ಸ್ಟಾರ್ಟ-ಅಪ್ಗಳಿಗೆ ಕನರ್ಾಟಕ ಅತ್ಯುತ್ತಮ ರಾಜ್ಯ: ಜೆ. ನಾಗೇಶ

ಧಾರವಾಡ 14: ಸ್ಟಾರ್ಟ-ಅಪ್ಗಳಿಗೆ ಕನರ್ಾಟಕ ಅತ್ಯುತ್ತಮ ರಾಜ್ಯ. ಭಾರತದಲ್ಲಿ ಸ್ಟಾರ್ಟ-ಅಪ್ ಅಳವಡಿಸಿದ ಮೊದಲನೇ ರಾಜ್ಯ ಕನರ್ಾಟಕ ಎಂದು ಕನರ್ಾಟಕ ಸರಕಾರ ಇಂಡಸ್ಟ್ರೀಸ್ ಮತ್ತು ವಾಣಿಜ್ಯ ಇಲಾಖೆ ಜಂಟಿ ನಿದರ್ೇಶಕ ಜೆ. ನಾಗೇಶ ಹೇಳಿದರು.

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅಭಿಯಾಂತ್ರಿಕ ಹಾಗೂ ತಾಂತ್ರಿಕ ಮಹಾವಿದ್ಯಾಲಯದಲ್ಲಿ 13 ಮತ್ತು 14ರಂದು ಕನರ್ಾಟಕ ಸರಕಾರ, ಐಟಿಬಿಟಿ ವಿಭಾಗ ಮತ್ತು ಎಸ್ & ಟಿ & ಕೆ-ಟೆಕ್ ಇನೋವೇಷನ್ ಹಬ್ ಸಹಭಾಗಿತ್ವದೊಂದಿಗೆ ಹಮ್ಮಿಕೊಳ್ಳಲಾಗಿದ್ದ ಎರಡು ದಿನಗಳ ಕಾಯರ್ಾಗಾರ ಹಾಗೂ ಇಂಟರ್ ಕಾಲೇಜ ಐಟಿ ಸ್ಪಧರ್ೆಯನ್ನು "ಸ್ಪಾಕರ್ಾಥಾನ್-18" ಎಂಬ ಶೀಷರ್ಿಕೆಯ ಸ್ಟಾರ್ಟ-ಅಪ್ ಕಾಂಟೆಸ್ಟ ಕಾಯರ್ಾಗಾರಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಅವರು ಮಾತನಾಡುತ್ತಿದ್ದರು.

ಕಾಯರ್ಾಗಾರದ ಉದ್ದೇಶವನ್ನು ವಿವರಿಸಿದರು. ರೊಬೊಟಿಕ್ಸ್ ಮತ್ತು ಎಐ ಭವಿಷ್ಯದಲ್ಲಿ ಮಾನವನನ್ನು ಹೇಗೆ ಬದಲಾಯಿಸುತ್ತವೆ ಎಂದು ತಿಳಿಸಿದರು. 

ರಕ್ಷಿತ ಹೆಬ್ಬಾರ ಇವರ ಸ್ವಾಗತ ಗೀತೆ ಹಾಡಿದರು. ಪ್ರೊ. ವ್ಹಿ.ಕೆ.ಪರ್ವತಿ ಸಭೆಯನ್ನು ಸ್ವಾಗತಿಸಿದರು. ಕಾಲೇಜಿನ ಪ್ರಾಂಶುಪಾಲ  ಡಾ. ಎಸ್.ಬಿ.ವಣಕುದರೆ ಇವರು ಯುವ ವಿದ್ಯಾಥರ್ಿಗಳನ್ನು ಉದ್ಯಮಶೀಲತೆಯಲ್ಲಿ ತೊಡುಗುವಂತೆ ಪ್ರೋತ್ಸಾಹಿಸಿದರು. ಉದ್ಯಮದಲ್ಲಿ ಇರುವ ಕಷ್ಟಗಳು ಹಾಗೂ ಅವುಗಳಿಂದ ಹೊರಬರಲು ಬೇಕಾದ ಧೈರ್ಯದ ಬಗ್ಗೆ ಮಾತನಾಡಿದರು. 

