ಧಾರವಾಡ : ಇಲ್ಲಿಯ ಕೆಲಗೇರಿ ರಸ್ತೆಯಲ್ಲಿರುವ ಶಿರಡಿ ಸಾಯಿಬಾಬಾ ಸಂಸ್ಥೆಯ ವತಿಯಿಂದ ಸಾಯಿಬಾಬಾ ಮಂದಿರದಲ್ಲಿ ಗುರುಪೂಣರ್ಿಮೆ ನಿಮಿತ್ತ ಹಮ್ಮಿಕೊಂಡಿದ್ದ ಭಜನ ಸಂಧ್ಯಾ ಕಾರ್ಯಕ್ರಮ ಸಾವಿರಾರು ಸಂಗೀತಾಸಕ್ತರ ಮನತಣಿಸುವಲ್ಲಿ ಯಶಸ್ವಿಯಾಯಿತು.
ಅಂತರ್ ರಾಷ್ಟ್ರೀಯ ಖ್ಯಾತಿಯ ಪಾರಸಜಿ ಜೈನ್ (ಶಿರಡಿ) ಹಾಗೂ ಅವರ ತಂಡದಿಂದ ನಡೆದ ಸಂಗೀತ ಕಾರ್ಯಕ್ರಮವು ಸಾಯಿಬಾಬಾನ ಸದ್ಭಕ್ತರು ಬಾಬಾನ ಗುಣಗಾನದಲ್ಲಿ ಮಿಂದೆಳೆಯುವಂತೆ ಮಾಡಿತು.
ಜೈ ಜೈ ಸಾಯಿ ರಾಮ, ಬೋಲೋ ಸಾಯಿ ರಾಮ, ಕರುಣಾ ಭರಿ, ಸಂಕಟ ಹರಿ, ಸಾಯಿ ರಾಮ
ಬಚ್ಚೋಕೋ ಪಾಲನ್ ಕರನಾ, ಜೋ ಸಾಯಿ ಚರಣಮೇ ಆಯಿ, ಮಂದಿರ ಮಸೀಜ್ ಗಿರಿಜಾ ಗರ್, ಚಾಯೋ ಗುರುದ್ವಾರ ಹೋ, ಪರಮ ಪಿತಾ ತೋ ಎಕ್ ಹೈ, ಸಬಕಾ ಮಾಲೀಕ್ ಎಕ್ ತೋ ಎಕ್ ಹೈ, ಮನ್ ಭೀ ತೇರಾ, ಧನ್ ಬೀ ತೇರಾ, ಪತ್ತರ್ ಪತ್ತರ್, ಹೀಗೆ ಮೂರು ಗಂಟೆಗಳ ಕಾಲ ನಿರಂತರವಾಗಿ ಸಾಯಿಬಾಬಾರವರ ಮೇಲೆ ಹತ್ತು ಹಲವು ಹಾಡುಗಳನ್ನು ಪ್ರಸ್ತುತಪಡಿಸಿ, ಸಂಗೀತಾಸಕ್ತರ ಮನತಣಿಸಿದರು. ಇದರಿಂದಾಗಿ ಕೆಲ ಕಾಲ ಶಿರಡಿ ಸಾಯಿಬಾಬಾನ ಸನ್ನಿಧಿಯಲ್ಲಿಯೇ ಕುಳಿತು ಧ್ಯಾನಿಸುವಂತೆ ವಾತವರಣ ಕಂಡು ಬಂದಿತು. ಅಲ್ಲದೆ, ಅಲ್ಲಿ ಒಂದು ಹೊಸ ಸಂಗೀತ ಲೋಕವನ್ನೇ ಅನಾವರಣಗೊಳಿಸುವಂತೆ ಮಾಡಿತು.
ಸಾಯಿ ಭಜನಗೆ ಲಕ್ನೋದ ಪೂಜಾ ಮಿಶ್ರಾ, ಶಿರಡಿಯ ರಾಹುಲ್ ಸಿಸೋಡಿಯಾ, ಕಿಶೋರ್ ಕಾಕ್ರೆ, ಬಿಲ್ಲು ಸಚ್ಚಿದೇವ ಅವರು ಸಾಥ್ ನೀಡಿದರು. ಅವರು ಕೂಡ ಬಾಬಾನ ಕುರಿತು ಹಲವು ಸುಶ್ರಾವ್ಯ ಹಾಡುಗಳನ್ನು ಪ್ರಸ್ತುತಪಡಿಸಿ ನೆರೆದ ಸದ್ಭಕ್ತರನ್ನು ಕುಣಿದು ಕುಪ್ಪಳಿಸುವಂತೆ ಮಾಡುವ ಮೂಲಕ ಎಲ್ಲನ ಗಮನ ಸೆಳೆದದ್ದು ವಿಶೇಷವಾಗಿತ್ತು.
