ಬೆಂಗಳೂರು,ಫೆ.29 ; ಎಲ್ಲಾ ಮನೆಗಳು ಹಾಗೂ ಅಪಾರ್ಟ್‌ಮೆಂಟ್ ಗಳ ಮೇಲೆ ಸೌರ ಫಲಕ ಅಳವಡಿಕೆ ಉತ್ತಮ ಕ್ರಮ, ಇಂಥ ಪರಿಸರ ಸ್ನೇಹಿ ನಡೆ ಎಲ್ಲರಿಗೂ ಮಾದರಿ ಎಂದು ಉಪಮುಖ್ಯಮಂತ್ರಿ ಡಾ.ಅಶ್ವತ್ಥ ನಾರಾಯಣ ತಿಳಿಸಿದ್ದಾರೆ.
ಮಲ್ಲೇಶ್ವರದ ರಿನೇನಾಸ್ಸ್ ಅಪಾರ್ಟ್‌ಮೆಂಟ್ ನಿವಾಸಿಗಳು ಅಳವಡಿಸಿರುವ 45 ಕಿ.ಮೀ.ವ್ಯಾಟ್ ಸಾಮರ್ಥ್ಯದ ಸೌರ ಫಲಕವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.
ಖಾಸಗಿ ವಸತಿ ಸಮುಚ್ಛಯದಲ್ಲಿ ನಿರ್ಮಿಸಿರುವ ರೂಫ್ ಟಾಪ್ ಸೋಲಾರ್ ಪ್ಯಾನೆಲ್ ಪರಿಸರ ಸ್ನೇಹುಯಾಗಿದ್ದು, ಇತರರಿಗೂ ಮಾದರಿಯಾಗಿದೆ.ರಿನಾಸಾನ್ಸ್ ಅಪಾರ್ಟ್‌ಮೆಂಟ್ ನವರು ಈ ಉತ್ತಮ ಪ್ರಯತ್ನ ಮಾಡಿದ್ದಾರೆ. ಸ್ಥಳದ ಉತ್ತಮ ಬಳಕೆ ಮಾಡಲಾಗಿದೆ.
ಇಲ್ಲಿನ ನಿವಾಸಿಗಳೇ ಬಂಡವಾಳ ಹೂಡಿ ನಿರ್ಮಿಸಿರುವ ಸೌರ ಫಲಕ ಇದಾಗಿದ್ದು, ನಗರದಲ್ಲೇ ಇಂಥ ಮೊದಲ ಪ್ರಯತ್ನ ಇದು ಎಂದರು.
ಸೌರ ಫಲಕ ಅಳವಡಿಕೆ ಕುರಿತ ಕಾನೂನು ಈ ಹಿಂದೆ ದುರ್ಬಲವಾಗಿತ್ತು. ಹಾಗಾಗಿ ಈಗ ಬೇರೆಯವರು ಅಳವಡಿಕೆ ಮಾಡುವಂತಿಲ್ಲ. ಹಾಗಾಗಿದ್ದರೆ ಬಳಕೆದಾರರ ಖರ್ಚು ಕಡಿಮೆ ಆಗುತ್ತಿತ್ತು. ಆದರೆ ಈ ಪ್ರಯತ್ನ ಶ್ಲಾಘನೀಯ ಎಂದು ಅವರು ಹೇಳಿದರು.