ಬೆಟಗೇರಿ ಲಕ್ಷ್ಮೀದೇವಿ ಜಾತ್ರಾಮಹೋತ್ಸವ ಸಂಪನ್ನ
Betageri Lakshmi Devi Festival is a success
ಬೆಟಗೇರಿ ಲಕ್ಷ್ಮೀದೇವಿ ಜಾತ್ರಾಮಹೋತ್ಸವ ಸಂಪನ್ನ
ಬೆಟಗೇರಿ 29: ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಲಕ್ಷ್ಮೀದೇವಿ ಜಾತ್ರಾಮಹೋತ್ಸವ ಸೋಮವಾರ ಅ.27 ಮತ್ತು ಮಂಗಳವಾರ ಅ.28ರಂದು ಸಂಭ್ರಮದಿಂದ ನಡೆಯಿತು. ಸೋಮವಾರ ಅ.27 ರಂದು ಬೆಳಗ್ಗೆ, ಸಂಜೆ 6ಗಂಟೆಗೆ ಇಲ್ಲಿಯ ಲಕ್ಷ್ಮೀದೇವಿಯ ಗದ್ಗುಗೆಗೆ ಪೂಜೆ, ನೈವೇದ್ಯ ಸಮರ್ಿಸುವ, ದೇವರನ್ನು ಗದ್ಗುಗೆಗೊಳಿಸುವ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.
ಮಂಗಳವಾರ ಅ.28ರಂದು ಬೆಳಗ್ಗೆ 6ಗಂಟೆಗೆ ಲಕ್ಷ್ಮೀದೇವಿಯ ಗದ್ಗುಗೆಗೆ ಮಹಾಪೂಜೆ, ಮಹಾಭಿಷೇಕ, ನೈವೇದ್ಯ ಸಮರ್ಿಸುವ, ಲಕ್ಷ್ಮೀದೇವಿಯ ಆರಾಧನೆ, ಸುಮಂಗಲೆಯರಿಂದ ಶ್ರೀದೇವಿಗೆ ಉಡಿ ತುಂಬುವುದು, ವಿಶೇಷ ಪೂಜೆ, ದೀಪೋತ್ಸವ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಪುರ ಜನರಿಂದ ನಡೆದ ಬಳಿಕ ಗ್ರಾಮದ ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿ ಉತ್ಸವ ಜರುಗಿ, ಮಹಾಪ್ರಸಾದದ ನಂತರ ಜಾತ್ರಾಮಹೋತ್ಸವ ಸಂಪನ್ನಗೊಂಡಿತು.
ಜಾತ್ರಾಮಹೋತ್ಸವ ಆಚರಣಾ ಸಮಿತಿ ಸಂಚಾಲಕ ರಾಮಣ್ಣ ಬಳಿಗಾರ, ಈರಯ್ಯ ಹಿರೇಮಠ, ಸಂಗಯ್ಯ ಹಿರೇಮಠ, ಬಸವರಾಜ ಪಣದಿ, ಲಕ್ಷ್ಮಣ ಚಂದರಗಿ, ಭರಮಪ್ಪ ಪೂಜೇರಿ, ಸ್ಥಳೀಯ ಹಾಗೂ ಸುತ್ತಲಿನ ಹಳ್ಳಿಗಳ ರಾಜಕೀಯ ಮುಖಂಡರು, ಗಣ್ಯರು, ವಿವಿಧ ಸಂಘ, ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು, ಗ್ರಾಮದ ಲಕ್ಷ್ಮೀದೇವಿ ದೇವರ ಜಾತ್ರಾಮಹೋತ್ಸವ ಸಮಿತಿ ಸದಸ್ಯರು, ಅಪಾರ ಭಕ್ತರು ಜಾತ್ರಾಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 