ಕಾರವಾರ 9: ಕಾಮರ್ಿಕ ಸಂಘಟನೆಗಳು ಮತ್ತು ಸಿಪಿಐಎಂ ಪಕ್ಷ ನೀಡಿದ್ದ ಭಾರತ ಬಂದ್ ಕರೆಯ ಎರಡನೇ ದಿನ ಕಾಮರ್ಿಕರ ಮೆರವಣಿಗೆ ಮತ್ತು ಧರಣಿಗೆ ಸೀಮಿತವಾಗಿತ್ತು. ಎಂದಿನಂತೆ ಶಾಲಾ ಕಾಲೇಜು ಹಾಗೂ ಸಕರ್ಾರಿ ಕಚೇರಿಗಳು ಕಾರ್ಯ ನಿರ್ವಹಿಸಿದವು.
ಕಾರವಾರ ಬಸ್ ನಿಲ್ದಾಣದಲ್ಲಿ ಬಸ್ ಸಂಚಾರಕ್ಕೆ ತಡೆಯೊಡ್ಡಲು ಯತ್ನಸಿದ ಸಿಐಟಿಯು ಹಾಗೂ ಎಎಸ್ಐ ಮುಖಂಡರಾದ ಯಮುನಾ ಮತ್ತು ಗಣೇಶ್ ರಾಠೋಡ್ ಅವರನ್ನು ಬೆಳಿಗ್ಗೆ 6 -30ರ ಸುಮಾರಿಗೆ ಬಂಧಿಸಿ 12 ಗಂಟೆಗೆ ಬಿಡಲಾಯಿತು. ಕಾರವಾರ ಬಸ್ ನಿಲ್ದಾಣದಲ್ಲಿ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿತ್ತು.
ಬಿಲ್ಟ್ ಸರ್ಕಲ್ನಲ್ಲಿ ಧರಣಿ:
ಅಂಗನವಾಡಿ ಕಾರ್ಯಕತರ್ೆಯರು ಹಾಗೂ ಬಿಸಿಯೂಟದ ಕಾರ್ಯಕತರ್ೆಯರು ನಂತರ ನಗರದ ಬಿಲ್ಟ್ ಸರ್ಕಲ್ ಬಳಿ ಜಮಾಯಿಸಿ, ರಸ್ತೆಯಲ್ಲಿ ಕುಳಿತು ಧರಣಿ ನಡೆಸಿದರು. ರಾಷ್ಟ್ರೀಯ ಹೆದ್ದಾರಿ 66ರಲ್ಲಿ ರಸ್ತೆ ತಡೆ ಮಾಡಲು ಯತ್ನಿಸಿದರಾದರೂ ಪೊಲೀಸರು ಅದಕ್ಕೆ ಅವಕಾಶ ನೀಡಲಿಲ್ಲ.
300 ರಷ್ಟಿದ್ದ ಧರಣಿ ನಿರತ ಕಾಮರ್ಿಕರು, ಅಂಗನವಾಡಿ, ಬಿಸಿಯೂಟದ ಕಾರ್ಯಕತರ್ೆಯರು ಕೇಂದ್ರದ ಬಿಜೆಪಿ ಸಕರ್ಾರದ ವಿರುದ್ಧ ಘೋಷಣೆ ಕೂಗಿದರು. ಜನ ವಿರೋಧಿ ನೀತಿ, ವಾಹನ ಅಪಘಾತದ ಸಂಬಂಧ ರೂಪಿಸಿರುವ ಘೋರ ಕಾಯ್ದೆ ಹಾಗೂ ಪೆಟ್ರೋಲ್ ಮತ್ತು ಡಿಸೇಲ್ ಹಾಗೂ ಗ್ಯಾಸ್ ಸಿಲೆಂಡರ್ ದರ ಏರಿಕೆಯ ವಿರುದ್ಧ ಕೇಂದ್ರ ಸಕರ್ಾರದ ವಿರುದ್ಧ ಧಿಕ್ಕಾರ ಕೂಗಲಾಯಿತು. ಮಧ್ಯಾಹ್ನದವರೆಗೆ ಧರಣಿ ನಡೆಸಿ ನಂತರ ಪ್ರತಿಭಟನೆಯನ್ನು ಮುಕ್ತಾಯಗೊಳಿಸಲಾಯಿತು.
ಬ್ಯಾಂಕ್ ನೌಕರರು ಸಹ ಕೆಲಸ ನಿರ್ವಹಿಸಲಿಲ್ಲ:
ಬಂದ್ ಎರಡನೇ ದಿನವೂ ಎಸ್ಬಿಐ ಹೊರತು ಪಡಿಸಿ ಇನ್ನಿತರೆ ಬ್ಯಾಂಕ್ ನೌಕರರು ಕೆಲಸದಕ್ಕೆ ಭಾಗವಹಿಸಲಿಲ್ಲ. ಹಾಗಾಗಿ ಬ್ಯಾಂಕ್ ವಹಿವಾಟು ಸ್ತಬ್ಧವಾಗಿತ್ತು.
ಸಾರ್ವಜನಿಕರು ಬ್ಯಾಂಕ್ ಬಂದ್ ನಿಂದ ಕಿರಿಕಿರಿ ಅನುಭವಿಸಿದರು. ಉಳಿದಂತೆ ಅಂಗಡಿ ಮುಂಗಟ್ಟು ಎಂದಿನಂತೆ ವ್ಯಾಪಾರ ವಹಿವಾಟು ನಡೆಸಿದವು. ಬಸ್ ಸಂಚಾರ, ಆಟೋ ಸಂಚಾರ, ಟೆಂಪೋ ಸಂಚಾರ ಎಂದಿನಂತೆ ಸಹಜ ಸ್ಥಿತಿಗೆ ಬಂದಿತ್ತು.