಯ ನೃತ್ಯ ಗುರು ವಿದ್ವಾನ ಪ್ರೊ. ಕೆ. ರಾಮಮೂರ್ತಿರಾವ್ ಮೈಸೂರ ಇವರು ಸಾಕೇತ ಉತ್ಸವ ಹಾಗೂ ಗುರುಪೂರ್ಣಿಮ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿ ಭರತನಾಟ್ಯದಲ್ಲಿ ಎಲ್ಲ ಪ್ರಕಾರಗಳಲ್ಲಿ ಶ್ರೇಷ್ಠ ಪ್ರಕಾರವಾಗಿದ್ದು ಇದರಲ್ಲಿ ಆರೋಗ್ಯದ ಜೊತೆಗೆ ಸದೃಢ ಮನಸ್ಸು ಏಕಾಗ್ರತೆ ಹಾಗು ಮಕ್ಕಳು ಎಲ್ಲ ವಿಧಗಳಲ್ಲಿ ಶ್ರೇಯಸ್ಸನ್ನು ಪಡೆಯುವದರ ಜೊತೆಗೆ ಮಕ್ಕಳನ್ನು ಸಂಸ್ಕಾರವಂತರನ್ನಾಗಿ ಮಾಡುತ್ತದೆ, ನಾನು ಅನೇಕ ವರ್ಷಗಳಿಂದ ಸಾಕೇತ ಸ್ಕೂಲ್ ಆಫ್ ಡ್ಯಾನ್ಸನ ಒಬ್ಬ ಸದಸ್ಯನಾಗಿ ಗಮನಿಸುತ್ತಾ ಬಂದಿದ್ದೇನೆ. ವಿದೂಷಿ ಸೀಮಾ ಕುಲಕರ್ಣಿರವರು ನೃತ್ಯ ಕಲಿಸುವಲ್ಲಿ ನಿಷ್ಠೆ ಗುರುಗಳ ಮೇಲೆ ಇರುವ ಪ್ರೀತಿ ಅವರಿಗೆ ನೀಡುವ ಗೌರವ ಅದೇಲ್ಲವನ್ನು ಯುವ ನೃತ್ಯಪಟುಗಳಿಗೆ ಶೃದ್ಧೆಯಿಂದ ಕಲಿಸುತ್ತಿದ್ದು ಧಾರವಾಡದಲ್ಲಿ ಅನೇಕ ನೃತ್ಯ ಪ್ರತಿಭೆಗಳನ್ನು ಹುಟ್ಟು ಹಾಕಿದ್ದಾರೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಯುವ ಪೀಳಿಗೆಗಳು ಇಂತಂಹ ಸಾಂಸ್ಕೃತಿಕ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಬೇಕು ಮನಸ್ಸನ್ನು ಮುದಗೊಳಿಸುವದರ ಜೊತೆಗೆ ಹಲವಾರು ಸಮಸ್ಯೆಗಳಿಂದ ದೂರವಿಡಲು ಇದು ಸಹಕಾರಿಯಾಗುತ್ತದೆ ಹಾಗೂ ಪ್ರತಿಯೊಬ್ಬರು ತಮ್ಮ ಗುರುಗಳನ್ನು ಪೂಜಿಸುವುದರ ಮೂಲಕ ಗುರುಶಿಷ್ಯ ನೀಡುವ ಪರಂಪರೆ ಇದಾಗಿದ್ದು ವೈಶಿಷ್ಠಪೂರ್ಣವೆಂದು ಮಾತನಾಡಿದರು. 