ಧಾರವಾಡ ಎಸ್.ಡಿ.ಎಂ.ಇ. ಸೊಸೈಟಿ ಸೆಕ್ರೆಟರಿ ವ್ಹಿ. ಜೀವಂಧರ ಕುಮಾರ ಇವರು ಕಾಲೇಜಿನಲ್ಲಿ 3 ಸ್ಟಾರ್ಟ-ಅಪ್ಗಳನ್ನು ಪ್ರಾರಂಭಿಸಿದ್ದು ಮತ್ತು ಇನ್ನೂ 3 ಸ್ಟಾರ್ಟ-ಅಪ್ಗಳನ್ನು ಪ್ರಾರಂಭಿಸುವ ಬಗ್ಗೆ ತಿಳಿಸಿದರು. ಭಾಗವಹಿಸಿದವರು ಸ್ಪಾರ್ಕಥಾನ್ ಕಾಯರ್ಾಗಾರವನ್ನು ತಮ್ಮ ಜ್ಞಾನವನ್ನು ವೃದ್ಧಿಸಿಕೊಳ್ಳಲು ಹಾಗೂ ಉದ್ಯಮಶೀಲತೆ ಕೌಶಲ್ಯವನ್ನು ಸುಧಾರಿಸಲು ಬಳಸಿಕೊಳ್ಳಬೇಕು. ಸ್ಟಾರ್ಟ-ಅಪ್ ಬೆಳೆಯಲು ಹಾಗೂ ನಿರ್ವಹಣೆಗೆ ಬೇಕಾದ ಪರಿಸರವನ್ನು ರಚಿಸಲು ಮ್ಯಾನೇಜಮೆಂಟ್ ಬಯಸಿದ ಬಗ್ಗೆ ತಿಳಿಸಿದರು. 

ಕಾಯರ್ಾಗಾರದಲ್ಲಿ ಎನ್.ಎನ್.ಎ. ಯಿಂದ ಮಾಸ್ಟರ್ ಟ್ರೇನರ್ ಆಗಿರುವ ಜಗನ್ನಾಥನ್ ಎಸ್. ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು. ಸ್ಟಾರ್ಟ-ಅಪ್ಗಾಗಿ ಬೇಕಾದ ಕಲ್ಪನೆಯನ್ನು ಆಯ್ಕೆ ಮಾಡಲು ಒತ್ತು ನೀಡಿದರು. ಅದನ್ನು ಕಾರ್ಯರೂಪಕ್ಕೆ ಹೇಗೆ ತರುವದು ಹಾಗೂ ಅದನ್ನು ಉದ್ಯಮವನ್ನಾಗಿ ಹೇಗೆ ಪರಿವತರ್ಿಸುವದು ಎಂಬುದನ್ನು ವಿವರಿಸಿದರು. 

ಸ್ಪಾರ್ಕಥಾನ್-18 -ಇಂಟರ್-ಕಾಲೇಜು ಐಟಿ ಸ್ಪಧರ್ೆ ಹಾಗೂ ಕಾಯರ್ಾಗಾರವು ಸೃಜನಾತ್ಮಕ ಹಾಗೂ ಪ್ರಗತಿಪರರಿಗಾಗಿದೆ.

ಡಾ. ಜಗದೀಶ ಡಿ. ಪೂಜಾರಿ, ಡಾ. ಸತೀಶ ಎಸ್. ಬೈರಣ್ಣವರ, ಶ್ರೀನಾಥ ಎಸ್. ಬೆಟಗೇರಿ (ಪ್ರಾದೇಶಿಕ ಸಂಯೋಜಕರು, ಐಟಿ-ಬಿಟಿ), ಡಾ. ಎಸ್.ಆರ್.ಬಿರಾದಾರ, ಡಾ. ರಾಜಶೇಖರಪ್ಪಾ, ಸುನೀಲ ಮನಸೂರ ಹಾಗೂ ಮಾಹಿತಿ ತಂತ್ರಜ್ಞಾನ ವಿಭಾಗದ ಇತರ ಉಪನ್ಯಾಸಕರು ಉಪಸ್ಥಿತರಿದ್ದರು. ಅನುಷಾ ನಿರೂಪಿಸಿದರು. ಡಾ. ಕೆ.ಗೋಪಿನಾಥ ಇವರು ವಂದಿಸಿದರು.

ವಿವಿಧ ಜಿಲ್ಲೆಗಳ ಇಂಜಿನೀಯರ್ ಕಾಲೇಜುಗಳಿಂದ ಸುಮಾರು 80 ವಿದ್ಯಾಥರ್ಿಗಳು ಭಾಗವಹಿಸಿದ್ದರು.