ಇದಕ್ಕೂ ಮುನ್ನ ನಡೆದ ವೇದಿಕೆ ಕಾರ್ಯಕ್ರಮವನ್ನು ಮಾಜಿ ಮೇಯರ್ ಪೂಣರ್ಾ ಪಾಟೀಲ ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ಧಾರವಾಡದ ಸಾಯಿಬಾಬಾ ಮಂದಿರ ಶಿರಡಿ ಮಾದರಿಯಲ್ಲಿಯೇ ಅಭಿವೃದ್ಧಿ ಹೊಂದುತ್ತಿರುವುದು ಸಂತಸದ ಸಂಗತಿಯಾಗಿದೆ. ಇಲ್ಲಿಯ ಸಾಯಿ ಬಾಬಾನ ಸನ್ನಿಧಿ ಸದಾ ಜಾಗೃತವಾಗಿದ್ದು, ಇಷ್ಟಾರ್ಥ ಸಿದ್ಧಿಗಳನ್ನು ನೆರವೇರಿಸುತ್ತಿದೆ. ಹೀಗಾಗಿ ಧಾಮರ್ಿಕ ವಿಧಿ ವಿಧಾನಗಳು, ಪೂಜಾ ಕೈಂಕರ್ಯಗಳು ಭಕ್ತರಿಗೆ ಮುದ ನೀಡುತ್ತಿವೆ ಎಂದರು.
ಮಹಾನಗರ ಪಾಲಿಕೆ ಮಾಜಿ ಸದಸ್ಯ ವಿಜಯಾನಂದ ಶೆಟ್ಟಿ ಅವರು ಮುಖ್ಯಅತಿಥಿಯಾಗಿ ಆಗಮಿಸಿ ಮಾತನಾಡಿ, ಧಾರವಾಡದ ಶಿರಡಿ ಸಾಯಿಬಾಬಾ ಮಂದಿರವು ದಿನದಿಂದ ದಿನಕ್ಕೆ ಹೆಚ್ಚು ಪ್ರಸಿದ್ಧಿಯಾಗುತ್ತಿದೆ. ಹುಬ್ಬಳ್ಳಿ-ಧಾರವಾಡದ ಅವಳಿನಗರದ ಜನತೆಯ ನೆಚ್ಚಿನ ತಾಣವಾಗಿ ರೂಪುಗೊಂಡಿದೆ. ಗುರುಪೂಣರ್ಿಮೆಯ ಸಂದರ್ಭದಲ್ಲಿ ಸಾಯಿ ಸದ್ಭಕ್ತರಿಗೆ ಸಕಲ ಸಂಪತ್ತು ದೊರೆಯಲಿ ಎಂದು ಹಾರೈಸಿದರು.
ಇದರ ಅಧ್ಯಕ್ಷತೆಯನ್ನು ಶಿರಡಿ ಸಾಯಿಬಾಬಾ ಸಂಸ್ಥೆಯ ಅಧ್ಯಕ್ಷ ಮಹೇಶ ಶೆಟ್ಟಿ ವಹಿಸಿದ್ದರು. ಬಳಿಕ ಅಂತರ್ ರಾಷ್ಟ್ರೀಯ ಖ್ಯಾತಿಯ ಪಾರಸಜಿ ಜೈನ್ (ಶಿರಡಿ) ಅವರಿಗೆ ಶಿರಡಿ ಸಾಯಿಬಾಬಾ ಸಂಸ್ಥೆಯ ವತಿಯಿಂದ ಸಂಸ್ಥೆಯ ಅಧ್ಯಕ್ಷರಾದ ಮಹೇಶ ಶೆಟ್ಟಿ ಅವರು ಸಾಯಿಬಾಬಾರವರ ಸ್ಮರಣಿಕೆ ನೀಡಿ ಸನ್ಮಾನಿಸಿ ಗೌರವಿಸಿದರು.
ಶಿರಡಿ ಸಾಯಿಬಾಬಾ ಸಂಸ್ಥೆಯ ಕಾರ್ಯದಶರ್ಿ ಗುರುಪಾದಯ್ಯ ಹೊಂಗಲ್ ಮಠ, ಉಪಾಧ್ಯಕ್ಷ ಉದಯ ಶೆಟ್ಟಿ, ಖಜಾಂಚಿ ಕಿರಣ ಶಹಾ, ಉಪಕಾರ್ಯದಶರ್ಿ ನಾರಾಯಣ ಕದಂ, ಸಮಿತಿ ಸದಸ್ಯರಾದ ಟಿ.ಟಿ. ಚವ್ಹಾಣ, ಭಾಸ್ಕರ್ ರಾಯ್ಕರ್, ಸದಸ್ಯರಾದ ಸಂತೋಷ ಮಹಾಲೆ, ಅಮೃತ ನರೇಂದ್ರ, ಪ್ರದೀಪ ಕಕ್ಕಳ, ದಿನೇಶ ಅಡ್ಯಂತಾಯ, ಸಂತೋಷ ಮಿಕ್ಕಲಿ, ರಮೇಶ ನಾರಾಯಣಕರ, ಟಿ,ಟಿ. ಚವ್ಹಾಣ, ಸರೋಜನಿ ಕೊಟಬಾಗಿ, ಭಾಸ್ಕರ ರಾಯ್ಕರ, ಅಮೃತ ನರೇಂದ್ರ, ವಿಪಿನ್ನಂದ ಶೆಟ್ಟಿ, ಶಿವಯೋಗಿ ಬೆಣ್ಣಿ, ವಿಜಯ ಲಾಡ್, ಭಾಸ್ಕರ್ ಮಾನೆ, ಸೌರಭ ಸಳಗಾಂವಕರ್, ರಾಜೇಶ್ವರಿ ನರೇಂದ್ರ, ರತ್ನಾ ನಂದೆಪ್ಪನವರ, ಜಯಶ್ರೀ ಶಿವಪೂಜಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.