ಇನ್ನೊಬ್ಬ ಅತಿಥಿಗಳಾಗಿ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಮಾತನಾಡಿ ಸಾಂಸ್ಕೃತಿ ಕ್ಷೇತ್ರದಲ್ಲಿ ವಿದ್ಯಾರ್ಥಿಗಳ ಸರ್ವತೊಮುಖ ಬೆಳವಣಿಗೆ ನೃತ್ಯ ಒಂದು ಪ್ರಧಾನ ಅಂಗವಾಗಿ ಸಾಧ್ಯವಾಗುವುದಲ್ಲದೆ ಮುಂದೆ ಮಕ್ಕಳು ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಲು ಇದು ಸಹಾಯಕವಾಗುತ್ತದೆ. ಇಂದು ನಾವು ಹಲವಾರು ಸಂಘಸಂಸ್ಥೆಗಳಿಗೆ ಅನುದಾನವನ್ನು ನೀಡಿದ್ದು ಅವುಗಳು ಸಮರ​‍್ಕವಾಗಿ ಅನುದಾನವನ್ನು ಬಳಸಿಕೊಂಡು ಕಾರ್ಯಕ್ರಮಗಳನ್ನು ನೀಡಬೇಕು ಭರತನಾಟ್ಯದಲ್ಲಿ ಮಕ್ಕಳು ತಮ್ಮ ಪ್ರತಿಭೆ ತಕ್ಕಂತೆ ಶಿಕ್ಷಣವನ್ನು ಪಡೆಯುತ್ತಿದ್ದು ಅದನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿ ಉಜ್ವಲ ಭವಿಷ್ಯವನ್ನು ಪಡೆಯಬೇಕಾದುದು ಮಕ್ಕಳ ಕರ್ತವ್ಯವಾಗಿದೆ ಹಾಗೂ ಪಾಲಕರು ಸಹ ಮಕ್ಕಳ ಬೆಳವಣಿಗೆ ದೃಷ್ಠಿಯಿಂದ ಅವರನ್ನು ಸರಿಯಾದ ಮಾರ್ಗದಲ್ಲಿ ಸಾಗುವಂತೆ ಸಲಹೆಗಳನ್ನು ನೀಡುವುದರ ಮೂಲಕ ಅವರನ್ನು ಬೆಳೆಸಬೇಕು ಎಂದರು.  

ಸಾಕೇತ ಸ್ಕೂಲ್ ಆಫ್ ಡ್ಯಾನ್ಸನ ಅಧ್ಯಕ್ಷರಾದ ಡಾ. ಕಿರಣ ಕುಲಕರ್ಣಿ ತಮ್ಮ ಅಧ್ಯಕ್ಷಿಯ ನುಡಿಗಳನ್ನಾಡುತ್ತಾ ಸಾಕೇತ ಸ್ಕೂಲ್ ಆಫ್ ಡ್ಯಾನ್ಸ ಇದು  ಯುವ ಕಲಾವಿದರ ವೇದಿಕೆಯಾಗಿದ್ದು ಇಲ್ಲಿ ಹಲವಾರು ಸಾಂಸ್ಕೃತಿಕ ಮರೆಗು ನೀಡುವಂತಹ ಕಲೆಯನ್ನು ಬಿಂಬಿಸುವಂತಹ ಸಂಸ್ಥೆಯಾಗಿದೆ ಹಾಗೂ ಇಲ್ಲಿ ಕಲಿತ ಹಲವಾರು ವಿದ್ಯಾರ್ಥಿಗಳು ತಮ್ಮ ವ್ಯಕ್ತಿತ್ವವನ್ನು ತಾವೇ ರೂಪಿಸಿಕೊಂಡು ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳೆಯುತ್ತಿದ್ದಾರೆ ಎಂದರಲ್ಲದೆ ನಮ್ಮ ಸಂಸ್ಕೃತಿಯನ್ನು ನಾವು ಬೆಳೆಸಬೇಕು. ಪಾಲಕರು ಸಹ ತಮ್ಮ ಮಕ್ಕಳ ಜೊತೆಗೂಡಿ ನೃತ್ಯ ಕಲಿತರೆ ಮಾನಸಿಕವಾಗಿ ದೈಹಿಕವಾಗಿ ಆರೋಗ್ಯದ ಜೊತೆಗೆ ಸದೃಡ ಮನಸ್ಸು ಏಕಾಗ್ರತೆ ಭರತನಾಟ್ಯದಲ್ಲಿ ಕಲಿಯಬಹುದು ಜೊತೆಗೆ ತಮ್ಮ ಮಕ್ಕಳಿಗೆ ಸೂಕ್ತ ಸಲಹೆ ನೀಡುವುದರ ಮೂಲಕ ಕಲೆಯನ್ನು ಬೆಳೆಸಬೇಕು ಎಂದರು. 

ಹಿನ್ನಲೆಯಲ್ಲಿ ಹಾಡುಗಾರಿಕೆ ವದೂಷಿ ವಾಣಿ ಉಡುಪಿ, ನಟುವಾಗಂ ವಿದೂಷಿ ಸೀಮಾ ಕುಲಕರ್ಣಿ, ಮೃದಗಂ ಹಾಗೂ ರಿದಂ ಪ್ಯಾಡ್ ನಲ್ಲಿ ವಿದ್ವಾನ ಡಾ. ಗೋಪಿಕೃಷ್ಣ ನಬೊಂದ್ರಿ, ಧಾರವಾಡ, ವಾಯೋಲೀನ್ ಪಂಡಿತ ಶಂಕರ ಕಬಾಡಿ ಸಾಧಿ ನೀಡಿದರು, ಪ್ರಸಾದನದಲ್ಲಿ ಸ್ನೇಹಾ ಹಾಗೂ ಸಂತೋಷ ಮಹಾಲೆ. ವಸ್ತ್ರವಿನ್ಯಾಸದಲ್ಲಿ ಮುಕ್ತಾ ವೇರ್ಣೇಕರ, ರವಿ ಕುಲಕರ್ಣಿ ಕಾರ್ಯಕ್ರಮ ನಿರೂಪಿಸಿದರು ವಂದನಾರೆ​‍್ಣ ಡಾ. ಕಾತ್ಯಾಯನಿ ಪಾಟೀಲ, ಸ್ವಾಗತವನ್ನು ರಾಜೇಶ್ವರಿ ಜಗ್ಗಲ ನೇರೆವೆರಿಸಿಕೊಟ್ಟರು. ಬಸವರಾಜ ಅರಳಿಮಠ ಛಾಯಾಗ್ರಹಣ ಮತ್ತು ಉತ್ತಮ ವಿನ್ಯಾಸದ ಕಾರ್ಡನ್ನು ಪ್ರೀಂಟ್ ಪಾಯಿಂಟ್ ಧಾರವಾಡ. ಸೌಂಡ ಡಾ.ನಾಗಲಿಂಗ ಮುರಗಿರವರದ್ದಾಗಿತ್ತು. 

ವಿದ್ವಾನ ರಾಮಮೂರ್ತಿರಾವ್ ದಂಪತಿಗಳನ್ನು ಸಾಕೇತ ಸ್ಕೂಲ್ ಆಫ್ ಡ್ಯಾನ್ಸ ವತಿಯಿಂದ ಗುರುವಂದನೆ ನೀಡಿ ಗೌರವಿಸಲಾಯಿತು ಹಾವೇರಿಯ ವಿದೂಷಿ ಮಮತಾ ನಾಡಿಗೇರ, ರಾಜೇಶ್ವರಿ ನಾಯಕ ಶಿರಸಿ ಹಾಗೂ ವಿದೂಷಿ ಅಂಕಿತಾ ರಾವ್ ನೃತ್ಯಗುರುಗಳು ಉಪಸ್ಥಿತರಿದ್ದರು ತಮ್ಮ ಗುರುಗಳಿಗೆ ಗುರುವಂದನೆ ಸಲ್ಲಿಸಿದರು.  

ನಂತರದಲಿ ಸಾಕೇತ ಸ್ಕೂಲ ಆಫ್ ಡ್ಯಾನ್ಸನ ಕಿರಿಯ ಹಿರಿಯ ವಿದ್ಯಾರ್ಥಿಗಳಾದ ಅಶ್ವಿನಿ ಜಗ್ಗಲ್, ಸೃಷ್ಠಿ ಪಾಟೀಲ ಸಾಕ್ಷಿ ಕುಲಕ್ಪರ್ಣಿರವರ ವರ್ಣಂ ನೃತ್ಯ ಆಕರ್ಷಿಣಿಯವಾಗಿತ್ತು, ಕೊನೆಯಲ್ಲಿ ತಿಲ್ಲಾಣ, ಕೊರವಂಜಿ ನೃತ್ಯಗಳು ಎಲ್ಲರ ಮನಸೂರೆಗೊಂಡಿದ್ದು ಕಣ್ಮನ ತಣಿಸಿತು. ಪ್ರತಿಯೊಂದು ನೃತ್ಯವು ಪ್ರೇಕ್ಷಕರ ಚಪ್ಪಾಳೆ ಹಾಗೂ ಮೆಚ್ಚುಗೆಗೆ ಪಾತ್ರವಾಗಿ ಹೊರಹೊಮ್ಮಿದ್ದು ವಿಶೇಷವಾಗಿ ಗಮನಾರ್ಹ ಪ್ರದರ್ಶನ ನೀಡಿದರು. ಇದರ ಹಿಂದೆ ಸಾಕೇತ ಸ್ಕೂಲ್ ಆಫ್ ಡ್ಯಾನ್ಸನ ವಿದೂಷಿ ಸೀಮಾ ಕುಲಕರ್ಣಿರವರ ಪರಿಶ್ರಮ ಸಾರ್ಥಕವೆನಿಸಿದ್ದು ನಿಜವಾಗಿದ್ದು ವಿದ್ಯಾರ್ಥಿಗಳು ಪಾಲಕರ ಪರಿಶ್ರಮವು ಎದ್ದು ಕಾಣುತಿತ್ತು.